ಕ್ವಿಂಟನ್ ಡಿಕಾಕ್(114), ವ್ಯಾನ್ ದರ್ ದುಸೇನ್(133) ಶತಕದ ಅಬ್ಬರ ಹಾಗೂ ಕೇಶವ್ ಮಹಾರಾಜ್(4/46), ಯಾನ್ಸನ್(3/31) ಅವರ ಅದ್ಭುತ ಬೌಲಿಂಗ್ ನೆರವಿನಿಂದ ನ್ಯೂಜಿ಼ಲೆಂಡ್ ವಿರುದ್ಧದ ಪಂದ್ಯದಲ್ಲಿ ಸೌತ್ ಆಫ್ರಿಕಾ 190 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಜಯದೊಂದಿಗೆ ಸೌತ್ ಆಫ್ರಿಕಾ ತಂಡ ಪಾಯಿಂಟ್ಸ್ ಟೇಬಲ್‌ನಲ್ಲಿ ನಂ1 ಸ್ಥಾನಕ್ಕೇರಿದೆ.
ಮಹಾರಾಷ್ಟ್ರದ ಪುಣೆಯಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರು ಮೊದಲು ಬ್ಯಾಟ್ ಮಾಡುವ ಅವಕಾಶ ಪಡೆದ ಸೌತ್ ಆಫ್ರಿಕಾ, ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿತು. ಡಿಕಾಕ್(114) ಹಾಗೂ ದುಸೇನ್(133) ಶತಕದ ನೆರವಿನಿಂದ 50 ಓವರ್‌ಗಳಲ್ಲಿ 357/4 ರನ್‌ಗಳ ದೊಡ್ಡಮೊತ್ತ ಪೇರಿಸಿತು. ಈ ಟಾರ್ಗೆಟ್ ಚೇಸ್ ಮಾಡಿದ ನ್ಯೂಜಿ಼ಲೆಂಡ್ ಪ್ರಮುಖ ಬ್ಯಾಟ್ಸ್‌ಮನ್‌ಗಳ ವೈಫಲ್ಯದಿಂದಾಗಿ 35.3 ಓವರ್‌ಗಳಲ್ಲಿ 167 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಸೋಲಿನ ಆಘಾತ ಕಂಡಿತು. ಈ ಗೆಲುವಿನ ಮೂಲಕ ಸೌತ್ ಆಫ್ರಿಕಾ ತಂಡ ಪ್ರಸಕ್ತ ವಿಶ್ವಕಪ್‌ನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸಿತು.
ಡಿಕಾಕ್-ದುಸೇನ್ ಅಬ್ಬರ:
ಮೊದಲು ಬ್ಯಾಟಿಂಗ್ ಆರಂಭಿಸಿದ ಸೌತ್ ಆಫ್ರಿಕಾ ಮೊದಲ ವಿಕೆಟ್‌ಗೆ 38 ರನ್‌ಗಳ ಸಾಧಾರಣ ಆರಂಭ ಕಂಡಿತು. ಆರಂಭಿಕನಾಗಿ ಬಂದ ನಾಯಕ ತೆಂಬಾ ಬವುಮಾ(24) ರನ್‌ಗಳಿಸಿ ಪೆವಿಲಿಯನ್‌ಗೆ ಸೇರಿದರು. ಆದರೆ ಬಳಿಕ ಜೊತೆಯಾದ ಕ್ವಿಂಟನ್ ಡಿಕಾಕ್(114 ರನ್, 116 ಬಾಲ್, 10 ಬೌಂಡರಿ, 3 ಸಿಕ್ಸ್) ಹಾಗೂ ವ್ಯಾನ್ ದರ್ ದುಸೇನ್(133 ರನ್, 118 ಬಾಲ್, 9 ಬೌಂಡರಿ, 5 ಸಿಕ್ಸ್) ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ನ್ಯೂಜಿ಼ಲೆಂಡ್ ಬೌಲಿಂಗ್ ದಾಳಿಯನ್ನ ಸಮರ್ಥವಾಗಿ ಎದುರಿಸಿದ ಇವರಿಬ್ಬರು ಅದ್ಭುತ ಶತಕ ಸಿಡಿಸಿ ಮಿಂಚಿದರು. ಅಲ್ಲದೇ 2ನೇ ವಿಕೆಟ್‌ಗೆ ಬರೋಬ್ಬರಿ 200 ರನ್‌ಗಳ ಜೊತೆಯಾಟದ ಮೂಲಕ ತಂಡಕ್ಕೆ ಆಸರೆಯಾದರು. ಇವರಿಬ್ಬರು ಔಟಾದ ನಂತರ ಕಣಕ್ಕಿಳಿದ ಡೇವಿಡ್ ಮಿಲ್ಲರ್(50 ರನ್, 30 ಬಾಲ್, 2 ಬೌಂಡರಿ, 4 ಸಿಕ್ಸ್) ಸ್ಪೋಟಕ ಅರ್ಧಶತಕ ಸಿಡಿಸಿ ಮಿಂಚಿದರು. ಉಳಿದಂತೆ ಕ್ಲಾಸೆನ್ 15* ಹಾಗೂ ಮಾರ್ಕ್ರಂ 6* ರನ್‌ಗಳಿಸಿ ತಂಡದ ಮೊತ್ತವನ್ನ 357ಕ್ಕೆ ಏರಿಸಿದರು. ನ್ಯೂಜಿ಼ಲೆಂಡ್ ಪರವಾಗಿ ಟಿಮ್ ಸೌಥಿ 2 ವಿಕೆಟ್ ಪಡೆದರೆ. ಬೋಲ್ಟ್ ಹಾಗೂ ನೀಶಮ್ ತಲಾ 1 ವಿಕೆಟ್ ಪಡೆದರು.
ಮಹಾರಾಜ್-ಯಾನ್ಸನ್ ಮಿಂಚು:
ಸೌತ್ ಆಫ್ರಿಕಾ ನೀಡಿದ 358 ರನ್‌ಗಳ ಬೃಹತ್ ಮೊತ್ತವನ್ನ ಬೆನ್ನತ್ತಿದ ನ್ಯೂಜಿ಼ಲೆಂಡ್ ಬ್ಯಾಟಿಂಗ್ ವೈಫಲ್ಯ ಕಂಡಿತು. ಕೇಶವ್ ಮಹಾರಾಜ್(4/46) ಹಾಗೂ ಮಾರ್ಕೋ ಯಾನ್ಸನ್(3/31) ಅವರ ಬೌಲಿಂಗ್ ದಾಳಿಗೆ ತತ್ತರಿಸಿದ ಕಾನ್ವೆ(2), ರವೀಂದ್ರ(9), ಮಿಚೆಲ್(24) ಲಾಥಮ್(4), ವಿಲ್ ಯಂಗ್(33)ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶಿಸುವಲ್ಲಿ ವಿಫಲರಾದರು. ಮಧ್ಯಮ ಕ್ರಮಾಂಕದಲ್ಲಿ ಬಂದ ಗ್ಲೆನ್ ಫಿಲಿಪ್ಸ್(60 ರನ್, 50 ಬಾಲ್, 4 ಬೌಂಡರಿ, 4 ಸಿಕ್ಸ್) ಏಕಾಂಗಿ ಹೋರಾಟದ ಮೂಲಕ ಆಫ್ರಿಕಾ ಬೌಲರ್‌ಗಳ ವಿರುದ್ಧ ಸ್ವಲ್ಪಮಟ್ಟಿನ ಪ್ರತಿರೋಧ ತೋರಿದರು ಪ್ರಯೋಜನವಾಗಲಿಲ್ಲ. ಪ್ರಮುಖ ಬ್ಯಾಟರ್‌ಗಳ ವೈಫಲ್ಯ ನ್ಯೂಜಿ಼ಲೆಂಡ್ ಸೋಲಿಗೆ ಪ್ರಮುಖ ಕಾರಣವಾಯಿತು. ಸೌತ್ ಆಫ್ರಿಕಾ ಪರ ಮಹಾರಾಜ್ 4, ಯಾನ್ಸನ್ 3, ಕಾಟ್ಜಿಯಾ 2, ರಬಾಡ 1 ವಿಕೆಟ್ ಪಡೆದರು.
RSA v NZ, South Africa, New Zealand, CWC 2023, World Cup