ವಾಂಡರರ್ಸ್ ನಲ್ಲಿ ವಂಡರ್ ಮಾಡುತ್ತಾ ಟೀಮ್ ಇಂಡಿಯಾ..? Team India saaksha tv
ಸೆಂಚೂರಿಯನ್ ನಲ್ಲಿ ಐತಿಹಾಸಿಕ ಜಯ ಸಾಧಿಸಿದ ಟೀಂ ಇಂಡಿಯಾ ಇದೀಗ ವಾಂಡರರ್ಸ್ ನಮಲ್ಲಿ ವಂಡರ್ ಮಾಡಲು ಪ್ಲಾನ್ ಮಾಡಿಕೊಂಡಿದೆ.
ಆ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಟೆಸ್ಟ್ ಸರಣಿ ಗೆಲುವಿನ ಕನಸು ಕಾಣುತ್ತಿದೆ.
ಟೀಮ್ ಇಂಡಿಯಾದ ಬ್ಯಾಟಿಂಗ್ ಬಗ್ಗೆ ಸ್ಪಷ್ಟವಾಗಿ ಹೇಳುವಂತಿಲ್ಲ.
ಮೊದಲ ಪಂದ್ಯದ ಮೊದಲ ಇನ್ನಿಂಗ್ಸ್ನಲ್ಲಿ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಅವರ ಕೊಡುಗೆಯನ್ನು ಬಿಟ್ಟರೆ ಬೇರೆಯಾವ ಆಟಗಾರನೂ ಹೇಳಿಕೊಳ್ಳುವ ಸಾಧನೆ ಮಾಡಲಿಲ್ಲ.
ಎರಡನೇ ಇನ್ನಿಂಗ್ಸ್ ನಲ್ಲೂ ಟೀಂ ಇಂಡಿಯಾ ಬ್ಯಾಟಿಂಗ್ ವೈಫಲ್ಯ ಅನುಭವಿಸಿತ್ತು.
ಎರಡನೇ ಟೆಸ್ಟ್ ಪಂದ್ಯದಲ್ಲಿ ಕೆ.ಎಲ್. ರಾಹುಲ್ ಮತ್ತು ಮಯಾಂಕ್ ಅಗರ್ವಾಲ್ ಇನ್ನಿಂಗ್ಸ್ ಆರಂಭಿಸಲಿದ್ದಾರೆ.
ಚೇತೇಶ್ವರ ಪೂಜಾರಾ ಬದಲು ಹನುಮ ವಿಹಾಹಿ ಅಥವಾ ಶ್ರೇಯಸ್ ಅಯ್ಯರ್ಗೆ ಸ್ಥಾನ ನೀಡುವ ಸಾಧ್ಯತೆಗಳಿವೆ.
ವಿರಾಟ್ ಮತ್ತು ಅಜಿಂಕ್ಯಾ ರಹಾನೆ ಬ್ಯಾಟಿಂಗ್ ಬಲಕ್ಕೆ ಶಕ್ತಿ ನೀಡಲಿದ್ದಾರೆ. ರಿಷಬ್ ಪಂತ್ ಕೆಳ ಸರದಿಯಲ್ಲಿ ಬ್ಯಾಟ್ ಬೀಸಲಿದ್ದಾರೆ.
ಇನ್ನು ರವಿಚಂದ್ರನ್ ಅಶ್ವಿನ್, ಜಸ್ ಪ್ರಿತ್ ಬುಮ್ರಾ, ಮೊಹಮ್ಮದ್ ಶಮಿ, ಶಾರ್ದೂಲ್ ಥಾಕೂರ್ ಮತ್ತು ಮೊಹಮ್ಮದ್ ಸಿರಾಜ್ ಬೌಲಿಂಗ್ ಬ್ರಹ್ಮಾಸ್ತ್ರಗಳಾಗಿದ್ದಾರೆ.
ಇನ್ನುಎರಡನೇ ಪಂದ್ಯದಲ್ಲಿ ಸೋತಿರುವ ದಕ್ಷಿಣ ಆಫ್ರಿಕಾ ತಂಡದಲ್ಲಿ ಬದಲಾವಣೆ ಖಚಿತ.
ಯಾಕಂದರೇ ವಿಕೆಟ್ ಕೀಪರ್ ಕಮ್ ಬ್ಯಾಟರ್ ಕ್ವಿಂಟಾನ್ ಡಿ ಕಾಕ್ ಟೆಸ್ಟ್ ಗೆ ನಿವೃತ್ತಿ ಹೇಳಿದ್ದಾರೆ. ಹೀಗಾಗಿ ಇವರ ಬದಲು ಕೈಲ್ ವೆರಿನಮ್ ಆಡಬಹುದು.
ಸಂಭಾವ್ಯ ತಂಡಗಳು
ಟೀಮ್ ಇಂಡಿಯಾ
- ಕೆ.ಎಲ್. ರಾಹುಲ್, 2. ಮಯಾಂಕ್ ಅಗರ್ವಾಲ್, 3. ಚೇತೇಶ್ವರ ಪೂಜಾರಾ/ ಶ್ರೇಯಸ್ ಅಯ್ಯರ್/ ಹನುಮ ವಿಹಾರಿ, 4. ವಿರಾಟ್ ಕೊಹ್ಲಿ, 5. ಅಜಿಂಕ್ಯಾ ರಹಾನೆ, 6. ರಿಷಬ್ ಪಂತ್, 7. ಶಾರ್ದೂಲ್ ಥಾಕೂರ್, 8. ಆರ್. ಅಶ್ವಿನ್, 9. ಮೊಹಮ್ಮದ್ ಶಮಿ, 10. ಜಸ್ಪ್ರಿತ್ ಬುಮ್ರಾ, 11. ಮೊಹಮ್ಮದ್ ಸಿರಾಜ್
ದಕ್ಷಿಣ ಆಫ್ರಿಕಾ
- ಡೀನ್ ಎಲ್ಗರ್, 2. ಏಡಿಯನ್ ಮಾರ್ಕ್ ರಾಂ, 3. ಕೀಗಾನ್ ಪೀಟರ್ಸನ್, 4. ರಾಸಿ ವಾಂಡರ್ ಡ್ಯುಸನ್, 5. ತೆಂಬ ಬವುಮಾ, 6. ಕೈಲ್ ವೆರಿಮನ್, 7. ಜಾರ್ಜ್ ಲಿಂಡೆ, 8. ಕಗಿಸೋ ರಬಾಡ, 9, ಲುಂಗಿ ಎನ್ ಗಿಡಿ, 10. ವಿಯಾನ್ ಮುಲ್ಡರ್, 11. ಮಾರ್ಕೋ ಜಾನ್ಸನ್