ಕಡಿಮೆ ಅವಧಿಯಲ್ಲಿ ಟಾಲಿವುಡ್ ನಲ್ಲಿ ಸ್ಟಾರ್ ಹೀರೋಯಿನ್ ಆಗಿ ಬೆಳೆದ ನಟಿ ರಷ್ಮಿಕಾ ಮಂದಣ್ಣ.
ಪ್ರಸ್ತುತ ಸತತ ಸಿನಿಮಾಗಳ ಮೂಲಕ ಬ್ಯೂಸಿಯಾಗಿರುವ ರಶ್ಮಿಕಾ ಸದ್ಯ ಹಿಂದಿಯಲ್ಲಿ ನಟಿಸುತ್ತಿದ್ದಾರೆ.
ಅವರು ನಟಿಸಿರುವ ಸಿದ್ದಾರ್ಥ್ ಮಲ್ಹೋಥ್ರಾ ಜೊತೆ ನಟಿಸಿರುವ ಮಿಷನ್ ಮಜ್ನು ರಿಲೀಸ್ ಗೆ ಸಿದ್ಧವಾಗಿದೆ.
ಶೀಘ್ರದಲ್ಲಿಯೇ ಗುಡ್ ಬೈ ಕೂಡ ಪ್ರೇಕ್ಷಕರ ಮುಂದೆ ಬರಲಿದೆ.
ಸಿನಿಮಾ ಮಾತ್ರವಲ್ಲದೇ ಸೋಶೀಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವ ರಶ್ಮಿಕಾ, ಆಗಾಗ ಟ್ರೆಂಡಿ ಡ್ರೆಸ್ ಗಳನ್ನು ಧರಿಸುತ್ತಾ ಟ್ರೆಂಡ್ ಆಗುತ್ತಲೇ ಇರುತ್ತಾರೆ.
ಇದೆಲ್ಲದರ ನಡುವೆ ಜ್ಯೋತಿಷಿಯೊಬ್ಬರು ರಶ್ಮಿಕಾ ಜೀವನದ ಬಗ್ಗೆ ಶಾಕಿಂಗ್ ಭವಿಷ್ಯ ನುಡಿದಿದ್ದಾರೆ.
ಜಾತಕ ಅಧ್ಯಯನ ಮಾಡಿರುವ ವೇಣು ಸ್ವಾಮಿ ಹೇಳುವುದೇ ಬೇರೆ. ರಶ್ಮಿಕಾಗೆ ಅಪರೂಪದ ಯೋಗವೊಂದು ಇರುವ ಕಾರಣ ಅವರು ನಟಿಯಾಗಿ ಬಹಳ ಎತ್ತರಕ್ಕೆ ಏರುತ್ತಿದ್ದಾರಂತೆ. ಆದರೆ ಈ ಪ್ರಗತಿ ಹೆಚ್ಚು ದಿನ ಇರುವುದಿಲ್ಲ ಎಂದು ಹೇಳಿದ್ದಾರೆ..
ಯೂಟ್ಯೂಬ್ ಚಾನೆಲ್‌ಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಜ್ಯೋತಿಷಿ ವೇಣು ಸ್ವಾಮಿ. ರಶ್ಮಿಕಾ ಮಂದಣ್ಣ ಇದೀಗ ಟಾಪ್ ನಟಿ, ಒಂದು ಸಿನಿಮಾಕ್ಕೆ 6-7 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ..
ಆದರೆ ಅವರ ಈ ಸ್ಪೀಡು ಆದಷ್ಟು ಬೇಗ ತಗ್ಗಿಹೋಗುತ್ತದೆ. 2024 ರ ಬಳಿಕ ಅವರ ಕಾಲ ಮುಗಿಯುತ್ತದೆ, ಅವರಿಗೆ ಅವಕಾಶಗಳು ಕಡಿಮೆಯಾಗುತ್ತವೆ ಎಂದಿದ್ದಾರೆ.
ಜೊತೆಗೆ ಮೂವರು ನಟಿಯರ ಬೇಡಿಕೆ ತಗ್ಗುತ್ತೆ ಎಂದಿದ್ದಾರೆ.. ರಶ್ಮಿಕಾ ಮಂದಣ್ಣ, ಪೂಜಾ ಹೆಗ್ಡೆ ಮತ್ತು ಸಮಂತಾ. 2024 ರ ಬಳಿಕ ಈ ಮೂವರ ಬೇಡಿಕೆ ತೀವ್ರವಾಗಿ ಕಡಿಮೆಯಾಗುತ್ತದೆ ಆ ವೇಳೆಗೆ ಹೊಸ ನಾಯಕಿಯರು ಮೇಲ್ಪಂಕ್ತಿಗೆ ಬರುತ್ತಾರೆ. ಇವರು ಜಾಗ ಖಾಲಿ ಮಾಡುತ್ತಾರೆ ಎಂದಿದ್ದಾರೆ. ಅತಿ ಹೆಚ್ಚು ಕಾಲ ಟಾಪ್ ನಾಯಕಿಯಾಗಿ ಉಳಿದಿದ್ದು ನಯನತಾರಾ ಮಾತ್ರ, ಅವರ ಜಾತಕವೇ ಅಂಥಹದ್ದು ಆಕೆಗೆ ಸದಾ ರಾಜಯೋಗವೇ ಎಂದಿದ್ದಾರೆ.








