RSS ಬ್ಯಾನ್ ಬಗ್ಗೆ ಬೊಮ್ಮಾಯಿ ಹೇಳಿದ್ದೇನು ?
ಹುಬ್ಬಳ್ಳಿ : ಆರ್ ಎಸ್ ಎಸ್ ದೇಶಪ್ರೇಮಿಗಳ ಸಂಘಟನೆಯಾಗಿದೆ. ದೀನ ದಲಿತರಿಗೆ, ಬಡಮಕ್ಕಳಿಗೆ ಹಲವಾರು ಸಂಸ್ಥೆ ಕಟ್ಟಿದ್ದಾರೆ ಎಂದು ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಆರ್ ಎಸ್ ಎಸ್ ಬ್ಯಾನ್ ಹೇಳಿಕೆಗೆ ಹುಬ್ಬಳ್ಳಿಯಲ್ಲಿ ಮಾತನಾಡಿದ ಸಿಎಂ ಬೊಮ್ಮಾಯಿ, ಪಿಎಫ್ ಐ ಬ್ಯಾನ್ ಮಾಡಿರುವ ಬಗ್ಗೆ ಸಮರ್ಥನೆ ಮಾಡಿಕೊಳ್ಳಲು ಕಾಂಗ್ರೆಸ್ ನವರ ಹತ್ತಿರ ಏನೂ ಇಲ್ಲ.
ಅವರ ಬಳಿ ಯಾವುದೇ ಆಧಾರಗಳಿಲ್ಲ. ಈ ಹಿಂದೆ ಸಿದ್ದರಾಮಯ್ಯನವರೇ ಪಿಎಫ್ ಐ ಮೇಲಿನ ಕೇಸ್ ಗಳನ್ನು ವಜಾ ಮಾಡಿದ್ದರು.

ಆರ್ ಎಸ್ ಎಸ್ ದೇಶಪ್ರೇಮಿಗಳ ಸಂಘಟನೆಯಾಗಿದೆ. ದೀನ ದಲಿತರಿಗೆ, ಬಡ ಮಕ್ಕಳಿಗೆ ಹಲವಾರು ಸಂಸ್ಥೆ ಕಟ್ಟಿದ್ದಾರೆ.
ಪ್ರವಾದ ಮತ್ತು ಸಂಕಷ್ಟ ಎದುರಾದಾಗ ಆರ್ ಎಸ್ ಎಸ್ ಮುಂದೆ ನಿಂತು ಕೆಲಸ ಮಾಡಿದೆ.
ಇಂತಹ ದೇಶ ಪ್ರೇಮ ಸಂಘಟನೆಯನ್ನು ಬ್ಯಾನ್ ಮಾಡುವಂತೆ ಆಗ್ರಹಿ ಮಾಡುತ್ತಿರುವುದು ದುರ್ದೈವದ ಸಂಗತಿಯಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.








