`ಆರ್.ಎಸ್.ಎಸ್ ದೇಶಭಕ್ತರ ಮಹಾ ಪಡೆ ಕಟ್ಟಿದ ಬೃಹತ್ ಸಂಘಟನೆ’

1 min read
RSS Siddaramaiah

`ಆರ್.ಎಸ್.ಎಸ್ ದೇಶಭಕ್ತರ ಮಹಾ ಪಡೆ ಕಟ್ಟಿದ ಬೃಹತ್ ಸಂಘಟನೆ’

ಬೆಂಗಳೂರು : ಆರ್.ಎಸ್.ಎಸ್ ದೇಶಭಕ್ತರ ಮಹಾ ಪಡೆ ಕಟ್ಟಿದ ಒಂದು ನಿಷ್ಠಾವಂತ, ಸಮರ್ಪಿತ, ಬೃಹತ್ ಸಂಘಟನೆ ಎಂದು ರಾಜ್ಯ ಬಿಜೆಪಿಯ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.

ಸಿದ್ದರಾಮಯ್ಯನವರ ” ಆರ್ ಎಸ್ ಎಸ್ ಎನ್ನುವುದು ಜಾತಿ ಸಂಘಟನೆ. ಅವರು ತಾವು ದೇಶ ಪ್ರೇಮಿಗಳು ಅಂತಾರೆ. ಹಾಗಿದ್ದರೇ ಸ್ವಾತಂತ್ರ್ಯ ಹೋರಾಟಕ್ಕೆ ಅವರ ಕೊಡುಗೆ ಏನು. ಆರ್ ಎಸ್ ಎಸ್ ನಿಂದ ಯಾರೂ ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರಿಲ್ಲ ಎಂಬ ಟೀಕೆಗೆ ವಿಜಯೇಂದ್ರ ಟ್ವಿಟ್ಟರ್ ನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಟ್ವಿಟ್ಟರ್ ನಲ್ಲಿ ವಿಜಯೇಂದ್ರ, “ಮಾನ್ಯ ಸಿದ್ದರಾಮಯ್ಯನವರೇ, ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನಗೈದ ಸುಭಾಷ್ ಚಂದ್ರ ಬೋಸ್, ವೀರ್ ಸಾವರ್ಕರ್, ಸರ್ದಾರ್ ಪಟೇಲ್, ಲಾಲ್ ಬಹದ್ದೂರ್ ಶಾಸ್ತ್ರಿ, ಭಗತ್ ಸಿಂಗ್ ರಂತಹ ಮಹಾನ್ ದೇಶಭಕ್ತರನ್ನು ಸ್ಮರಿಸುವ ಸೌಜನ್ಯವಾಗಲಿ, ಐತಿಹಾಸಿಕ ಪ್ರಜ್ಞೆಯಾಗಲಿ ಇಲ್ಲದ ಕಾಂಗ್ರೆಸ್ ಹಾಗೂ ನಿಮಗೆ ಬಿಜೆಪಿ ಕುರಿತು ಮಾತನಾಡುವ ನೈತಿಕತೆ ಇಲ್ಲ.

RSS Siddaramaiah

ಆರ್.ಎಸ್.ಎಸ್ ದೇಶಭಕ್ತರ ಮಹಾ ಪಡೆ ಕಟ್ಟಿದ ಒಂದು ನಿಷ್ಠಾವಂತ, ಸಮರ್ಪಿತ, ಬೃಹತ್ ಸಂಘಟನೆ. ಅಖಂಡ ಭಾರತದ ನವನಿರ್ಮಾಣಕ್ಕಾಗಿ ಸಂಕಲ್ಪ ತೊಟ್ಟಿರುವ ತಪಸ್ವಿಗಳ ವೇದಿಕೆ, ದೇಶಸೇವೆಗೆ ಬದ್ಧವಾಗಿರುವ ಸ್ವಯಂಸೇವಕರ ಅದ್ವಿತೀಯ ಸಂಘಟನೆ. ಅದರ ಎತ್ತರಕ್ಕೆ ಏರಲಾಗದಿದ್ದರೂ ಅಡ್ಡಿಯಿಲ್ಲ, ನಿಮ್ಮ ಸ್ತರಕ್ಕೆ ಅದನ್ನು ಕುಗ್ಗಿಸುವ ಪ್ರಯತ್ನ ಬೇಡ ಎಂದು ಟೀಕಿಸಿದ್ದಾರೆ.

BC Patil
ಜಾಹೀರಾತು

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd