ಚಿಕ್ಕಬಳ್ಳಾಪುರ: ಆರ ಟಿಒ ಕಚೇರಿಯ ಬೀಗ ಮುರಿದು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ನಗರದ ಚಿತ್ರಾವತಿ ಬಳಿಯ ಆರ್‌ಟಿಒ ಕಚೇರಿಯ (Chikkaballapur RTO office)ಲ್ಲಿ ಈ ಘಟನೆ ನಡೆದಿದೆ.
ಒಳ ನುಗ್ಗಿರುವ ಖದೀಮರು ಕಚೇರಿಯಲ್ಲಿರುವ ಮೂರು ಕಂಪ್ಯೂಟರ್ (Computer) ಸಿಪಿಐ ಹಾಗೂ ಮಾನಿಟರ್ ಗಳನ್ನು ಕದ್ದು ಪರಾರಿಯಾಗಿದ್ದಾರೆ. ಮಧ್ಯರಾತ್ರಿ ವೇಳೆ ಕಚೇರಿ ಹಿಂಬಾಗಿಲಿನಿಂದ ನುಗ್ಗಿರುವ ಖದೀಮರು ಕಚೇರಿಯ ಬೀಗ ಕಟ್ ಮುರಿದು, ಕಂಪ್ಯೂಟರ್ ಗಳನ್ನು ಕಳ್ಳತನ ಮಾಡಿದ್ದಾರೆ ಎನ್ನಲಾಗಿದೆ.
ಕಚೇರಿಯಲ್ಲಿ ಇಬ್ಬರು ಹೊಂ ಗಾರ್ಡ್‍ಗಳನ್ನ ಭದ್ರತೆಗೆ ನಿಯೋಜನೆ ಮಾಡಿದ್ರೂ ಹೋಂ ಗಾರ್ಡ್‍ಗಳು ನಿದ್ದೆಗೆ ಜಾರಿದ್ದಾರೆ. ಇದನ್ನು ಗಮನಿಸಿದ ಖದೀಮರು ಒಳ ನುಗ್ಗಿ ದೋಚಿ ಪರಾರಿಯಾಗಿದ್ದಾರೆ. ವಿಷಯ ತಿಳಿದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಖದೀಮರು ಮುಸುಕು ವೇಷ ತೊಟ್ಟು ಒಳ ನುಗ್ಗಿದ್ದರು ಎಂದು ತಿಳಿದು ಬಂದಿದೆ.
ಕುಮಾರಸ್ವಾಮಿ ಮೊದಲು ತಮ್ಮ ರಾಜೀನಾಮೆಯ ಅಸಲಿ ಕಥೆ ಬಿಚ್ಚಿಡಲಿ: ನಿಮ್ಮ ಕುಟುಂಬ ನೈಸ್ ನಲ್ಲಿ ಎಷ್ಟು ಭೂಮಿ ಕಬಳಿಸಿದೆ? ಸೋಮಶೇಖರ್ ವಾಗ್ದಾಳಿ
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ರಾಜೀನಾಮೆ ಮತ್ತು ಸ್ಟಿಂಗ್ ಆಪರೇಷನ್ ಗಳ ಮಹಾ ಸಮರ ಶುರುವಾಗಿದೆ. ಸಿದ್ದರಾಮಯ್ಯ ಅವರನ್ನು ಸ್ಟಿಂಗ್ ಆಪರೇಷನ್ ಮೂಲಕ ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿದೆ...








