ರುಪಾಯಿ ಕುಸಿತ: 61 ಪೈಸೆ ಕುಸಿದು 83 ರ ಗಡಿ ದಾಟಿದೆ…
ಡಾಲರ್ ಎದುರು ಭಾರತೀಯ ರುಪಾಯಿ ನಿರಂತರವಾಗಿ ಕುಸಿತ ಕಾಣುತ್ತಿದೆ. ಬುಧವಾರದ ಮಾರುಕಟ್ಟೆಯಲ್ಲಿ ಭಾರತೀಯ ರೂಪಾಯಿ ಯುಎಸ್ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟದಲ್ಲಿ ಕ್ಲೋಸ್ ಆಗಿದೆ. 61 ಪೈಸೆ ಕುಸಿತದೊಂದಿಗೆ 83 ರುಪಾಯಿ ಮಟ್ಟದಲ್ಲಿ ಮುಕ್ತಾವಾಗಿದೆ.
ವಹಿವಾಟಿನ ಅಂತ್ಯದಲ್ಲಿ ರೂಪಾಯಿ ಮೌಲ್ಯ ಈ ಮಟ್ಟಕ್ಕೆ ತಲುಪಿರುವುದು ಇದೇ ಮೊದಲು. ಇದಕ್ಕೂ ಮುನ್ನ ಮಂಗಳವಾರ ಕೂಡ ಡಾಲರ್ ಎದುರು ರೂಪಾಯಿ ಮೌಲ್ಯ 83ರ ಗಡಿ ದಾಟಿತ್ತು. ಆದರೂ ಈ ಅಂಕಿ ವ್ಯವಹಾರದ ಸಮಯದಲ್ಲಿ ಮತ್ತು ನಂತರ ಚೇತರಿಕೆ ಕೂಡ ಬಂದಿತು. ಹಿಂದಿನ ವಹಿವಾಟಿನ ದಿನದಂದು ರೂಪಾಯಿ ಮೌಲ್ಯದಲ್ಲಿ 10 ಪೈಸೆ ಕುಸಿತ ಕಂಡು 82.39ಕ್ಕೆ ತಲುಪಿತ್ತು.
ಭಾರತವು ಅಗತ್ಯ ವಿದ್ಯುತ್ ವಸ್ತುಗಳು ಮತ್ತು ಯಂತ್ರೋಪಕರಣಗಳನ್ನ ಒಳಗೊಂಡಂತೆ ಅನೇಕ ಔಷಧಿಗಳನ್ನು ಆಮದು ಮಾಡಿಕೊಳ್ಳುತ್ತದೆ. ಹೆಚ್ಚಿನ ಮೊಬೈಲ್‌ಗಳು ಮತ್ತು ಗ್ಯಾಜೆಟ್‌ಗಳನ್ನು ಚೀನಾ ಮತ್ತು ಇತರ ಪೂರ್ವ ಏಷ್ಯಾದ ನಗರಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ರುಪಾಯಿ ಮೌಲ್ಯ ಹೀಗೆ ಕುಸಿಯುತ್ತಾ ಹೋದರೆ ಆಮದು ದುಬಾರಿಯಾಗುತ್ತದೆ ಮತ್ತು ಜನ ಸಾಮಾನ್ಯರ ಹೊರೆ ಹೆಚ್ಚಾಗುತ್ತದ ಮತ್ತು ಜನಸಾಮಾನ್ಯರು ಹೆಚ್ಚು ಖರ್ಚು ಮಾಡಬೇಕಾಗುತ್ತದೆ.
Rupee falls: Rupee closed at 83 for the first time against dollar, today fell by 61 paise








