ಹೆರಿಗೆ ಆಸ್ಪತ್ರೆ ಮೇಲೆ ವೈಮಾನಿಕ ದಾಳಿ ನಡೆಸಿದ ರಷ್ಯಾ – Saaksha Tv
ಉಕ್ರೇನ್: ರಷ್ಯಾ ಉಕ್ರೇನ್ ಮೇಳೆ ಸತತವಾಗಿ 16 ದಿನಗಳಿಂದ ದಾಳಿ ನಡೆಸುತ್ತಿದರೆ. ಆದರೆ ರಷ್ಯಾದ ಪಡೆಗಳು ದೇಶದ ಕೆಲವು ಪ್ರದೇಶಗಳಲ್ಲಿ ಯುದ್ಧ ಸಾಮರ್ಥ್ಯವನ್ನು ಕಳೆದುಕೊಂಡಿವೆ ಎಂದು ಉಕ್ರೇನಿಯನ್ ರಕ್ಷಣಾ ಸಚಿವಾಲಯ ಹೇಳಿದೆ.
ಉಕ್ರೇನಿಯನ್ ಪಡೆಗಳು ಡೊನೆಟ್ಸ್ಕ್, ಸ್ಲೋಬೋಜಾನ್ಸ್ಕಿ ಮತ್ತು ತಾವ್ರಿಜ್ ಜಿಲ್ಲೆಗಳ ಪೂರ್ವ ಪ್ರದೇಶಗಳಲ್ಲಿ ರಷ್ಯಾದ ದಾಳಿಯನ್ನು ತಡೆಯುವುದನ್ನು ಮುಂದುವರೆಸಿದೆ. ಉಕ್ರೇನಿಯನ್ ಪಡೆಗಳು ಖಾರ್ಕಿವ್ ಮತ್ತು ಒಖ್ತಿರ್ಕು ನಗರಗಳನ್ನು ರಕ್ಷಿಸುತ್ತಿವೆ. ಆದರೆ ಆಗ್ನೇಯ ದಿಕ್ಕಿನಲ್ಲಿ ರಷ್ಯಾದ ಪ್ರಗತಿಯನ್ನು ತಡೆಯುವ ಪ್ರಯತ್ನಗಳು ನಡೆಯುತ್ತಿವೆ ಎಂದು ಎಂದು ಸಚಿವಾಲಯವು ತನ್ನ ಫೇಸ್ಬುಕ್ನಲ್ಲಿ ಪೋಸ್ಟ್ ಮಾಡಿದೆ.
ಅಲ್ಲದೇ ರಷ್ಯಾ ಉಕ್ರೇನ್ನಲ್ಲಿನ ಬಂದರು ನಗರವಾದ ಮರಿಯುಪೋಲ್ನಲ್ಲಿನ ಹೆರಿಗೆ ಆಸ್ಪತ್ರೆಯ ಮೇಲೆ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ ಗರ್ಭಣಿಯರು, ಮಕ್ಕಳಾಗಿದ್ದಲ್ಲದೇ, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ.
ಉಕ್ರೇನಿಯನ್ ನಗರಗಳ ಮೇಲೆ ರಷ್ಯಾದ ಪಡೆಗಳು ತಮ್ಮ ಮುತ್ತಿಗೆಯನ್ನು ತೀವ್ರಗೊಳಿಸಿದಾಗ ಸಾವಿರಾರೂ ಮಕ್ಕಳು ಕಟ್ಟಡಗಳ ಅವಶೇಷಗಳಡಿ ಸಿಲುಕೊಂಡು ಪ್ರಾಣ ಕಳೆದುಕೊಂಡಿದ್ದಾರೆ. ಕೀವ್ ಪಶ್ಚಿಮದಲ್ಲಿರುವ ಇನ್ನೊಂದು ನಗರದ ಎರಡು ಆಸ್ಪತ್ರೆಗಳ ಮೇಲೂ ರಷ್ಯಾ ಬಾಂಬ್ ದಾಳಿ ನಡೆಸಿದೆ. ಮಾರಿಯುಪೋಲ್ನಲ್ಲಿರುವ ವೈದ್ಯಕೀಯ ಸಂಕೀರ್ಣದಲ್ಲಿ ನಡೆದ ದಾಳಿಯಲ್ಲಿ ಕನಿಷ್ಠ 17 ಜನರು ಗಾಯಗೊಂಡಿದ್ದಾರೆ ಎಂದು ಉಕ್ರೇನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ಎರಡು ವಾರಗಳ ಯುದ್ಧವು ಉಕ್ರೇನ್ನಲ್ಲಿ ಮಾನವೀಯ ಬಿಕ್ಕಟ್ಟನ್ನು ಸೃಷ್ಟಿಸಿದೆ. 2 ಮಿಲಿಯನ್ ಉಕ್ರೇನಿಯನ್ನರು ತಮ್ಮ ದೇಶದಿಂದ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆ ಅಂದಾಜಿಸಿದೆ. ರಷ್ಯಾ ಇಲ್ಲಿಯವರೆಗೆ ಒಟ್ಟು 6,000 ಸೈನಿಕರನ್ನು ಹತ್ಯೆ ಮಾಡಿದೆ.









