ಹಕ್ಕಿ ಜ್ವರದ H5N8 ಸ್ಟ್ರೈನ್‌ನೊಂದಿಗೆ ಮಾನವ ಸೋಂಕಿನ ಮೊದಲ ಪ್ರಕರಣವನ್ನು ದೃಢಪಡಿಸಿದ ರಷ್ಯಾ
ಮಾಸ್ಕೋ, ಫೆಬ್ರವರಿ20: ಹಕ್ಕಿಗಳ ಜ್ವರಕ್ಕೆ ಕಾರಣವಾಗುವ ಇನ್ಫ್ಲುಯೆನ್ಸ ಎ ವೈರಸ್‌ನ H5N8 ಸ್ಟ್ರೈನ್‌ನೊಂದಿಗೆ ಮಾನವ ಸೋಂಕಿನ ಮೊದಲ ಪ್ರಕರಣವನ್ನು ರಷ್ಯಾದ ಸಂಶೋಧನಾ ಕೇಂದ್ರ ವೆಕ್ಟರ್‌ನ ವಿಜ್ಞಾನಿಗಳು ಖಚಿತಪಡಿಸಿದ್ದಾರೆ ಎಂದು ರೋಸ್ಟ್‌ಪೋಟ್ರೆಬ್ನಾಡ್ಜರ್ ಗ್ರಾಹಕ ಹಕ್ಕುಗಳ ಸಂರಕ್ಷಣಾ ವಾಚ್‌ಡಾಗ್ ಮುಖ್ಯಸ್ಥರು ತಿಳಿಸಿದ್ದಾರೆ.
ರೋಸ್ಪೊಟ್ರೆಬ್ನಾಡ್ಜೋರ್‌ನ ವೆಕ್ಟರ್ ಸಂಶೋಧನಾ ಕೇಂದ್ರದಿಂದ ವಿಜ್ಞಾನಿಗಳು ನಡೆಸಿದ ಪ್ರಮುಖ ವೈಜ್ಞಾನಿಕ ಆವಿಷ್ಕಾರದ ಕುರಿತು ನಾನು ಪ್ರಕಟಣೆ ನೀಡಲು ಬಯಸುತ್ತೇನೆ. ರಷ್ಯಾದ ಒಕ್ಕೂಟದಲ್ಲಿ ಏವಿಯನ್ ಇನ್ಫ್ಲುಯೆನ್ಸ ಎ ವೈರಸ್‌ನ H5N8 ಸ್ಟ್ರೈನ್‌ನೊಂದಿಗೆ ಮಾನವ ಸೋಂಕಿನ ಮೊದಲ ಪ್ರಕರಣವನ್ನು ಪ್ರಯೋಗಾಲಯದಲ್ಲಿ ದೃಢಪಡಿಸಲಾಗಿದೆ ಎಂದು ಅನ್ನಾ ಪೊಪೊವಾ ಹೇಳಿದ್ದಾರೆ.
ರಷ್ಯಾದ ದಕ್ಷಿಣದ ಕೋಳಿ ಸಾಕಾಣಿಕೆ ಕೇಂದ್ರದ ಏಳು ಉದ್ಯೋಗಿಗಳಲ್ಲಿ ವಿಜ್ಞಾನಿಗಳು ಈ ಜ್ವರ ತಳಿಗಳ ಆನುವಂಶಿಕ ವಸ್ತುವನ್ನು ಪತ್ತೆ ಹಚ್ಚಿದ್ದಾರೆ.ಅಲ್ಲಿ ಡಿಸೆಂಬರ್‌ನಲ್ಲಿ ಕೋಳಿ ಸಾಕಣೆಯ ಕೇಂದ್ರಗಳಲ್ಲಿ ಪ್ರಕರಣ ದಾಖಲಾಗಿತ್ತು.
ನಾನು ಪ್ರಸ್ತಾಪಿಸಿದ ಎಲ್ಲಾ ಏಳು ಜನರು ಉತ್ತಮವಾಗಿದ್ದಾರೆ, ಅವರಿಗೆ ಲಘುವಾದ ಕ್ಲಿನಿಕಲ್ ಲಕ್ಷಣಗಳು ಮಾತ್ರ ಇದ್ದವು ಎಂದು ಪೊಪೊವಾ ಭರವಸೆ ನೀಡಿದ್ದಾರೆ.
ನಿಂಬೆಯೊಂದಿಗೆ ಬೆಲ್ಲದ ನೀರು ಸೇವನೆಯ ಆರೋಗ್ಯ ಪ್ರಯೋಜನಗಳು https://t.co/qePSOlsibX
— Saaksha TV (@SaakshaTv) February 16, 2021
ದೇಶದ ಪ್ರತಿಯೊಂದು ಹಳ್ಳಿಯಲ್ಲೂ ಗೋವಿನ ಸಗಣಿಯ ಪೇಂಟಿನ ಕಾರ್ಖಾನೆ ತೆರೆಯಲು ಸರ್ಕಾರ ಚಿಂತನೆ https://t.co/8KpAmijVHr
— Saaksha TV (@SaakshaTv) February 17, 2021