ಉಕ್ರೇನ್‌ನ ಖಾರ್ಕಿವ್ ನಗರದಲ್ಲಿ ಸಿಲುಕಿರುವ ಭಾರತೀಯರನ್ನ ಕರೆತರಲು 130 ಬಸ್ ಕಳುಹಿಸಿದ ರಷ್ಯಾ
ಯುದ್ಧ ಪೀಡಿತ ಉಕ್ರೇನ್‌ನ ಖಾರ್ಕಿವ್ ಮತ್ತು ಸುಮಿ ನಗರಗಳಿಂದ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳು ಮತ್ತು ಇತರ ವಿದೇಶಿಯರನ್ನು ಸ್ಥಳಾಂತರಿಸಲು 130 ಬಸ್‌ಗಳನ್ನು ಕಳುಹಿಸಲು ರಷ್ಯಾ ಸಿದ್ಧವಾಗಿದೆ ಎಂದು ರಷ್ಯಾದ ಉನ್ನತ ಮಿಲಿಟರಿ ಜನರಲ್ ಗುರುವಾರ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತುಕತೆ ನಡೆಸಿ ಉಕ್ರೇನ್‌ನಲ್ಲಿನ ಸಂಘರ್ಷದ ಪ್ರದೇಶಗಳಿಂದ ಭಾರತೀಯರನ್ನು ಸುರಕ್ಷಿತವಾಗಿ ಸ್ಥಳಾಂತರಿಸುವ ಕುರಿತು ಚರ್ಚೆ ನಡೆಸಿದ ಒಂದು ದಿನದ ನಂತರ ರಷ್ಯಾದ ರಾಷ್ಟ್ರೀಯ ರಕ್ಷಣಾ ನಿಯಂತ್ರಣ ಕೇಂದ್ರದ ಮುಖ್ಯಸ್ಥ ಕರ್ನಲ್-ಜನರಲ್ ಮಿಖಾಯಿಲ್ ಮಿಜಿಂಟ್ಸೆವ್ ಅವರ ಹೇಳಿಕೆಗಳು ಬಂದಿವೆ.
ಉಕ್ರೇನ್‌ನಲ್ಲಿ ಸುಮಾರು 8,000 ಭಾರತೀಯರು, ಮುಖ್ಯವಾಗಿ ವಿದ್ಯಾರ್ಥಿಗಳು ಸಿಲುಕಿಕೊಂಡಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ ಮಂಗಳವಾರ ಹೇಳಿದ್ದಾರೆ.
“ಭಾರತೀಯ ವಿದ್ಯಾರ್ಥಿಗಳು ಮತ್ತು ಇತರ ವಿದೇಶಿ ರಾಜ್ಯಗಳ ನಾಗರಿಕರನ್ನು ರಕ್ಷಿಸುವ ಸಲುವಾಗಿ ಇಂದು ಬೆಳಿಗ್ಗೆ 6 ಗಂಟೆಯಿಂದ ಬೆಲ್ಗೊರೊಡ್ ಪ್ರದೇಶದ ನೆಖೋಟೆಯೆವ್ಕಾ ಮತ್ತು ಸುಡ್ಜಾ ಚೆಕ್‌ಪೋಸ್ಟ್‌ಗಳಿಂದ ಖಾರ್ಕೊವ್ (ಖಾರ್ಕಿವ್) ಮತ್ತು ಸುಮಿಗೆ ಒಟ್ಟು 130 ಆರಾಮದಾಯಕ ಬಸ್‌ಗಳು ಹೊರಡಲು ಸಿದ್ಧವಾಗಿವೆ” ಎಂದು ಕರ್ನಲ್-ಜನರಲ್ ಮಿಜಿಂಟ್ಸೆವ್ ಹೇಳಿದ್ದಾರೆ. ಎಂದು ಸರ್ಕಾರಿ ಸ್ವಾಮ್ಯದ TASS ಸುದ್ದಿ ಸಂಸ್ಥೆ ಉಲ್ಲೇಖಿಸಿದೆ.