ರಷ್ಯಾ-ಉಕ್ರೇನ್ ಯುದ್ಧ | ನೀರು ಸಿಗದೆ ಪ್ರಾಣ ಬಿಟ್ಟ ಮಗು – Saaksha Tv
ಉಕ್ರೇನ್: ಉಕ್ರೇನ್ನಲ್ಲಿ ಯುದ್ಧದ ಭೀಕರತೆ ಹೆಚ್ಚಾಗಿದ್ದು, ಇದರಿಂದ ಸಾಕಷ್ಟು ಸಾವು ನೋವು ಸಂಭವಿಸಿವೆ. ಹಾಗೇ ಉಕ್ರೇನ್ ನಲ್ಲಿ ಮಗುವೊಂದು ಕುಡಿಯಲು ನೀರು ಸಿಗದೆ ಪ್ರಾಣ ಬಿಟ್ಟಿರುವ ಮನಕಲಕುವ ಘಟನೆ ನಡದಿದೆ.
ಹೌದು ರಷ್ಯಾ- ಉಕ್ರೇನ್ ಮಧ್ಯೆ ಯುದ್ಧ ನಡೆಯುತ್ತಿದ್ದು, ಯುದ್ಧದಿಂದ ಉಕ್ರೇನ್ ನಲ್ಲಿ ಸಾಕಷ್ಟು ತೊಂದರೆಗಳಾಗಿವೆ. ನೂರಾರು ನಾಗರಿಕರು ಸಾವನ್ನಪ್ಪಿದ್ದಾರೆ. ಅದು ಮದ್ದು ಗುಂಡುಗಳನ್ನು ತಿಂದು. ಅಲ್ಲದೇ ಅನ್ನ ನೀರು ಸಿಗದೆ ಸಾವನ್ನಪ್ಪಿದ್ದಾರೆ.
ಅದೇ ರೀತಿ ಮರಿಯುಪೋಲ್ನಲ್ಲಿ ಯುದ್ಧದ ಭೀಕರತೆಗೆ ಆರು ವರ್ಷದ ಬಾಲಕಿಯೊಬ್ಬಳು ಮೃತಪಟ್ಟಿದ್ದಾಳೆ. ಯುದ್ಧದಲ್ಲಿ ತಾಯಿಯನ್ನೂ ಕಳೆದುಕೊಂಡ ಬಾಲಕಿ, ಕುಡಿಯಲು ನೀರು ಸಿಗದೇ ಡೀಹೈಡ್ರೇಷನ್ನಿಂದ ಮೃತಪಟ್ಟಿದ್ದಾಳೆ.
ಮರಿಯುಪೋಲ್ನ ಕಟ್ಟಡವೊಂದರ ಮೇಲೆ ರಷ್ಯಾ ದಾಳಿ ಮಾಡಿತ್ತು, ಈ ದಾಳಿಯಲ್ಲಿ ಬಾಲಕಿ ತನ್ನ ತಾಯಿಯನ್ನು ಕಳೆದುಕೊಂಡಿದ್ದಳು. ಅದಾದ ನಂತರ ಎಲ್ಲಿಗೆ ಹೋಗಲು ತಿಳಿಯದೇ ಒಂದೇ ಸ್ಥಳದಲ್ಲಿ ಇದ್ದು, ಡಿಹೈಡ್ರೇಷನ್ನಿಂದ ಬಾಲಕಿ ಮೃತಪಟ್ಟಿದ್ದಾಳೆ.
ನಾಗರಿಕರು ನಮ್ಮ ಟಾರ್ಗೆಟ್ ಅಲ್ಲ, ಅವರ ಮೇಲೆ ದಾಳಿ ಮಾಡೋದಿಲ್ಲ ಎಂದು ಹೇಳಿಕೊಂಡು ಬಂದಿರುವ ರಷ್ಯಾ, ಲಕ್ಷಾಂತರ ನಾಗರಿಕರ ಸಾವಿಗೆ ಕಾರಣವಾಗಿದೆ ಎಂದು ಉಕ್ರೇನ್ ಹೇಳಿದೆ.








