ರಷ್ಯಾ-ಉಕ್ರೇನ್ ಯುದ್ಧ | ಇಂಧನ ಬಿಕ್ಕಟ್ಟು | ಅಭಿವೃದ್ಧಿಶೀಲ ರಾಷ್ಟ್ರಗಳಿಗೆ ಗಂಭೀರ ಪರಿಣಾಮ
ವಿಶ್ವಸಂಸ್ಥೆ: ರಷ್ಯಾ-ಉಕ್ರೇನ್ ಜಗತ್ತಿನಲ್ಲಿ ಇಂಧನ ಬಿಕ್ಕಟ್ಟು ಎದುರಾಗಿದ್ದು, ಇದನ್ನು ಎದುರಿಸಲು ಅಂತರರಾಷ್ಟ್ರೀಯ ಸಹಕಾರಕ್ಕೆ ಭಾರತ ಕರೆ ನೀಡಿದೆ
ಗುರುವಾರ ನಡೆದ ಭದ್ರತಾ ಮಂಡಳಿಯ ಮಹತ್ವದ ಸಭೆಯಲ್ಲಿ ಭಾರತದ ಖಾಯಂ ಪ್ರತಿನಿಧಿ ಟಿ.ಎಸ್. ತಿರುಮೂರ್ತಿ ಮಾತನಾಡಿ ರಷ್ಯಾ-ಉಕ್ರೇನ್ ಯುದ್ಧದಿಂದ ಪ್ರಾದೇಶಿಕವಾಗಿ ಮತ್ತು ಜಾಗತಿಕವಾಗಿ ಹೆಚ್ಚು ಪರಿಣಾಮ ಬೀರುತ್ತಿದೆ. ತೈಲ ಬೆಲೆಗಳು ಗಗನಕ್ಕೇರಿದ್ದು, ಆಹಾರ ಧಾನ್ಯಗಳು, ರಸಗೊಬ್ಬರಗಳ ಕೊರತೆ ಉಂಟಾಗಿದೆ. ಇದು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಇನ್ನೂ ಇಂಧನ ಕೊರತೆಯ ಸಮಸ್ಯೆ. ಪರಸ್ಪರ ಅಂತರರಾಷ್ಟ್ರೀಯ ಮಟ್ಟದ ಕಾಳಜಿ ಹಾಗೂ ಸಹಕಾರದಿಂದ ಪರಿಹರಿಸಬೇಕಾಗಿದೆ. ಹಾಗೇ ಉಕ್ರೇನ್ನ ಬುಚಾ ಎಂಬಲ್ಲಿ ರಷ್ಯಾ ನಡೆಸಿದೆ ಎನ್ನಲಾದ ನಾಗರಿಕರ ಮಾರಣಹೋಮ ಸಂಬಂಧ ಸ್ವತಂತ್ರ ತನಿಖೆ ನಡೆಸಬೇಕು, ಇದನ್ನು ನಾವು ಖಂಡಿಸುತ್ತೇವೆ ಎಂದರು.