ಉಕ್ರೇನ್ – ರಷ್ಯಾ ಬಿಕ್ಕಟ್ಟು : ಯುದ್ಧದ 7ನೇ ದಿನದ ಅಪ್ಡೇಟ್ ಇಲ್ಲಿದೆ…
ಉಕ್ರೇನ್ ನಲ್ಲಿ ಮತ್ತೊಬ್ಬ ಭಾರತೀಯ ಅನಾರೋಗ್ಯದಿಂದಾಗಿ ಸಾವನ್ನಪ್ಪಿದ್ದಾರೆ. 22 ವರ್ಷದ ಚಂದನ್ ಜಿಂದಾಲ್ ವಿನಿಸ್ಟಿಯಾದ ಸ್ಮಾರಕ ವಿಶ್ವವಿದ್ಯಾಲಯದಲ್ಲಿ ವ್ಯಾಸಂಗ ಮಾಡುತ್ತಿದ್ದ. ಆರೋಗ್ಯದ ಸ್ಥಿತಿ ಹದಗೆಟ್ಟಿದ್ದರಿಂದ ಐಸಿಯೂ ಗೆ ಸೇರಿಸಲಾಗಿತ್ತು. ಬ್ರೈನ್ ಸ್ಟ್ರೋಕ್ ನಿಂದಾಗಿ ಪ್ರಾಣ ಕಳೆದುಕೊಂಡಿದ್ದಾರೆ.
ಭಾರತ ಸರ್ಕಾರವು ತನ್ನ ನಾಗರಿಕರ ಸುರಕ್ಷಿತ ವಾಪಸಾತಿಗಾಗಿ ಸಿಗುವ ಯಾವುದೇ ಅವಕಾಶವನ್ನ ಬಿಡುವುದಿಲ್ಲ ಎಂದು ಇಂದು ನಾನು ದೇಶದ ಜನರಿಗೆ ಭರವಸೆ ನೀಡುತ್ತೇನೆ ಎಂದು ಮೋದಿ ಹೇಳಿದ್ದಾರೆ.
ಸುಮಾರು 8,36,000 ನಿರಾಶ್ರಿತರು ಉಕ್ರೇನ್ ದೇಶವನ್ನ ತೊರೆದು ನೆರೆಯ ದೇಶಗಳಿಗೆ ಪಲಾಯನ ಮಾಡಿದ್ದಾರೆ ಎಂದು ವಿಶ್ವಸಂಸ್ಥೆಯ ಅಂಕಿಅಂಶಗಳು ಬುಧವಾರ ತಿಳಿಸಿವೆ.
ರಷ್ಯಾ ಆಕ್ರಮಣದಿಂದಾಗಿ ವಸತಿ ಕಳೆದುಕೊಂಡಿರುವ ಉಕ್ರೇನ್ ನಿರಾಶ್ರಿತರಿಗೆ ಕೈವ್ ನಗರದಲ್ಲಿ ರೆಸ್ಟೋರೆಂಟ್ ನಡೆಸುತ್ತಿರುವ ಮನೀಶ ದೇವ್ ಎಂಬ ಭಾರತಿಯ ಉದ್ಯಮಿ ಆಶ್ರಯ ನೀಡಿ ಆಹಾರವನ್ನೂ ನೀಡುತ್ತಿದ್ದಾರೆ.
ಉಕ್ರೇನ್ ದೇಶದ ಮೇಲೆ ರಷ್ಯಾದ ಆಕ್ರಮಣವು ಏಳನೇ ದಿನಕ್ಕೆ ಕಾಲಿಟ್ಟಿದೆ. ದಕ್ಷಿಣ ಉಕ್ರೇನಿಯನ್ ನಗರವಾದ ಖೆರ್ಸನ್ನ ಮೇಲೆ ನಿಯಂತ್ರಣ ಸಾಧಿಸಿದ್ದೇವೆ ಎಂದು ರಷ್ಯಾದ ಸೈನ್ಯ ಬುಧವಾರ ಹೇಳಿದೆ.
ಉಕ್ರೇನ್ ಮೇಲೆ ರಷ್ಯಾ ಮಿಲಿಟರಿ ದಾಳಿಯ ಪರಿಣಾಮವಾಗಿ ಟೆಕ್ ದೈತ್ಯ ಗೂಗಲ್ ಉಕ್ರೇನ್ ಗೆ 15 ಮಿಲಿಯನ್ ಡಾಲರ್ ಸಹಾಯ ಹಸ್ತವನ್ನ ಚಾಚಿದೆ.
ವಿಶ್ವಬ್ಯಾಂಕ್ ಉಕ್ರೇನ್ಗೆ 3 ಶತಕೋಟಿ ಡಾಲರ್ ಸಹಾಯವನ್ನು ಮಾಡುವುದಾಗಿ ತಿಳಿಸಿದೆ. ಅದರಲ್ಲಿ $ 350 ಮಿಲಿಯನ್ ಡಾಲರ್ ಅನ್ನ ಮುಂದಿನ ವಾರದೊಳಗೆ ಕಳುಹಿಸಲಾಗುವುದು. ಎಂದು ತಿಳಿಸಿದೆ.
ಉಕ್ರೇನ್ ನಲ್ಲಿ ನಡೆದ ಶೆಲ್ ದಾಳಿಯಲ್ಲಿ ಭಾರತೀಯ ವಿದ್ಯಾರ್ಥಿಯ ಸಾವನ್ನಪ್ಪಿದ್ದಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಬುಧವಾರ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇದು ‘ಸರ್ಕಾರದ ನಿರ್ಲಕ್ಷ್ಯ’ ಎಂದು ಕರೆದಿದ್ದಾರೆ.
ವಿಶ್ವಸಂಸ್ಥೆಯಲ್ಲಿ ಉಕ್ರೇನ್ ಬಿಕ್ಕಟ್ಟಿನ ಕುರಿತು ಭಾರತವು ತಟಸ್ಥವಾಗಿದ್ದಕ್ಕಾಗಿ ರಷ್ಯಾ ಭಾರತಕ್ಕೆ ಕೃತಜ್ಞರಾಗಿರಬೇಕು ಎಂದು ಭಾರತದಲ್ಲಿರು ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಹೇಳಿದ್ದಾರೆ,
ಉಕ್ರೇನ್ನಲ್ಲಿ ಸಿಲುಕಿರುವ ಭಾರತೀಯ ವಿದ್ಯಾರ್ಥಿಗಳನ್ನು ಮರಳಿ ಕರೆತರಲು ಎರಡು C-17 ಗ್ಲೋಬ್ಮಾಸ್ಟರ್ ವಿಮಾನಗಳು ರೊಮೇನಿಯಾ ಮತ್ತು ಹಂಗೇರಿಗೆ ತೆರಳಿವೆ. ಮೊದಲ ವಿಮಾನವು ಬೆಳಿಗ್ಗೆ ನಾಲ್ಕು ಗಂಟೆಗೆ ರೊಮೇನಿಯಾಗೆ ಹೊರಟರೆ, ಎರಡನೇ ವಿಮಾನವು ಹಂಗೇರಿಗೆ ಹೊರಟಿತು.