Russia vs Ukraine war | ಭಾರತೀಯ ವಿದ್ಯಾರ್ಥಿಗೆ ಗುಂಡೇಟು
ಕೀವ್ : ಉಕ್ರೇನ್ ನಲ್ಲಿ ರಷ್ಯಾ ಸೈನಿಕರ ಅಟ್ಟಹಾಸ ಮುಂದುವರೆದಿದೆ.
ದಯೆ ದಾಕ್ಷಣ್ಯವಿಲ್ಲದೇ ಉಕ್ರೇನ್ ಮೇಲೆ ರಷ್ಯಾ ಯೋಧರು ಸವಾರಿ ಮಾಡುತ್ತಿದ್ದಾರೆ.
ರಷ್ಯಾ ದಂಡಯಾತ್ರೆಗೆ ಉಕ್ರೇನ್ ಬಳಲಿ ಹೋಗಿದೆ.
ಈ ಮಧ್ಯೆ ಉಕ್ರೇನ್ ನ ಕೀವ್ ನಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿಗೆ ಗುಂಡು ತಗುಲಿದೆ ಎಂದು ವರದಿಯಾಗಿದೆ.
ಈ ಬಗ್ಗೆ ಕೇಂದ್ರ ಸಚಿವ ವಿ.ಕೆ.ಸಿಂಗ್ ಮಾಹಿತಿ ನೀಡಿದ್ದಾರೆ. ಕೀವ್ ನಲ್ಲಿ ಭಾರತೀಯ ಮೂಲದ ವಿದ್ಯಾರ್ಥಿಗೆ ಗುಂಡೇಟು ತಗುಲಿದೆ ಎಂಬ ಮಾಹಿತಿ ಸಿಕ್ಕಿದೆ.
ಆತನನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆದ್ರೆ ಗಾಯಗೊಂಡಿರುವ ವಿದ್ಯಾರ್ಥಿ ಯಾರು ಎಂಬ ಮಾಹಿತಿ ಇಲ್ಲ. ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ ಎಂದು ತಿಳಿಸಿದ್ದಾರೆ.
ಕೆಲವು ದಿನಗಳ ಹಿಂದೆ ರಷ್ಯಾ, ಉಕ್ರೇನ್ ಮೇಲೆ ನಡೆಸಿದ ಶೆಲ್ ದಾಳಿಗೆ ಕರ್ನಾಟಕದ ವಿದ್ಯಾರ್ಥಿ ನವೀನ್ ಸದಾವನ್ನಪ್ಪಿದ್ದಾರೆ.
ಇದೀಗ ಒಬ್ಬ ವಿದ್ಯಾರ್ಥಿಗೆ ಗುಂಡು ತಗುಲಿದ್ದು, ಚಿಕಿತ್ಸೆ ನೀಡಲಾಗುತ್ತಿದೆ ಎನ್ನುವ ಮಾಹಿತಿ ಸಿಕ್ಕಿದೆ. russia-vs-ukraine-war-another indian student shot in ukraine