Morbi bridge : ಸೇತುವೆ ದುರಂತ ನೆನೆದು ರಷ್ಯಾ ಅಧ್ಯಕ್ಷ ಪುಟಿನ್ ಸಂತಾಪ…
ಗುಜರಾತ್ನ ಮೊರ್ಬಿ ನಗರದಲ್ಲಿ ಸೇತುವೆ ಕುಸಿದು ಸಾವನ್ನಪ್ಪಿದ ಜನರ ಕುಟುಂಬಗಳಿಗೆ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಸಂತಾಪ ಸೂಚಿಸಿದ್ದಾರೆ.
ಒಂದು ಶತಮಾನಕ್ಕೂ ಹಳೆಯದಾದ ಸೇತುವೆಯನ್ನ ದುರಸ್ತಿ ನಂತರ ಕೆಲವೇ ದಿನಗಳ ಹಿಂದೆಯಷ್ಟೆ ಪುನಃ ಪ್ರವಾಸಿಗರಿಗೆ ತೆರೆಯಲಾಗಿತ್ತು. ಭಾನುವಾರ ಪ್ರವಾಸಿಗರ ಸಂಖ್ಯೆ ಹೆಚ್ಚಿದ್ದರಿಂದ ಕುಸಿದು 140 ಕ್ಕೂ ಹೆ್ಚು ಮಂದಿ ಸಾವನ್ನಪ್ಪಿದ್ದಾರೆ.
ಆತ್ಮೀಯ ಅಧ್ಯಕ್ಷರೇ ಮತ್ತು ಪ್ರಧಾನ ಮಂತ್ರಿಗಳೇ ಗುಜರಾತ್ ರಾಜ್ಯದ ಮೋರ್ಬಿ ಸೇತುವೆ ಕುಸಿತದ ಬಗ್ಗೆ ನನ್ನ ಹೃತ್ಪೂರ್ವಕ ಸಂತಾಪಗಳನ್ನ ದಯವಿಟ್ಟು ಸ್ವೀಕರಿಸಿ ಎಂದು ಕ್ರೆಮ್ಲಿನ್ ವೆಬ್ಸೈಟ್ನಲ್ಲಿ ಪ್ರಕಟವಾದ ಸಂದೇಶದಲ್ಲಿ ಪುಟಿನ್ ತಿಳಿಸಿದ್ದಾರೆ.
ಪುಟಿನ್ ಅವರು ಸಂತ್ರಸ್ತರ ಕುಟುಂಬಗಳು ಮತ್ತು ಸ್ನೇಹಿತರಿಗೆ ತಮ್ಮ ಸಹಾನುಭೂತಿ ಮತ್ತು ಬೆಂಬಲದ ಮಾತುಗಳನ್ನು ತಿಳಿಸಿದರು ಮತ್ತು ಗಾಯಗೊಂಡವರೆಲ್ಲರೂ ಶೀಘ್ರವಾಗಿ ಚೇತರಿಸಿಕೊಳ್ಳಬೇಕೆಂದು ಹಾರೈಸಿದರು ಎಂದು ಸರ್ಕಾರಿ ಸ್ವಾಮ್ಯದ TASS ಸುದ್ದಿ ಸಂಸ್ಥೆ ವರದಿ ಮಾಡಿದೆ.
ಇನ್ನೂ ಪ್ರಧಾನಿಯವರ ರಾಷ್ಟ್ರೀಯ ಪರಿಹಾರ ನಿಧಿಯಿಂದ (ಪಿಎಂಎನ್ಆರ್ಎಫ್) ಮೃತರ ಪ್ರತಿ ಕುಟುಂಬಕ್ಕೆ 2 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿಗಳ ಪರಿಹಾರವನ್ನು ಮೋದಿ ಘೋಷಿಸಿದ್ದಾರೆ.
ಗುಜರಾತ್ ಸರ್ಕಾರ ಮೃತರ ಕುಟುಂಬಕ್ಕೆ 4 ಲಕ್ಷ ರೂಪಾಯಿ ಮತ್ತು ಗಾಯಗೊಂಡವರಿಗೆ 50,000 ರೂಪಾಯಿ ಪರಿಹಾರ ಘೋಷಿಸಿದೆ.
Russian President Putin expresses condolences to families of Morbi bridge collapse victims