ನೋ ವಾರ್ ಪ್ಲೀಸ್ – ಟೆನಿಸ್ ಪಂದ್ಯದ ವೇಳೆ ಶಾಂತಿಯ ಮಾತು…
ಉಕ್ರೇನ್ ಮೇಲೆ ರಷ್ಯಾದ ದಾಳಿ ನಡೆಸಿದ ನಂತರ, ಪ್ರಪಂಚದಾದ್ಯಂತ ಭೀತಿಯ ವಾತಾವರಣ ಸೃಷ್ಟಿಯಾಗಿದೆ. ರಷ್ಯಾದ ಟೆನಿಸ್ ಆಟಗಾರ ಆಂಡ್ರೇ ರುಬ್ಲೆವ್ ಅವರು ಶಾಂತಿಗಾಗಿ ಮನವಿ ಮಾಡಿದ್ದಾರೆ. ಪ್ರಸ್ತುತ ದುಬೈನಲ್ಲಿ ಟೆನಿಸ್ ಪಂದ್ಯಾವಳಿಯಲ್ಲಿ ರುಬ್ಲೆವ್ ಭಾಗವಹಿಸುತ್ತಿದ್ದಾರೆ. ಪಂದ್ಯದ ವೇಳೆ ದೊಡ್ಡ ಸಂದೇಶ ನೀಡಿ ಯುದ್ಧ ನಡೆಸಿದಂತೆ ಮನವಿ ಮಾಡಿದ್ದಾರೆ. ಟಿವಿ ಬ್ರಾಡ್ಕಾಸ್ಟರ್ನ ಕ್ಯಾಮೆರದ ಲೆನ್ಸ್ ಮೇಲೆ ನೋ ವಾರ್ ಪ್ಲೀಸ್… ಎಂದು ರುಬ್ಲೆವ್ ಬರೆದಿದ್ದಾರೆ. ರುಬ್ಲೆವ್ ಅವರ ಸಂದೇಶ ಪರದೆಯ ಮೇಲೆ ಕಾಣಿಸಿಕೊಂಡ ತಕ್ಷಣ, ಕ್ರೀಡಾಂಗಣದಲ್ಲಿ ಪ್ರೇಕ್ಷಕರು ಚಪ್ಪಾಳೆ ತಟ್ಟಿದ್ದಾರೆ.
https://twitter.com/i/status/1497324029136584706
ರುಬ್ಲೆವ್ ಫೈನಲ್ ತಲುಪಿದರು
ವಿಶ್ವ ನಂ.7 ಆಟಗಾರ ರುಬ್ಲೆವ್ ಸೆಮಿಫೈನಲ್ ಪಂದ್ಯದಲ್ಲಿ ಪೋಲೆಂಡ್ ನ ಹ್ಯೂಬರ್ಟ್ ಹೆರ್ಕಾಜ್ ಅವರನ್ನು 3-6, 7-5, 7-6 ಸೆಟ್ ಗಳಿಂದ ಸೋಲಿಸಿದರು. ಎರಡು ಗಂಟೆ 23 ನಿಮಿಷಗಳಲ್ಲಿ ಮೂರು ಸೆಟ್ಗಳವರೆಗೆ ನಡೆದ ಈ ಪಂದ್ಯವನ್ನ ರುಬ್ಲೆವ್ ತಮ್ಮದಾಗಿಸಿಕೊಂಡರು. ಮುಂದಿನ ಪಂದ್ಯದಲ್ಲಿ, ಡೆನಿಸ್ ಶಪೊವಲೋವ್ ಮತ್ತು ಜಿರಿ ವೆಸೆಲಿ ನಡುವಿನ ಎರಡನೇ ಸೆಮಿಫೈನಲ್ ವಿಜೇತರನ್ನು ಫೈನಲ್ನಲ್ಲಿ ಎದುರಿಸಲಿದ್ದಾರೆ.
ಇನ್ನೊಬ್ಬ ರಷ್ಯಾದ ಟೆನಿಸ್ ಆಟಗಾರ ಡೇನಿಯಲ್ ಮೆಡ್ವೆಡೆವ್ ಕೂಡ ಯುದ್ಧವನ್ನು ನಿಲ್ಲಿಸುವ ಬಗ್ಗೆ ಮಾತನಾಡಿದ್ದಾರೆ. ಮೆಡ್ವೆಡೆವ್ ಪ್ರಸ್ತುತ ಮೆಕ್ಸಿಕೋ ಓಪನ್ ಆಡುತ್ತಿದ್ದಾರೆ. ‘ಟೆನಿಸ್ ಆಟಗಾರನಾಗಿ, ನಾನು ಪ್ರಪಂಚದಾದ್ಯಂತ ಶಾಂತಿಯನ್ನು ಉತ್ತೇಜಿಸಲು ಬಯಸುತ್ತೇನೆ. ನಾವು ವಿವಿಧ ದೇಶಗಳಲ್ಲಿ ಆಡುತ್ತೇವೆ. ಈ ಸುದ್ದಿಗಳನ್ನು ಕೇಳುವುದು ಸುಲಭವಲ್ಲ. ನನಗೆ ಶಾಂತಿ ಬೇಕು.’ ಎಂದು ಮೆಡ್ವೆಡೆವ್ ಹೇಳಿದ್ದಾರೆ.
ಮೆಡ್ವೆಡೆವ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದ್ದಾರೆ. ಇಂದು ಅವರು 21 ಬಾರಿಯ ಗ್ರ್ಯಾಂಡ್ ಸ್ಲಾಮ್ ಚಾಂಪಿಯನ್ ರಾಫೆಲ್ ನಡಾಲ್ ಅವರನ್ನು ಎದುರಿಸಲಿದ್ದಾರೆ.








