ಸೆಲ್ಫಿಷ್ ರಾಹುಲ್.. ಗಾಯಕ್ವಾಡ್ ಗೆ ಚಾನ್ಸ್ ನೀಡಿ..
ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯನ್ನು ಸೋತಿರುವ ಟೀಂ ಇಂಡಿಯಾ, ಈಗ ಒಂದು ಪಂದ್ಯ ಬಾಕಿ ಇರುವಂತೆಯೇ ಏಕದಿನ ಸರಣಿಯನ್ನು ಎದುರಾಳಿಗೆ ಬಿಟ್ಟುಕೊಟ್ಟಿದೆ. ಕೊಹ್ಲಿ ನಾಯಕತ್ವದಿಂದ ಕೆಳಗಿಳಿದ ನಂತರ ರೋಹಿತ್ ಬದಲಿಗೆ ನಾಯಕನಾಗಿ ಆಯ್ಕೆಯಾದ ಕೆಎಲ್ ರಾಹುಲ್ ಗೆ ನಿಜವಾಗಿಯೂ ಬ್ಯಾಡ್ ಲಕ್. ಅವರು ನಾಯಕತ್ವ ವಹಿಸಿದ ಮೊದಲ ಸರಣಿಯಲ್ಲಿ ಟೀಂ ಇಂಡಿಯಾ ಸೋತಿದೆ.
ಈ ಮಧ್ಯೆ ಗಾಯಕ್ವಾಡ್ ಅವರಂತಹ ಪ್ರತಿಭಾವಂತ ಆಟಗಾರನನ್ನು ಬೆಂಚ್ಗೆ ಸೀಮಿತಗೊಳಿಸಿ ಕೆ.ಎಲ್ ದೊಡ್ಡ ತಪ್ಪು ಮಾಡುತ್ತಿದ್ದಾರೆ. ವೆಂಕಟೇಶ್ ಅಯ್ಯರ್ ಅವರನ್ನು ತಂಡದಿಂದ ತೆಗೆದು ರುತುರಾಜ್ ಗೆ ಅವಕಾಶ ನೀಡುವುದು ಒಳಿತು ಎಂದು ಹಲವರು ವಾದಿಸುತ್ತಿದ್ದಾರೆ. ಇನ್ನು ಕೆಲವರು ಒಂದು ಹೆಜ್ಜೆ ಮುಂದೆ ಹೋಗಿ ಕೆ.ಎಲ್.ರಾಹುಲ್ ಸ್ವಾರ್ಥಿಯಾಗಿದ್ದು, ಹೀಗಾಗಿಯೇ ರುತುರಾಜ್ ಅವರನ್ನು ತುಳಿಯುತ್ತಿದ್ದಾರೆ ಎಂದು ಟೀಕೆ ಮಾಡುತ್ತಿದ್ದಾರೆ.
Selfish KLR denying an opportunity to Ruturaj Gaikwad by opening instead of playing in the middle order just because he stole the Orange Cap from him 😭😭😭😭
— ` (@FourOverthrows) January 19, 2022
ಅಂದಹಾಗೆ ರುತುರಾಜ್ ವಿಜಯ್ ಹಜಾರೆ ಟ್ರೋಫಿಯಲ್ಲಿ ಸತತ ಶತಕ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾ ಸರಣಿಗೆ ಆಯ್ಕೆಯಾಗಿದ್ದಾರೆ. ರುತುರಾಜ್ 14 ನೇ ಆವೃತ್ತಿಯ ಐಪಿಎಲ್ನಲ್ಲಿ ಟಾಪ್ ಸ್ಕೋರರ್ ಆಗಿ ಆರೆಂಜ್ ಕ್ಯಾಪ್ ಪಡೆದಿದ್ದಾರೆ. ಹೀಗಿದ್ದರೂ ಅವರನ್ನ ಯಾಕೆ ಪರಿಗಣಿಸುತ್ತಿಲ್ಲ. ಸೂರ್ಯಕುಮಾರ್ ಯಾದವ್ ಅವರನ್ನು ಅಂತಿಮ ತಂಡಕ್ಕೆ ಏಕೆ ಪರಿಗಣಿಸಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ.
ಜೊತೆಗೆ ಡ್ರೆಸ್ಸಿಂಗ್ ರೂಂನಲ್ಲಿ ಟೀಂ ಇಂಡಿಯಾ ಎರಡು ಹೋಳಾಗಿದೆ ಎಂಬ ವರದಿಗಳು ಬಂದಿವೆ. ಕೊಹ್ಲಿ ಹಾಗೂ ಕೆಎಲ್ ರಾಹುಲ್ ಶುರುವಾಗಿದೆಯಂತೆ.
ಇನ್ನೊಂದು ಟ್ರಿಕಿ ವಿಷ್ಯ ಏನಪ್ಪಾ ಅಂದ್ರೆ, ಇತ್ತೀಚಿನ ದಿನಗಳಲ್ಲಿ ಕೊಹ್ಲಿ ನಾಯಕತ್ವದ ಆರು ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋತಿದ್ದು ಒಂದೇ ಒಂದು ಪಂದ್ಯದಲ್ಲಿ. ಆದ್ರೆ ಕೊಹ್ಲಿ ನಾಯಕತ್ವ ವಹಿಸದ ಎಲ್ಲಾ ಪಂದ್ಯಗಳಲ್ಲಿ ಟೀಂ ಇಂಡಿಯಾ ಸೋತಿದೆ.