ರುತುರಾಜ್ ಗಾಯಕ್ವಾಡ್ ಪರ ಆಕಾಶ್ ಚೋಪ್ರಾ ಬ್ಯಾಟ್ Ruturaj Gayakwad saaksha tv
ಟೀಂ ಇಂಡಿಯಾದ ದಕ್ಷಿಣಾ ಆಫ್ರಿಕಾ ಪ್ರವಾಸ ಭಾರಿ ಮಹತ್ವ ಪಡೆದುಕೊಂಡಿದೆ. ಇತಿಹಾಸ ನಿರ್ಮಿಸುವ ನಿಟ್ಟಿನಲ್ಲಿ ಟೀಂ ಇಂಡಿಯಾ ಈ ಬಾರಿ ಆಫ್ರಿಕಾ ನೆಲದಲ್ಲಿ ಕಾಲಿಟ್ಟಿದೆ. ಆಫ್ರಿಕಾ ವಿರುದ್ಧ ಟೀಂ ಇಂಡಿಯಾ ಮೂರು ಟೆಸ್ಟ್ ಮತ್ತು ಮೂರು ಏಕದಿನ ಪಂದ್ಯಗಳನ್ನ ಆಡಲಿದೆ.
ಟೆಸ್ಟ್ ಸರಣಿಗಾಗಿ ಬಿಸಿಸಿಐ ಈಗಾಗಲೇ ತಂಡವನ್ನು ಪ್ರಕಟಿಸಿದ್ದು, ತಂಡ ಆಫ್ರಿಕಾ ನೆಲದಲ್ಲಿ ಕಾಲಿಟ್ಟಿದೆ.
ಇತ್ತ ರೋಹಿತ್ ಶರ್ಮಾ ಏಕದಿನ ಸರಣಿಗೆ ಸಜ್ಜಾಗಿದ್ದು, ತಂಡದಲ್ಲಿ ಯಾರೆಲ್ಲ ಇರಲಿದ್ದಾರೆ ಅನ್ನೋ ಕುತೂಹಲ ಎಲ್ಲರಲ್ಲೂ ಮೂಡಿದೆ. ಈ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಪ್ರತಿಕ್ರಿಯೆ ನೀಡಿದ್ದು, ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಪರ ಬ್ಯಾಟ್ ಬೀಸಿದ್ದಾರೆ.
ಈ ಕುರಿತು ತಮ್ಮ ಯುಟ್ಯೂಬ್ ಚಾನಲ್ ನಲ್ಲಿ ಮಾತನಾಡಿರುವ ಅವರು, ಟೀಂ ಇಂಡಿಯಾದ ಯುವ ಬ್ಯಾಟರ್ ರುತುರಾಜ್ ಗಾಯಕ್ವಾಡ್ ಉತ್ತಮ ಲಯದಲ್ಲಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಅಬ್ಬರಿಸಿದ್ದ ರುತುರಾಜ್, ಕೇವಲ ಐದು ಪಂದ್ಯಗಳಲ್ಲಿ 603 ರನ್ ಗಳಿಸಿದ್ದಾರೆ. ಇದರಲ್ಲಿ ನಾಲ್ಕು ಸೆಂಚೂರಿಗಳು ಸೇರಿವೆ. ರುತುರಾಜ್ ಬ್ಯಾಟಿಂಗ್ ಬಗ್ಗೆ ಚೋಪ್ರಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಗೆ ಅವರ ಆಯ್ಕೆ ಖಚಿತ ಎಂದಿದ್ದಾರೆ.
ವಿಜಯ್ ಹಜಾರೆ ಟ್ರೋಫಿಯಲ್ಲಿ ನಾವು ಮೊದಲು ರುತುರಾಜ್ ಗಾಯಕ್ವಾಡ್ ಬಗ್ಗೆ ಮಾತನಾಡಬೇಕು. ರುತುರಾಜ್ ಆ ಟೂರ್ನಿಯಲ್ಲಿ ನಾಲ್ಕು ಸೆಂಚೂರಿಗಳನ್ನ ಸಿಡಿಸಿದ್ದಾರೆ. ಅದರಲ್ಲೂ ಸತತವಾಗಿ ಮೂರು ಶತಕಗಳನ್ನ ಬಾರಿಸಿದ್ದಾರೆ. ಅದಷ್ಟೆ ಅಲ್ಲದೇ ಆತನ ವಿಕೆಟ್ ಪಡೆಯಲು ಬೌಲರ್ ಗಳು ಪರದಾಡಿದರು ಎಂದು ಹೇಳಿದ್ದಾರೆ.