13 ನೇ ಆವೃತ್ತಿಯ ಐಪಿಎಲ್ ನಲ್ಲಿ ಇಂದು ಕೊಲ್ಕತ್ತಾ ನೈಟ್ ರೇಡರ್ಸ್ ತಂಡ, ಸನ್ ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಪಂದ್ಯದಲ್ಲಿ ಸೋತಿರುವ ಎರಡೂ ತಂಡಗಳು ಇಂದು ಗೆಲುವಿಗಾಗಿ ಗುದ್ದಾಡಲಿವೆ. ಆರ್ ಸಿಬಿ ವಿರುದ್ಧ ಉತ್ತಮ ಪ್ರದರ್ಶನದ ಹೊರತಾಗಿಯೂ ಸೋಲುಂಡ ಹೈದರಾಬಾದ್ ಇಂದು ಗೆಲ್ಲುವ ವಿಶ್ವಾಸದಲ್ಲಿದೆ. ಇತ್ತ ಮುಂಬೈ ವಿರುದ್ಧ 49 ರನ್ ಗಳ ಅಂತರದಲ್ಲಿ ಸೋತ ಕೆಕೆಆರ್ ರೈಸರ್ಸ್‍ಗೆ ಶಾಕ್ ನೀಡಲು ತಯಾರಿ ನಡೆಸಿವೆ.
ಎರಡೂ ತಂಡಗಳಲ್ಲೂ ಬದಲಾವಣೆ
ಗೆಲುವು ಒಂದೇ ಮಂತ್ರವಾಗಿಸಿಕೊಂಡು ಇಂದು ಮೈದಾನಕ್ಕೆ ಇಳಿಯುವ ಕೆಕೆಆರ್ -ಎಸ್ ಆರ್ ಹೆಚ್ ಎರಡು ತಂಡಗಳಲ್ಲಿ ಕೆಲ ಬದಲಾವಣೆಗಳು ಆಗುವ ಸಾಧ್ಯತೆಗಳಿವೆ. ಹೈದರಾಬಾದ್ ತಂಡದಲ್ಲಿ ಮಿಡಲ್ ಆರ್ಡರ್ ನಲ್ಲಿ ಕೆಲ ಚೇಂಜಸ್ ಆಗುವ ಸಾಧ್ಯತೆಗಳಿವೆ. ಮುಖ್ಯವಾಗಿ ಮಾರ್ಷ್ ಸ್ಥಾನಕ್ಕೆ ಹೋಲ್ಡರ್ ಬರುವ ಸಾಧ್ಯತೆಗಳಿವೆ.
ಇತ್ತ ಕೆಕೆಆರ್ ತಂಡಕ್ಕೆ ಬರೋದಾದ್ರೇ ಬೌಲಿಂಗ್ ವಿಭಾಗದಲ್ಲಿ ಪ್ರಸಿದ್ಧ್ ಕೃಷ್ಣಗೆ ಇಂದಿನ ಪಂದ್ಯದಲ್ಲಿ ಚಾನ್ಸ್ ಸಿಗುವ ಸಾಧ್ಯತೆಗಳಿವೆ. ಬ್ಯಾಟಿಂಗ್ ವಿಭಾಗದಲ್ಲಿ ಯಾವುದೇ ಬದಲಾವಣೆಗಳು ಆಗದೇ ಇದ್ದರೂ, ಬ್ಯಾಟಿಂಗ್ ಆರ್ಡರ್ ನಲ್ಲಿ ಕೆಲ ಚೇಂಜಸ್ ಮಾಡಬಹುದು.
ತಂಡಗಳ ಬಲಾಬಲ
ಹೈದರಾಬಾದ್ : ಹೈದರಾಬಾದ್ ತಂಡಕ್ಕೆ ಬೌಲಿಂಗೇ ಆನೆಬಲ. ಆದ್ರೆ ಕಳೆದ ಪಂದ್ಯದಲ್ಲಿ ಹೇಳಿಕೊಳ್ಳುವ ಪ್ರದರ್ಶನ ನೀಡಲಿಲ್ಲ. ಆದರೂ ಯಾವುದೇ ಸಂದರ್ಭದಲ್ಲೂ ಕಮ್ ಬ್ಯಾಕ್ ಮಾಡುವ ತಾಕತ್ತು ಹೊಂದಿದೆ. ಬ್ಯಾಟಿಂಗ್ ನಲ್ಲಿ ಓಪನರ್ ಗಳಾದ ಡೇವಿಡ್ ವಾರ್ನರ್, ಜಾನಿ ಬೈಸ್ಟೋರ್ವ್, ಮನೀಷ್ ಪಾಂಡೆ ಮಿಂಚಿದರೇ ಹೈದರಾಬಾದ್ ಗೆಲುವು ಪಕ್ಕ. ಇನ್ನು ಬೌಲಿಂಗ್ ನಲ್ಲಿ ಭುವನೇಶ್ವರ್, ಸಂದೀಪ್ ಶರ್ಮಾ, ರಷೀದ್ ಖಾನ್ ಎದುರಾಳಿಗಳಿಗೆ ಸಿಂಹಸ್ವಪ್ನವಾಗಬಲ್ಲರು.. ಇಂದಿನ ಪಂದ್ಯದಲ್ಲಿ ಜೇಸನ್ ಹೋಲ್ಡರ್ ಗೆ ಚಾನ್ಸ್ ಸಿಕ್ಕದೇ ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಹೈದರಾಬಾದ್ ಬಲಿಷ್ಠವಾಗಿರಲಿದೆ..
ಗೆಲುವಿನ ಲಯವನ್ನು ಕಳೆದುಕೊಳ್ಳುತ್ತಿದೆಯಾ ಚೆನ್ನೈ ಸೂಪರ್ ಕಿಂಗ್ಸ್
ಕೊಲ್ಕತ್ತಾ ನೈಟ್ ರೈಡರ್ಸ್ : ಮೇಲ್ನೋಟಕ್ಕೆ ತಂಡ ತುಂಬಾ ಬಲಿಷ್ಠವಾಗಿದ್ದರೂ ಸಾಮಥ್ರ್ಯಕ್ಕೆ ತಕ್ಕ ಆಟವಾಡುತ್ತಿಲ್ಲ. ಬ್ಯಾಟಿಂಗ್ ವಿಭಾಗದಲ್ಲಿ ಶುಭ್ ಮನ್ ಗಿಲ್, ದಿನೇಶ್ ಕಾರ್ತಿಕ್, ಮಾರ್ಗನ್, ನರೈನ್, ರಸೇಲ್ ತಂಡಕ್ಕೆ ಬಲ ತುಂಬಿದರೇ, ಬೌಲಿಂಗ್ ನಲ್ಲಿ ಕುಲದೀಪ್ ಯಾದವ್, ನರೈನ್, ಕಮಿನ್ಸ್ ಪ್ರಮುಖ ಅಸ್ತ್ರಗಳಾಗಿದ್ದಾರೆ.
ಹೈದರಾಬಾದ್ ಮೇಲೆ ಕೊಲ್ಕತ್ತಾ ರೈಡ್ ಮುಂದುವರಿಯುತ್ತಾ..?
ಐಪಿಎಲ್ ನಲ್ಲಿ ಈ ಉಭಯ ತಂಡಗಳು ಇದುವರೆಗೂ 17 ಬಾರಿ ಮುಖಾಮುಖಿ ಆಗಿವೆ. ಇದರಲ್ಲಿ 10 ಬಾರಿ ಕೊಲ್ಕತ್ತಾ ಗೆಲುವು ಸಾಧಿಸಿದರೇ, 7 ಬಾರಿ ಹೈದರಾಬಾದ್ ಗೆದ್ದಿದೆ. ಇನ್ನು ಇಂದಿನ ಪಂದ್ಯ ಅಬುದಾಬಿಯಲ್ಲಿ ನಡೆಯುತ್ತಿದ್ದು, ಟಾಸ್ ಗೆದ್ದವರು ಫೀಲ್ಡಿಂಗ್ ಆಯ್ಕೆ ಮಾಡುವ ಸಾಧ್ಯತೆಗಳಿವೆ.








