SA League: ಪಂದ್ಯದ ವೇಳೆ ಟಿವಿ ನಿರೂಪಕಿಗೆ ಡಿಕ್ಕಿ ಹೊಡೆದ ಫೀಲ್ಡರ್
ಬುಧವಾರ ಸೆಂಚುರಿಯನ್‌ನಲ್ಲಿ ನಡೆದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ ಮತ್ತು MI ಕೇಪ್ ಟೌನ್ ನಡುವಿನ SA20 ಲೀಗ್ ಪಂದ್ಯದಲ್ಲಿ ಫೀಲ್ಡರ್ ಡಿಕ್ಕಿ ಹೊಡೆದ ಪರಿಣಾಮ ಪಾಕಿಸ್ತಾನಿ ಆಂಕರ್ ಜೈನಾಬ್ ಅಬ್ಬಾಸ್ ಬೌಂಡರಿ ಲೈನ್ ಆಚೆ ಕುಸಿದು ಬಿದ್ದಿದ್ದಾರೆ. ಜೈನಾಬ್ ಬೌಂಡರಿ ಗೆರೆಯಿಂದ ಹೊರಗೆ ನಿಂತು ಪಂದ್ಯದ ಕಾಮೆಂಟರಿ ಮಾಡುತ್ತಿದ್ದರು.
13ನೇ ಓವರ್‌ನಲ್ಲಿ ಸನ್‌ರೈಸರ್ಸ್ ಈಸ್ಟರ್ನ್ ಕೇಪ್‌ನ ಮಾರ್ಕೊ ಜಾನ್ಸನ್ ಅವರು ಮಿಡ್ ವಿಕೆಟ್ ಕಡೆಗೆ ಚೆಂಡನ್ನು ಅಟ್ಟಿದರು. ಫೀಲ್ಡರ್ ಬೌಂಡರಿ ತಡೆಯಲು ಬಂದು ಬಾಲ್ ನಿಲ್ಲಿಸಲು ಡೈವ್ ಮಾಡಿದಾಗ ಜೈನಾಬ್‌ಗೆ ಡಿಕ್ಕಿ ಹೊಡೆದರು. ಜೈನಾಬ್ ಬೌಂಡರಿ ಗೆರೆಯಲ್ಲಿಯೇ ಬಿದ್ದರು.
ಘಟನೆಯ ವಿಡಿಯೋವನ್ನು ಸೂಪರ್ ಸ್ಪೋರ್ಟ್ ಟಿವಿ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದೆ. ಈ ಬಗ್ಗೆ ಜೈನಾಬ್ ಮಾತನಾಡಿ, ನಾನು ಬದುಕುಳಿದಿದ್ದೇನೆ, ಆದರೆ ಅದು ಹೇಗೆ ಎಂದು ನನಗೆ ಈಗ ತಿಳಿದಿದೆ! ಎಂದಿದ್ದಾರೆ.
ಸನ್ ರೈಸರ್ಸ್ ಈಸ್ಟರ್ನ್ ಕೇಪ್ ಪಂದ್ಯವನ್ನು ಗೆದ್ದುಕೊಂಡಿತು
ಎಂಐ ಕೇಪ್ ಟೌನ್ ನೀಡಿದ್ದ 172 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಸನ್‌ರೈಸರ್ಸ್ ಈಸ್ಟರ್ನ್ ಕೇಪ್ 2 ವಿಕೆಟ್‌ಗಳಿಂದ ಗೆದ್ದಿದೆ.
ಸನ್ ರೈಸರ್ಸ್ 100 ರನ್ ಗಳಿಸುವ ಮುನ್ನವೇ ಐದು ವಿಕೆಟ್ ಕಳೆದುಕೊಂಡಿತ್ತು. ಆದರೆ ಕೇವಲ 27 ಎಸೆತಗಳಲ್ಲಿ 66 ರನ್ ಗಳಿಸಿದ ಮಾರ್ಕೊ ಜಾನ್ಸೆನ್ ಅವರ ಇನ್ನಿಂಗ್ಸ್ ಫಲವಾಗಿ ಪಂದ್ಯ ಗೆದ್ದುಕೊಂಡಿತು. ಎಡಗೈ ವೇಗದ ಬೌಲರ್ ಜೆನ್ಸನ್ ಅವರ ಇನ್ನಿಂಗ್ಸ್‌ನಲ್ಲಿ ಏಳು ಸಿಕ್ಸರ್ ಮತ್ತು ಮೂರು ಬೌಂಡರಿಗಳನ್ನು ಬಾರಿಸಿದರು. ಅವರ ಸ್ಟ್ರೈಕ್ ರೇಟ್ 244.44 ಆಗಿತ್ತು.
ದಕ್ಷಿಣ ಆಫ್ರಿಕಾ ಲೀಗ್ ಮಿನಿ ಐಪಿಎಲ್
ದಕ್ಷಿಣ ಆಫ್ರಿಕಾ ಲೀಗ್‌ನಲ್ಲಿ 6 ತಂಡಗಳ ನಡುವೆ 33 ಪಂದ್ಯಗಳು ನಡೆಯಲಿವೆ. ಈ ಲೀಗ್ ಅನ್ನು ಮಿನಿ ಐಪಿಎಲ್ ಎಂದೂ ಕರೆಯಬಹುದು. ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಸೇರಿದಂತೆ 6 ಐಪಿಎಲ್ ಫ್ರಾಂಚೈಸಿಗಳ ಒಡೆತನದಲ್ಲಿದೆ.







