ಕೂತಿದ್ದಳು ಅಂದು ಒಬ್ಬಳೇ ಕಾರಿಡಾರ್ ನಲ್ಲಿ ಜನರಿಂದ ದೂರ , ಸುಮ್ನನೇ ಅವಳ ಪಾಡಿಗವಳು ತನ್ನದೇ ಲೋಕದಲ್ಲಿ..
ಪ್ರಾಣ ಸ್ನೇಹಿತೆ ಪ್ರೀತಿಗಾಗಿ ತನ್ನ ಕೈಬಿಟ್ಟಿದ್ದ ನೋವಲ್ಲಿ ,,, ಇದ್ದ ಒಬ್ಬಳೇ ಗೆಳತಿ ಕಳೆದುಕೊಂಡ ಸಂಕಟದಲ್ಲಿ….
ಅಂದು ಬಂದು ಹಾಯ್ ಅಂದವಳು ಅವಳ ಹಳೆಯ ಗೆಳತಿ.. ಒಂದ್ ಐದಾರು ಹುಡಗಹುಡುಗಿರಿದ್ದ ಗುಂಪು ಅವಳ ಜೊತೆಗೆ ಬಂದಿತ್ತು ಅವಳು ಕುಳಿತಲ್ಲಿ..
ಅವಳೋ ಯಾರನ್ನೂ ಮಾತನಾಡಿಸುವ ಸ್ಥಿತಿಯಲ್ಲಿರಲಿಲ್ಲ, ಆದ್ರೂ ಹಾಯ್ ಮಾಡಿ ಎಲ್ಲರಿಗೂ ಅಲ್ಲಿಂದ ಸೈಡ್ ಗೆ ಹೋದಳು..
ಅದ್ರಲ್ಲಿ ಒಬ್ಬ ೬ ಅಡಿ ಉದ್ದದ ಗೋದಿ ಬಣ್ಣ ಸಾಧಾರಣ ಮೈಕಟ್ಟಿದ್ದ ಹುಡುಗನ ದೃಷ್ಟಿ ಪೂರ ಅವಳ ಮೇಲೇ ಇತ್ತು..
ಒಂದೇ ಸಮ ಅವಳನ್ನೇ ಗುರಾಯಿಸುತ್ತಿದ್ದ.. ಅವಳೂ ಗೊತ್ತಿದ್ರೂ ಗೊತ್ತಿಲ್ಲದವಳಂತೆ ಇದ್ದೂ, ಅವನನ್ನ ನೋಡುತ್ತಿದ್ದಳು..
ಅವನ ಕಣ್ಣಿನಲ್ಲಿನ ಜಾದೂಗೆ ಅವಳು ಮೊದಲ ನೋಟದಲ್ಲೇ ಆಕರ್ಷಿಸಿತಳಾಗಿದ್ದಳು…
ಕೊನೆಗೆ ಒಂದೇ ಸಮ ಅವಳನ್ನೇ ನೋಡುತ್ತಾ ಅಲ್ಲಿಂದ ಹೋದ.. ಅವಳೂ ಹೋದಳು.. ಇದೇ ಇಡೀ ರಾತ್ರಿ ಪೂರ ಅವಳ ಯೋಚನೆಯಾಗಿತ್ತು.. ನಿದ್ದೆ ಇಲ್ಲ ಊಟ ಇಲ್ಲ.. ಕಣ್ಣು ಮುಚ್ಚಿದ್ರು ಅವನದ್ದೇ ನೆನಪು ಬಿಟ್ಟರೂ ಅವನದ್ದೇ ನೆನಪು.. ನೆಮದಿಯೇ ಇರಲಿಲ್ಲ ಅಂದು ಮನಸ್ಸಿಗೆ..
ಅಷ್ಟೊತ್ತಿಗೆ ಬಂತು ಒಂದ್ ಹಾಯ್ ಎಂಬ ಮೆಸೇಜ್.. ಅವಳ ವಾಟ್ಸಾಪ್ ಗೆ
ಶಾಕ್ ಆಗಿ ಇದೆಂಥಾ ಅನ್ ನೌನ್ ನಂಬರ್ .. ಮೊಬೈಲ್ ಮತ್ತೆ ಸಿಮ್ ತೆಗೆದುಕೊಂಡು ವಾರ ಆಗಿಲ್ಲ ಅಂತ ಯೋಚನೆಯಲ್ಲಿದ್ದಾಗಲೇ ಅವನಂದ ಹಾಯ್… ಅವಳು ಶಾಕ್ ಅಲ್ಲಿ ಡಿಪಿ ನೋಡಿದ್ರೆ ಅದು ಅವನೇ…
ಈತ ಅವನೇ ಆ ಹುಡುಗನಾಗಿದ್ದ.. ಖುಷಿ ಪಡಲೋ ಭಯಪಡಲೋ.. ಅಂತ ಯೋಚಿಸುತ್ತಲೇ ಅವಳು ಧೈರ್ಯ ಮಾಡಿ ರಿಪ್ಲೈ ಮಾಡಿಯೇ ಬಿಟ್ಟಳು .. ಹಾಯ್ ….
ಆಕಡೆಯಿಂದ ಹಾಯ್ ಊಟ ಆಯ್ತ..??? ಹೂ…ಅಂದ್ಳು…. ನಿದ್ದೆ ಬರುತ್ತಿಲ್ವಾ ಅಂದ.. ಹೂ ಅಂದಳು.. ನಿಮ್ಮ ಡಿಪಿ ಸೂಪರ್ ಅಂದ.. ಹೂ ಥಾಂಕ್ಸ್ ಅಂದ್ಳು … ಎಲ್ಲದಕ್ಕೂ ಹೀಗೇ ಹೇಳ್ತಾ ಇದ್ದರೂ ಒಂದೆರೆಡು ದಿನ.. ನಂತರ ಅವನಿಂದ ಅವನ ಸ್ನೇಹಿತರು ಅವಳಿಗೆ ಹತ್ತಿರವಾದ್ರೂ.. ಅವಳ ಒಂಟಿತನ ದೂರಾಯ್ತು.. ಸ್ನೇಹಿತರಿಲ್ಲ ಅನ್ನೋ ದುಃಖ ಮಾಯವಾಯ್ತು..
ಹೀಗೆ ಒಬ್ಬಂಟಿಯಾಗಿದ್ದ ಅವಳ ಸುತ್ತ ಯಾವಾಗ ಸ್ನೇಹಿತರಿಂದ ಸುತ್ತುವರೆದಳೋ ಗೊತ್ತಿಲ್ಲ.. ಹೀಗೆ ದಿನ ಅವಳು ಅವರಿಗೆ ಕಾಯುವುದು ಅವರು ಅವಳಿಗಾಗಿ ಕಾಯುವುದು ಒಟ್ಟಾಗಿ ತಿನ್ನುವುದು ಸುತ್ತುವುದು ಓಡಾವುದು ಅವಳ ಜೀವನದಲ್ಲಿ ಖುಷಿಯೇ ಖುಷಿ ಇತ್ತು..
ನಡುವಲ್ಲಿ ಅವನಿಗೆ ಅವಳ ಮೇಲೆ ಮೇಲೆ ಅವನಿಗೆ ಅವಳ ಮೇಲೆ ಇದ್ದ ಭಾವನೆ ಸ್ನೇಹದಿಂದ ಪ್ರೀತಿಗೆ ತಿರುಗಿತ್ತು.. ಅವನ ಸೌಮ್ಯತೆ, ಶಾಂತ ಸ್ವಭಾವ, ತಾಳ್ಮೆಯ ಗುಣಕ್ಕೆ ಅವಳು ಕಳೆದು ಹೋಗಿದ್ದಳು..
ರಾತ್ರಿ ಹಗಲೂ ಇಬ್ಬರು ನಾನ್ ಸ್ಟಾಪ್ ಚಾಟಿಂಗ್ ಪೋನ್ ನಲ್ಲಿ ಟಾಕಿಂಗ್.. ಅವನದ್ದೇ ಧ್ಯಾನ ಅವಳಿಗೆ.. ಎಷ್ಟೋ ಜನ ಅವಳ ಹಿಂದೆ ಬಿದ್ದರೂ … ಆದ್ರೆ ಯಾರಿಗೂ ಕೇರ್ ಮಾಡಲಿಲ್ಲ..
ಒಂದಿನ ಮಧ್ಯಾಹ್ನ ಮನೆಗೆ ಹೋಗ್ತಿದ್ದ ಸಮಯ ಅವನು ಹಿಂದೆಯಿಂದ ಬೈಕ್ ನಲ್ಲಿ ರೋಸ್ ಹಿಡಿದು ಬಂದೋನೆ ಐ ಲವ್ ಯೂ ಅಂತ ಮಂಡಿಯೂರಿ ಎಲ್ಲರ ಮುಂದೆ ಪ್ರೇಮ ನಿವೇದನೆ ಮಾಡಿದ..
ಅವಳು ಆ ಕ್ಷಣ ಆಕಾಶದಲ್ಲಿ ತೇಲಾಡ್ತಿದ್ದಳು.. ಖುಷಿ ಎಕ್ಟೈಟ್ ಮೆಂಟ್ ಆದ್ರೂ ಭಯ.. ಹೀಗಿದ್ರೂ ಖುಷಿಯಿಂದ ಒಪ್ಪಿದ್ದಳು. ಅವನೇ ಸರ್ವಸ್ವ ಅಂತ ಇದ್ದಳು.. ಅವನು ಹೇಳಿದ ಹಾಗೆ ಯಾವ ಹುಡುಗರ ಜತೆಗೂ ಮಾತನಾಡುತ್ತಿರಲಿಲ್ಲ..
ಅವನಿಗೆ ಇಷ್ಟವಿಲ್ಲದ ಬಟ್ಟೆ ಹಾಕ್ತಾ ಇರಲಿಲ್ಲ.. ಜಡೆ ಹಾಕ್ತಾ ಇರಲಿಲ್ಲ.. ಅವನೇ ಎಲ್ಲ ಆಗಿದ್ದ.. ಅವನೇ ಸರ್ವಸ್ವ ಆಗಿದ್ದ..
ಅಷ್ಟರಲ್ಲೇ ಆಕೆ ಒಂದು ಮೂರ್ಖತನ ಮಾಡಿಬಿಟ್ಟಿದ್ದಳು.. ಮನೆಯವರ ಬಳಿ ಪ್ರೀತಿ ವಿಚಾರ ತಿಳಿಸಿ ಹೊಡೆಸಿಕೊಂಡು ಬಡೆಸಿಕೊಂಡು ಮನೆವರಿಗೂ ನೋವುಕೊಟ್ಟು ತಾನೂ ನೋವುಂಡು ಊಟ ತಿಂಡಿ ಬಿಟ್ಟು ಸಾಯಲೂ ವಿಫಲ ಪ್ರಯತ್ನ ಮಾಡಿ ಎಲ್ಲ ಆದಮೇಲೆ ಮನೆಯವರನ್ನ ಒಪಿಸಿದ್ದಳು.. ಆದ್ರೆ ಮನೆಯವತು ೩ ವರ್ಷಗಳ ನಂತರ ಮದುವೆ ಮಾಡಿಕೊಳ್ಳಬೇಕು ಅಲ್ಲೊ ವರೆಗೂ ಹೆಚ್ಚು ಸಲುಗೆ ಬೆಳೆಸದಂತೆ ಎಚ್ಚರಿಸಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರು.. ೧೦ ದಿನಗಳ ನಂತರ ಮನೆಯಿಂದ ಆಚೆ ಬಂದ ಆಕೆ ತೀರ ಸೊರಗಿ ಹೋಗಿದ್ದಳು.. ಆದ್ರೆ ಅವನ ಬಳಿ ಈ ವಿಚಾರ ಹೇಳೋ ತವಕ ಓಡೋಡಿ ಕಾಲೇಜ್ ಬಳಿ ಹೋದಳು ..
ಅಲ್ಲಿ ಆತ ಮತ್ತೊಬ್ಬಳನ್ನ ತೊಡೆ ಮೇಲೆ ಮಲಗಿಸಿಕೊಂಡು ಮುದ್ದಾಡ್ತಿದ್ದದ್ದನ್ನ ನೋಡಿದ ಅವಳಿಗೆ ಅವನ ಇನ್ನೊಂದು ಮುಖ ಸುನಾಮಿಯಂತೆ ಅಪ್ಪಳಿಸಿತ್ತು..
ಆದ್ರೆ ಅವಳು ಹುಚ್ಚಿಯಂತೆ ವರ್ತಿಸಿದ್ದು ಸುಳ್ಳಲ್ಲ ಅವನು ಮತ್ತೆ ಅವಳಿಗೆ ಸಾರ್ವಜನಿಕವಾಗಿ ತನ್ನ ಮೆಟ್ಟು ಬಿಚ್ಚಿಪಟ ಪಟ ಕೊಟ್ಟು ಎಲ್ಲರ ಮುಂದೆ ಅವರನ್ನ ಅವಮಾನಿಸಿಬಿಟ್ಟಳು.
ಅವಳದ್ದೂ ತಪ್ಪೇನಿತ್ತು.. ಎಳೆ ಮನಸ್ಸು ,, ಪ್ರಥಮ ಪ್ರೀತಿ ೧೮ರ ಹರೆಯ ಸಾಕು ಇಷ್ಟು , ಆ ಸನ್ನಿವೇಶ ಅರ್ಥ ಮಾಡಿಕೊಳ್ಳಲು..
ಅಲ್ಲಿಂದ ಅವಳು ಅಳದ ದಿನ ಇಲ್ಲ ಅವನ ನೆನಪಿಸಿಕೊಳ್ಳದ ಕ್ಷಣವಿಲ್ಲ.. ಅವನ ವಾಪಸ್ ಬರುವಿಕೆಗೆ ಹೊರದ ಹರಕೆ ಇಲ್ಲ.. ಸುತ್ತದ ಮಂದಿರಗಳಿಲ್ಲ.. ಅವನಿಗಾಗಿ ಕಾದುಕಾದು ಸಾಕಾದಳು..
೨ ವರ್ಷ ಸಂಕಟ ನೋವು , ಮಾನಸಿಕ ಖಿನತೆ , ಅವನ ನೆನಪಲ್ಲೇ ವ್ಯರ್ಥವಾಯ್ತು.. ಅವನು ಮಾತ್ರ ಒಬ್ಬಳಲ್ಲ ಇಬ್ಬರಲ್ಲ ಇನ್ನೂ ಅದೆಷ್ಟು ಜನ ಲೆಕ್ಕವಿಲ್ಲ ಸಂತೋಷವಾಗಿಯೇ ಇದ್ದ..
ಆದ್ರೆ ಅವನೆಲ್ಲಾ ಸ್ನೇಹಿತರು ಅವನ ಕೈ ಬಿಟ್ಟರು.. ಅವಳ ಪರವಾದ್ರೂ ಅವನೊಂದಿಗೆ ಎಲ್ಲಾ ಸಂಬಂಧ ಕಳೆದುಕೊಂಡಿದ್ದರು.
ಮೋಸದ ಪರಿಣಾಮ ಅವಳು ಕಲ್ಲಾದ್ಲು.. ಮೃದು ಸ್ವಭಾವದಿಂದ ಸ್ವಾಭಿಮಾನಿ , ಗಟ್ಟಿಗಿತ್ತಿಯಾದಳು.. ಅಮಾಯಕಳಿಂದ ಬಜಾರಿಯಾದಳು.. ಯಾರಾದರೋ ಓಯ್ ಅಂದರೆ ನಡುಗುತ್ತಿದ್ದವಳ ಬಳಿ ಬಂದರೂ ಮುಂದಿರುವವರು ಅವಳ ಭಾವನೆನೋಡಿಯೇ ಹೆದರಿಕೊಳ್ಳಬೇಕು.. ಆ ರೀತಿಯಾದಳು. ಪ್ಯಾಷನ್ ಗೊತ್ತಿಲ್ಲದವಳಿಂದ , ಪ್ಯಾಷನ್ ಐಕಾನ್ ಆದಳು.. ನೂರು ಜನ ಬಂದು ಐಲವ್ ಯೂ ಹೇಳಿದ್ರೂ ನಕ್ಕಿ ಸುಮ್ನಾಗ್ತಿದ್ದಳು… ಮಧ್ಯದಲ್ಲಿ ಆತ್ಮಹತ್ಯೆ ಅಂತ ಹೇಡಿ ಕೆಲಸಕ್ಕೆ ಕೈ ಹಾಕಿ ಧೈರ್ಯ ಬಾರದೇ ಮನೆಯವರಿಗಾಗಿ , ಮತ್ತಿನ್ನೇನೋ ಕಾರಣಗಳಿಂದ ಆ ಆಲೋಚನೆ ಬಿಟ್ಟಳು..
೨ವರ್ಷ ಕಾದಿದ್ದು ಸಾಕು ಕಣ್ಣೀರು ವ್ಯರ್ಥಮಾಡಿದ್ದು ಸಾಕು ಮನೆಯವರನ್ನ ನೋಯಿಸಿದ್ದು ಸಾಕು.. ಅಂತ ಬದಲಾದಳು.. ಬದಲಾದ ಅವಳು ಅನೇಕರಿಗೆ ಸ್ಪೂರ್ತಿಯಾದಳು… ಎಲ್ಲ್ರಿಗೂ ಇಷ್ಟವಾದಳು.. ಬಿಂದಾಸ್ ಆಗಿ ಲೈಫ್ ನ ಎಂಜಾಯ್ ಮಾಡೋದನ್ನ ಕಲಿತಳು.. ಅವಳನ್ನ ಪ್ರೀತಿಸೋದ ಕಲಿತಳು..
ಹೀಗೆ ಕಾಲೇಜ್ ಲಾಸ್ಟ್ ಯಿಯರ್ ನಲ್ಲಿ ಅವನನ್ನ ಸಂಪೂರ್ಣ ಮರೆತಳು.. ಆದ್ರೆ ಅವನು ಮತ್ತೆ ಬಂದ … ಅವಳು ಬೇಕಂತ ಬಂದ.. ಅವಳನ್ನ ಬಿಟ್ಟಿರೋಕಾಗ್ತಿಲ್ಲ ಅಂತ ಗೋಗರೆದ.. ಕಣ್ಣೀರಿಟ್ಟ.. ಕಾಲಿಗೆ ಬಿದ್ದ. ಆದ್ರೆ ಮೊಸಳೆ ಕಣ್ಣೀರಿಗೆ ಕರಗೋ ಹಳೆಯ ಅವಳು ಸತ್ತು ಹೋಗಿದ್ದಳು.. ಹೊಸ ಅವಳಲ್ಲಿ ಯಾವುದೇ ಫೀಲಿಂಗ್ಸ್ ಗೆ ಜಾಗ ಇರಲಿಲ್ಲ..
ಅವನು ತಂದೆ , ಇಬ್ಬರು ಅಣ್ಣಂದಿರನ್ನ ಕಳೆದುಕೊಂಡಿದ್ದ.. ಅಣ್ಣನ ಮಗುವನ್ನ ಕಳೆದುಕೊಂಡ, ತಾಯಿಯನ್ನ ಕಳೆದುಕೋಂಡ ,, ದುಡ್ಡು ಕಾಸು ಕಳೆದುಕೊಂಡು ಬೀದಿಗೆ ಬಂದಿದ್ದ..
ಅವಳ ಒಂದೊಂಂದು ಹನಿ ಕಣ್ಣೀರಿನ ಶಾಪ ಅವನನ್ನ ಸುಮ್ಮನೆ ಬಿಡಲಿಲ್ಲ.. ಅವನಿಗೂ ಮೋಸ ಹೋದಾಗ ಆಗುವ ನೋವು ಅರ್ಥ ವಾಗಿತ್ತು.. ಯಾರಗಾಗಿ ಅವಳಿಗೆ ಮೋಸ ಮಾಡಿದನೋ.. ಅವಳು ಅವನನ್ನೇ ಬಿಟ್ಟು ಮತ್ತೊಬ್ಬನ ಜೊತೆ ಓಡಿ ಹೋದಳು.. ಆಗ ಅವನಿಗೆ ಅವಳ , ಪ್ರೀತಿ ,, ನೋವು ಅರ್ಥ ಆಗಿರಬೇಕು..
ಆವಳು ಅವನಿಗೆ ಧೈರ್ಯ ತುಂಬಿದಳು… ಆದ್ರೆ ಪ್ರೇಮ ನಿವೇದನೆ ತಿರಸ್ಕರಿಸಿದಳು.. ವರ್ಷರ್ಗಳು ಉರುಳಿತು.. ಅವನ ಮೇಲಿನ ಭಾವನೆ ಸಾಯಿತು.. ಆದ್ರೆ ಮತ್ತೊಬ್ಬರ ಮೇಲೆ ಪ್ರೀತಿ ಹುಟ್ಟಲಿಲ್ಲ..
ಇದನ್ನ ಅವಳಿಗಾದ ಮೋಸ ಅನ್ನಲೇ.? , ಅವಳು ಬಲಗೊಳ್ಳಲು ಅನಿವಾರ್ಯವಿದ್ದ ಅನುಭವ ಅನ್ನಲೇ..? ಪ್ರಥಮ ಪ್ರೀತಿ ಕಲಿಸಿದ ಜೀವನದ ಪಾಠ ಎನ್ನಲೇ…?
ಇದು ನನ್ನ… ಸ್ನೇಹಿತೆಯೊಬ್ಬಳ ಜೀವನದ ಅನುಭವ..
– ನಿಹಾರಿಕಾ ರಾವ್ –