ಹೆಣ್ಣಾಗಿ ಹುಟ್ಟಿದ್ದು ಶಾಪವೋ ವರವೋ…
ಎಲ್ಲ ಘಟ್ಟದಲ್ಲು ಕಷ್ಟ ಅನುಭವಿಸುವುದು, ಅವಮಾನ , ಅಪಮಾನ ಸಹಿಸುವುದು ಹೆಣ್ಣು ಮಾತ್ರವೇನಾ…?
ಪ್ರತಿ ತಿಂಗಳು ನೋವು, ದೈಹಿಕವಾಗಿಯೂ , ಮಾನಸಿಕವಾಗಿಯೂ.. ಪುರುಷರ ಸುಖದಲ್ಲೂ ಮಹಿಳೆಯರಿಗೆ ನೋವೇ..?
ಒಬ್ಬ ಪುರುಷನೇ ತಪ್ಪು ಮಾಡಲಿ, ನೋಡದೇ ಮಾಡದೇ ಮಾಡದೇ ಇಡೀ ಸಮಾಜ ಆ ಮಹಿಳೆಯದ್ದೇ ತಪ್ಪು ಅಂತ ಅಪಮಾನ ಹೊರಿಸಿಬಿಡುತ್ತೆ.. ನಾವು ಸರಿಯಾಗಿರಬೇಕು ಅನ್ನುತ್ತೆ.. ಅದೇ ಸಮಾಜ ಯಾಕೆ ಪುರುಷರಿಗೆಮಹಿಳೆಯರ ಜೊತೆ ಹೇಗೆ ನಡೆದುಕೊಳ್ಳಬೇಕು ಅಂತ ಹೇಳಿ ಕೊಡಲು ಪ್ರಾರಂಭಿಸಬಾರದು.. ಪ್ರತಿ ವಿಚಾರದಲ್ಲೂ ಕೆಟ್ಟ ಕಣ್ಣು ಗಳಿಗೆ ಗುರುಯಾಗುವವರು ನಾರಿಯರೇ ಯಾಕಾಗಬೇಕು.. ದೇವರು ನಮಗೆ ಹುಟ್ಟಿನಿಂದಲೇ ಕೊಡುವ ನೋವು ಸಾಲದ..
ಮದುವೆಯಾದ ಮೇಲೆ ಗಂಡ , ಗಂಡನಮನೆ ಮಕ್ಕಳಿಗೆ ಅಂಜಿ ಬದುಕಬೇಕು.. ಪ್ರತಿ ಹೆಜ್ಜೆ ಹೆಜ್ಜೆಯಲ್ಲು ನಮ್ಮನ ನಾವು ಜೋಪಾನ ಮಾಡಿಕೊ.ಡು ಬರಬೇಕು.. ಅದೇ ಪುರುಷರಿಗೆ ಯಾಕೆ ಇಷ್ಟ್ ಫ್ರೀಡಂ.. ರಾತ್ರಿಯಲ್ಲಿ ಎಲ್ಲಿ ಬೇಕಾದ್ರೂ ಸ್ವಚ್ಚಂದವಾಗಿ ಓಡಾಡಬಹುದು.. ಅಂತಹದ್ದೇ ಸಮಾಜ ಮಹಿಳೆಯರಿಗೆ ಸೃಷ್ಟಯಾಗುದು ಯಾವಾಗ..
ಅತ್ಯಾಚಾರದಂತಹ ಪ್ರಕರಣಗಳಿಗೆ ಕನಸಲ್ಲೂ ನಡುಗುವಂತಹ ಶಿಕ್ಷೆ ಜಾರಿ ತಂದಾಗ.. ಮಹಿಳೆಯರ ಬಟ್ಟೆ ಮೇಲೆ ಕೆಲ ಇಮ್ರಾನ್ ಖಾನ್ ನಂತಹ ದೊಡ್ಡ ವ್ಯಕ್ತಿಗಳು ( ಪಾಕಿಸ್ತಾನ ಪ್ರಧಾನಿ) ಎಲ್ಲಾ ಆರೋಪ ಹೊರಿಸಿಬಿಡ್ತಾರೆ.. ಅವರು ಧರಿಸುವ ಬಟ್ಟೆಯೇ ಕಾಮೋತ್ತೇಜನ ನೀಡುತ್ತದೆ ಅನ್ನುತ್ತಾರೆ… ನಾನು ಕೇಳುವೆ.. ಹಾಗಾದ್ರೆ 1 ,2,3,4 ,5,6 ಹೀಗೆ ಪುಟ್ಟಮಕ್ಕಳ ಮೇಲೂ ದೌರ್ಜನ್ಯವಾಗುತ್ತೆ ಬಟ್ಟೆಯ ಮೇಲೆಯೇ ಆರೋಪ ಹೊರುಸಿವಿರಾ..?
ಮೈತುಂಬಾ ಬಟ್ಟೆ ಧರಿಸಿದ ಹುಡುಗಿರನ್ನ ಚುಡಾಯಿಸುದು.. ಅದರಲ್ಲು ಹುಡುಗಿರದ್ದೇ ತಪ್ಪಾ.. ಪ್ರೀತಿ ಒಪ್ಪದೇ ಹೋದ್ರೆ ಆಸಿಡ್ ಸುರಿಯುವುದು… ಪ್ರೀತಿ ಒಪ್ಪಿದ್ರೆ , ಮನೆಯವರಿಂದ ದೂರ ಇರುವುದು ಹುಡುಗಿಯರೇ ಅಲ್ವೇ..
ಎಲ್ಲದರಲ್ಲೂ ಯಾಕೆ ದೈಹಿಕವಾಗಿ , ಮಾನಸಿಕವಾಗಿ , ಸ್ವಾಭಾವಿಕ, ಸಾಮಾಜಿಕವಾಗಿ , ಮಹಿಳೆಯರಿಗೆ ನೋವು …
ನಾನು ಮಹಿಳೆಯಾಗಿ ಇದನ್ನ ಬರೆದಿದ್ದೇನೆ.. ಮಹಿಳೆಯರಿಂದ ಪುರುಷರ ಜೀವನವೂ ಹಾಳಾಗಿರೋದನ್ನ ನೋಡಿದ್ದೇನೆ.. ಸಮಾಜಕ್ಕೆ ಕೆಡುಕು ಅನ್ನುವಂತಹ ಮಹಿಳೆಯರನ್ನೂ ನೋಡಿದ್ದೇನೆ.. ಮಹಿಳೆಯರನ್ನ ದೇವರಂತೆ ಕಾಣುವ ಪುರುಷರನ್ನೂ ನೋಡಿದ್ದೇನೆ ( ನಮ್ಮ ತಂದೆಯೂ ಒಬ್ಬರು )..
ಮಹಿಳೆಯರಪರ ವಿರುವ ಕಾನೂನಿನ ದುರುಪಯೋಗ ಪಡೆಸಿಕೊಡಂತ ಹುಡುಗಿಯರನ್ನೂ ನೋಡಿದ್ದೇನೆ.. ಆದ್ರೆ ನಾನು ಇದು ಬರೆದಿದ್ದು ಇಂದು ಮಹಿಳೆಯರ ದೃಷ್ಟಿ ಕೋನದಲ್ಲಿ ..
ಪುರುಷರು ಯಾವ ರೀತಿ ಸಮಸ್ಯೆ ಅನುಭವಿಸುತ್ತಾರೆ ಜೀವನದಲ್ಲಿ ನನಗೆ ಗೊತ್ತಿಲ್ಲ…?
ಅವರ ನೋವು ಅವರಿಗೆ ಇರಬಹುದು..
– ನಿಹಾರಿಕಾ ರಾವ್ –