ಹೆಣ್ಣು ಕರುಣಾಮಯಿಯೂ ಹೌದು – ಮಹಾಕಾಳಿಯೂ ಹೌದು..!
ಹೆಣ್ಣು ಅಂದ್ರೆ ತಾತ್ಸಾರದ ರೀತಿಯಲ್ಲಿ ನೋಡುವ ಮೂರ್ಖರು, ಅವರ ಅಸ್ತಿತ್ವವಕ್ಕೆ ಕಾರಣವೇ ಹೆಣ್ಣು ಅನ್ನೋದನ್ನ ಮರೆತಿರುತ್ತಾರೆ…
ನಾರಿ ಅಂದ್ರೆ ಅಬಲೆ ಎಂದು ಕೊಳ್ಳುವ ನರಿಗಳಿಗೆ ಬಹುಷಃ ಕಾಳಿ ಮಾತೆ ಬಗ್ಗೆ ಮರೆತುಹೋಗಿರುತ್ತೆ ಅನ್ನಿಸುತ್ತೆ..
ವರದಕ್ಷಿಣೆ ಕಿರುಕುಳ ನೀಡುತ್ತಾ ಏನೋ ದೊಡ್ಡದಾಗಿ ಮಹಿಳೆಯನ್ನ ಮದುವೆಯಾಗಿ ಅವಳಿಗೆ ಬಾಳು ಕೊಡ್ತೀವಿ ಅಂತ ಅನ್ನೋ ದೊಡ್ಡ ಮನುಷ್ಯರಿಗೆ ಗೊತ್ತಿಲ್ಲ , ಅವರಿಗೆ ಅವಳು ಬಾಳು ಕೊಡ್ತಿರೋದು , ಅವರ ವಂಶ ಉದ್ಧಾರಕ್ಕಾಗಿ , ಅವರ ಮನೆ ದೀಪ ಬೆಳಗಿಸುವುದಕ್ಕಾಗಿ ತಮ್ಮ ಮನೆಯವರನ್ನ ಬಿಟ್ಟು ಬರುತ್ತಿರುವ ಗಟ್ಟಿಗಿತ್ತಿ ಅಂತ…
ಮಹಿಳೆಯರು ಬಳೆ ತೊಟ್ಟು , ಮನೆ ಕೆಲಸ ಮಾಡೋದಕ್ಕೆ ಅಷ್ಟೇ ಸೀಮಿತ ಅಂದುಕೊಳ್ಳುವ ಅನಾಗರಿಕರಿಗೆ ಬಹುಷಃ ಖಡ್ಗವಿಡಿದು ಹೋರಾಡಿದ್ದ ಝಾನ್ಸಿ ರಾಣಿ ಲಕ್ಷ್ಮೀ ಭಾಯಿ , ಒನಕೆ ಹಿಡಿದು ಹೋರಾಡಿದ ಓಬವ್ವ , ಅಬ್ಬಕ್ಕ ದೇವಿ , ದೇಶ ಮುನ್ನಡೆಸಿದ ಜನ ನಾಯಕಿಯರೂ , ಬಾಹ್ಯಾಕಾಶ ಜಗತ್ತಿನ ಸಾಧಕರ ಬಗ್ಗೆಯೂ ಗೊತ್ತಿಲ್ಲ ಅಂತ ಕಾಣತ್ತೆ..
ಮಹಿಳೆಯರ ಜೊತೆ ಮೃಗದಂತೆ ವರ್ತಿಸುವ ಕೆಲ ನಾಯಿಗಳಿಗೆ ಅವರ ಅಕ್ಕ, ತಂಗಿ , ತಾಯಿ ಹೆಣ್ಣೇ ಅನ್ನೋದು ನೆನಪಿಗೆ ಬರಲ್ಲ ಅಥವ ಅವರ ಮನೆಯ ಮಹಿಳೆಯರಿಗೂ ಮರ್ಯಾದೆ ಕೊಡಲ್ಲ ಅಂತ ಕಾಣತ್ತೆ..
ಮಹಿಳೆಯರನ್ನ ಅಪಮಾನ ಮಾಡಿ ಸುಖ ಪಡುವ ಕೀಚಕರಿಗೆ ಗೊತ್ತಿಲ್ಲ ಧ್ರೌಪದಿಯಿಂದಲೇ ಶುರುವಾಗಿದ್ದು ಕೌರವರ ಅಂತ್ಯದ ಆರಂಭ ಅಂತ..
ಮಹಿಳೆ ಭೋಗದ ವಸ್ತುವಲ್ಲ.. ಹುಟ್ಟಿದ ಮನೆಗೆ ಭಾರವಲ್ಲ.. ಅಗತ್ಯ ಬಿದ್ರೆ ಇಡೀ ಮನೆಯನ್ನ ತನ್ನ ಹೆಗಲ ಮೇಲೆ ಹೊರುವ ತಾಕತ್ತಿರುವ , ಎಲ್ಲವನ್ನೂ ಸಹಿಸಿಕೊಂಡು ಹೋಗುವ ಶಕ್ತಿ ಇರುವ , ಎಲ್ಲರನ್ನೂ ಒಗ್ಗೂಡಿಸುವ ಶಕ್ತಿ, ಮನೆಯನ್ನ ನರಕ ಅಥವ ಸ್ವರ್ಗ ಯಾವುದನ್ನೂ ಬೇಕಾದರೂ ಮಾಡುವ ತಾಕತ್ತಿರುವ ಕರುಣಾಮಿಯೂ ಹೌದೂ , ದುರ್ಗಾಮಾತೆಯೂ ಹೌಧು..
– ನಿಹಾರಿಕಾ ರಾವ್ –








