ನನ್ನ ಅನುಭವ ,, ನನ್ನ ಬಗ್ಗೆ ನೇರವಾಗಿ ,, ಮುಜುಗರವಿಲ್ಲದೇ ಹೇಳಿಕೊಳ್ತಿದ್ದೀನಿ.. ನನಗನ್ನಿಸಿದ ಹಾಗೆ ನಿಮ್ಮ ಜೀವನದಲ್ಲೂ ಈ ಒಂದು ಅಂಶಗಳು ಅನ್ವಯವಾಗಬಹುದು.. ಆಗದೆಯೂ ಇರಬಹುದು..
ನಿಜ ಹೇಳುವೆ.. ನನ್ನ ಎಲ್ಲರೂ ಗಟ್ಟಿಗಿತ್ತಿ… ಅನ್ನುತ್ತಾರೆ..ಏನೇ ಬಂದ್ರು ಎದುರಿಸುವ ಧೀರೆ ಅನ್ನುತ್ತಾರೆ.. ಅಪ್ಪ ಹೇಳ್ತಾರೆ.. ಮಗಳೆ ನಿನ್ನ ಮೇಲೆ ಭಯವಿಲ್ಲ ಎಲ್ಲಿ ನಿನ್ನಿಂದ ಬೇರೆ ಅವರಿಗೆ ತೊಂದ್ರೆಯಾಗುತ್ತೋ ಅನ್ನೋ ಭಯ ಅಂತ ,,,
ನನ್ನ ಸುತ್ತಲಿನ ಹುಡುಗಿಯರು ಹೇಳ್ತಾರೆ.. ವಾ ನಿಂದು ಜೀವನ ಅಂದ್ರೆ ,, ಒಂಟಿಯಾಗೇ ಧೈರ್ಯವಾಗಿ ಓಡಾಡುತ್ತೀಯ, ಎಲ್ಲರನ್ನೂ ಎಲ್ಲವನ್ನೂ ಎದುರಿಸುತ್ತೀಯ, ಎಲ್ಲರನ್ನೂ ಎದುರಿಸುತ್ತೀಯ,, ನಿನ್ನದೇ ನೋಡು ಲೈಫ್ ಅಂದರೆ,,, ನಾವು ಹೆದರುತ್ತೀವಿ,, ಮನೆಯಲ್ಲಿ ಫ್ರೀಡಂ ಇಲ್ಲ ಇದ್ರೂ ಹೊರಗಡೆ ಅಂಜಿಕೆ ಅದು ಇದು ಅಂತ…
ಹುಡುಗರು ಮೇಡಮ್ ನೀವ್ ಬಿಡ್ರಿ … ಪವರ್ ಫುಲ್ ಗರ್ಲ್ ಸೂಪರ್.. ಅಂತಾರೆ.. ನಾನು ಸ್ಟ್ರಾಂಗ್ ಗರ್ಲ್ ಅಂತ ಟ್ರೀಟ್ ಮಾಡ್ತಾರೆ..
ಅಣ್ಣ ( ಬ್ರದರ್ ಪ್ರಮ್ ಅನದರ್ ಮದರ್) ಗಟ್ಟಿಗಿತ್ತಿ ತಂಗ್ಯವ್ವ ನಿನ್ ತಂಟೆಗೆ ಬಂದೋರ್ ಕಥೆ ಏನು ಅಂತ..??
ತಮ್ಮ ಹೇಳ್ಥಾನೆ ಅಕ್ಕ ನೀನು ಕಣೆ ನಮ್ಮ ಮನೆಯ ನಿಜವಾದ ಗಂಡು ಮಗು ಅಂತ…!!!
ನಾನು ಹೇಳಾ…
ಇದ್ಯಾವುದೂ ನಾನಲ್ಲ.. ನನ್ನ ಬಾಹ್ಯ ವರ್ತನೆ ,, ನನ್ನ ಇರುವಿಕೆ ಮಾತಿನ ಶೈಲಿ , ವರಟು ನೇರ ನಡೆ ನುಡಿ , ನಿರ್ಭಯ ವ್ಯಕ್ತಿತ್ವ , ಗಟ್ಟಿತನದ ತೋರ್ಪಡಿಕೆ, ಕಿಲ ಕಿಲ ನಗುವ ನನ್ನ ನಗು, ಇಲ್ಲ ನಾನು ಈ ಸಮಾಜಕ್ಕೆ ಕೇರ್ ಮಾಡಲ್ಲ, ಏನ್ ಬಂದ್ರು ತಲೆ ಕೆಡಿಸಿಕೊಳ್ಳಲ್ಲಾ,, ಯಾವುದಕ್ಕೂ ದುಃಖ ಪಡೋದಿಲ್ಲ.. ಅಂತ ಇರುತ್ತಿನಲ್ಲ ಇದೆಲ್ಲಾ ಸುಳ್ಳು… ಇದೆಲ್ಲಾ ಸುಳ್ಳು…
ನಾನು ಗಟ್ಟಿಗಿತ್ತಿಯಾಗಿಲ್ಲ,, ಸಮಾಜದ ಮುಂದೆ ಆ ಮುಖವಾಡ ಧರಿಸಿದ್ದೀನಿ ಅಷ್ಟೇ.. ನನಗೂ ಭಯವಿದೆ.. ನನಗೂ ಮೃದು ಮನಸ್ಸಿದೆ.. ನೋವಿದೆ,, ನನ್ನೊಳ ಮನಸ್ಸಿಗೂ ನೋವಾಗುತ್ತದೆ.. ಒಬ್ಬಳೇ ಓಡಾಡುವಾಗ ದಿಗಿಲಾಗುತ್ತದೆ… ಜೊತೆಯಲ್ಲಿ ಯಾರೂ ಇಲ್ಲದೇ ನಾನು ಒಬ್ಬಳೇ ಇದ್ಧಾಗ ಇತರರನ್ನ ನೋಡಿ ಛೇ ಈಗಲೂ ಕಾಲೇಜಲ್ಲೇ ಇರಬಾರದಿತ್ತಾ ಅನ್ಸುತ್ತೆ.. ನಂಬಬೇಕು ಯಾರನ್ನಾದರೂ ಅನ್ಸುತ್ತೆ.. ಮನೆ ಜವಾದ್ಬಾರಿ ಸಾಕು ಅನ್ಸುತ್ತೆ.. ಫ್ರೀಡಮ್ ಸಾಕೆನ್ನಿಸುತ್ತೆ.. ಸಮಾಜದ ನುಡಿಗಳೊಮ್ನೊಮ್ಮೆ ನನ್ನನ್ನೂ ಅಳಿಸಿದೆ..
ನಿದ್ರೆ ಇಲ್ಲದ ರಾತ್ರಿಗಳ ಕಳೆದಿದ್ದೇನೆ,, ಊಟ ವಿಲ್ಲದೇ ದಿನಗಳ ಕಳೆದಿದ್ದೇನೆ.. ತಿಂಗಾಳುನಗಟ್ಟಲೇ ಅತ್ತಿದ್ದೇನೆ.. ನಾನೂ ಕಷ್ಟಗಳನ್ನ ನೋಡಿ, ಕಹಿ ಸತ್ಯಗಳನ್ನ ಎದುರಿಸಿ ,, ಅರ್ಹವಲ್ಲದವರನ್ನ ನಂಬಿ ,,, ಹೆದರಿ , ಬೆದರಿ ,,, ಮುಜುಗರದಿಂದಲೂ ಮುಜುಗರ ಅನುಭವಿಸಿ,, ಸೋತು ,, ಸೋಲಿನಿಂದ ಕಲಿತು,,, ಸಮಾಜದ ಕಠೋರತೆ ಅರಿತು …. ಕಲ್ಲಾಗಿದ್ದೇನೆ , ಗಟ್ಟಿಗಿತ್ತಿಯಂತೆ ಇದ್ದೇನೆ,,ಏನಕ್ಕೂ ಕೇರ್ ಮಾಡಂತೆ ,, ಒಳಗೊಳಗೆ ಕೇರ್ ಮಾಡಿ ಸಂಕಟ ಪಟ್ಟಿದ್ದೇನೆ.. ಸ್ನೇಹಿತರು ಬಿಟ್ಟಾಗ ಐ ಡೋಂಟ್ ಕೇರ್ ಅಂದ್ರು … ಕೇರ್ ಮಾಡಿದ್ದೀನಿ.. ಒಂಟಿತನ ಇಷ್ಟ ಅಂತಲ್ಲ..
ಜೊತೆಗೆ ಮುಂದೆ ಯಾರೂ ನಮ್ಮ ಜೊತೆ ಬರೊಲ್ಲಾ ,, ಅನ್ನೋದು ಗೊತ್ತಾಗಿದೆ.. ನಾಳೆ ಬರುತ್ತಾರೆ .. ನಾಡಿದ್ದು ಇರಲ್ಲ.. ಒಬ್ರೇ ಬದುಕೋದನ್ನ ಓಡಾಡುವುದನ್ನ ಅನುಭವ ಕಲಿಸುತ್ತೆ.. ನಾನು ಕಲಿತೆ ಅಷ್ಟೇ.. ನಾನು ಕೇರ್ ಮಾಡ್ತೆನೆ ತೋರಿಸಿಕೊಳ್ಳಲ್ಲ.. ಭಯ ಮತ್ತೆ ಇನ್ನಷ್ಟು ವೀಕ್ ಆದ್ರೆ ಸಮಾಜ ನನ್ನ ಇನ್ನೂ ಕುಗ್ಗಿಸುತ್ತೆ.. ಭಯ ಪಠ್ರೆ ಮತ್ತಷ್ಟು ಭಯಪಡಿಸುತ್ತೆ ಅಂತ..
ನನಗೆ ನೋವಾಗುತ್ತೆ.. ಅಳು ಬರುತ್ತೆ ,,,, ಒಮ್ಮೊಮ್ಮೆ ಒಂಟಿತನ ಸಾಕೆನ್ನಿಸುತ್ತೆ.. ಮನಸ್ಸಿಗೆ ಇತರರಂತೆ ನೋವಾಗುತ್ತೆ..
ಹೌದು ಇದು ಸತ್ಯ.. ನಾನು ನಿಜವಾಗಲು ಜನರು ಹೇಳುವಂತೆ ಗಟ್ಟಿಗಿತ್ತಿಯಲ್ಲ ನನ್ನ ಒಳ ವ್ಯಕ್ತಿತ್ವ ಎಲ್ರಿಗೂ ಗೊತ್ತಿಲ್ಲ ಅಷ್ಟೇ…
ಒಟ್ಟಾರೆಯಾಗಿ ನಾನು ಏನೆಲ್ಲಾ ಬರೆದೆ ಅನ್ನೋದು ಈಗ ಯಾಕೋ ಅರ್ಥವಾಗ್ತಿಲ್ಲ.. ಥೇಟ್ ಅರ್ಥವಾಗದ ಬದುಕಿನಂತೆ.. ನಿಮಗೇನಾದ್ರೂ ಅರ್ಥವಾದ್ರೆ ನನಗೂ ತಿಳಿಸಿ…
– ನಿಹಾರಿಕಾ ರಾವ್ –