Saakshatv Author Special : ಅಂತರಂಗದ ಕಹಾನಿ – 5 : ಮನಸ್ಸಿನ ಮಾತುಗಳು ಕವಿತೆಯಾದಾಗ..!!! ಬದುಕು..!!!
ಬದುಕು
ಬಯಸಿದೂ ಒಂದೇ ಒಂದೂ ಜೀವನದಲ್ಲಿ ಸಿಗಲಿಲ್ಲ..
ಬಯಸದೇ ಸಿಕ್ಕಿದ್ದು ಮನಸಿಗೆ ಯಾವತ್ತೂ ಹಿಡಿಸಲಿಲ್ಲ..
ಬಯಸಿ ಬಯಸಿ ಸಿಕ್ಕಿದ್ದು ಜೀವನದಲ್ಲಿ ಖುಷಿ ತರಲಿಲ್ಲ…
ಬಯಸಿದ್ರೂ ಬಾರದೇ ಇರೋ ಸಾವು ಬದುಕಲು ಬಿಡುತ್ತಿಲ್ಲ…
ಬದುಕಿದ್ರೂ ಜೀವಂತ ಶವದಂತೆ ಬದುಕಲು ಯಾಕೋ ಇಷ್ಟವಾಗ್ತಿಲ್ಲ..
@@@@@@@@@@@@@@@@@@@@@@@@@
ಕನಸಿನ ದರ್ಪಣ
ಮನದೊಳಗೆ ಹೇಳಲಾರದ ಮಾತುಗಳು ಮೌನದ ರೂಪ ತಾಳಿದೆ..
ಪರಿಣಾಮಗಳ ಭಯಕ್ಕೆ ಕನಸಿನ ದರ್ಪಣ ಚೂರಾಗಿದೆ..
ಕಣ್ಣೀರು ಕೂಡ ಹೊರ ಬಾರದೇ ಹೆದರಿ ಅವಿತು ಕುಳಿತಿದೆ..
ಖುಷಿ ಮಾಯವಾಗಿದೆ… ಆಸೆಗಳು ಸತ್ತಾಗಿದೆ,, ದೇವರ ಆಟಕ್ಕೆ ಮನಸ್ಸು ಒಡೆದು ಛಿದ್ರವಾಗಿದೆ..
ಜೀವನ ಪಾಠಕ್ಕೆ ತಿರುವುಗಳು ಎಂದಿಗೂ ಇಷ್ಟವಾಗದ ಅಧ್ಯಯನಗಳಾಗಿ ಉಳಿಯಲಿದೆ… ಕಾಡಲಿದೆ..
ಬೇಡದ ಅನುಭವಗಳು ಜೀವನ ಪೂರ್ತಿ ಸತಾಯಿಸಲು ತಲೆಯಲ್ಲಿ ಬೇರೂರಾಗಿದೆ..
ಎದೆಯಲ್ಲಿ ಬಚ್ಚಿಟ್ಟ ಗಾಯ ,,, ವಾಸಿಯಾಗುವ ನಂಬಿಕೆಯೂ ಕೊನೆಯುಸಿರೆಳೆದಾಗಿದೆ..
ಆಸೆಗಳ ದಣಿವಾರಿದೆ… ಕನಸು ಕಾಣುವ ಮನಸ್ಸು ಮಂಕಾಗಿ ಜೀವ ಬಿಟ್ಟಾಗಿದೆ…
ಮನಸೇ ನೀ ಮಹಾ ಮರ್ಕಟ… ಹೇಳು ನೀ… ಯಾಕ್ಹೀಗೆ ಸಲ್ಲದ ಆಸೆಗಳ ಹುಟ್ಟಿಸಿ ಕಾಡಿದೆ…
ದೇವರೇ ಹೇಳು… ಜೀವನವೇ ನಶ್ವರವೆನಿಸುವಷ್ಟರ ಮಟ್ಟಿಗೆ ಜಿಗುಪ್ಸೆ ಯಾಕೆ ಹುಟ್ಟಿಸಿದೆ…
ಮಾತು ಸಾವಿರವಿದೆ…ಹೇಳೋಕಾಗದ ಈ ಸ್ಥಿತಿ ಬದುಕಿದ್ದಾಗಲೇ ನರಕ ದರ್ಶನ ಮಾಡಿಸಿದೆ..
ಇರಲಿ… ವಿಧಿಯಾಕ್ಕೆ ತಲೆ ಭಾಗದೇ ಬೇರೆ ದಾರಿಯಲ್ಲಿದೆ…
ಹಣೆ ಬರಹ , ಬರೆದದ್ದೇ ಆಗುತ್ತದೆ…
@@@@@@@@@@@@@@@@@@@@
ಚಂಚಲತೆಗೂ ಒಂದು ಮಿತಿಯಿರಬೇಕು
ಚಂಚಲತೆಗೂ ಒಂದು ಮಿತಿಯಿರಬೇಕು ,,, ನಾವಾಡೋ ಪ್ರತಿ ಮಾತಲ್ಲೊಂದು ಹಿಡಿತವಿರಬೇಕು..
ಮೌನಕ್ಕೊಂದು ಅರ್ಥವಿರಬೇಕು , ಆ ಮೌನವೂ ಮಾತನಾಡಿದಂತಿರಬೇಕು…
ಸ್ವಾರ್ಥಿಯಾಗಿರಬೇಕು,, ಇತರರಿಗೆ ನಮ್ಮೀ ಸ್ವಾರ್ಥದಿಂದ ನೋವಾಗದಂತಿರಬೇಕು,,
ಪ್ರೀತಿ ಮಾಡಬೇಕು,, ಅದು ಕೊನೆ ತನಕ ಉಳಿಯುವಂತದ್ದಾಗಿರಬೇಕು..
ನಾವಾಡುವ ಪ್ರತಿ ಮಾತಿಗೂ ಒಂದು ಮೌಲ್ಯವಿರಬೇಕೆಂದೇನಿಲ್ಲ , ಇತರರ ಮೌಲ್ಯ ಕುಂದಿಸದ ರೀತಿಯಲ್ಲಿರಬೇಕು…
ತಾಳ್ಮೆ ಇರಬೇಕು … ಆತ್ಮ ಗೌರವಕ್ಕೆ ಧಕ್ಕೆ ಬರೋವರೆಗಷ್ಟೇ ,,, ಸಹಿಸಬೇಕು… ಆತ್ಮ ಗೌರವದ ಹರಣವಾದರೆ ,, ಮುಂದಿರೋರು ಎಷ್ಟೇ ಉಚ್ಛ ಸ್ಥಾನದಲ್ಲಿರಲಿ ಅವರೆಷ್ಟೇ ವಯಸ್ಸಲ್ಲಿ ದೊಡ್ಡವರಿರಲಿ , ಅವರ ವಿರುದ್ಧ ಹೋರಾಡುವ ಶಕ್ತಿಯೂ ಇರಬೇಕು…
ಸದಾ ಖುಷಿಯಾಗಿರಬೇಕು.. ಆದರೆ ಅವರಿವರ ಸಂತೋಷ ಕಸಿದಲ್ಲ… ಆ ಖುಷಿ ಉಳಿಯುವುದೂ ಇಲ್ಲ… ಆ ಖುಷಿಯಲ್ಲೊಂದು ಆತ್ಮ ತೃಪ್ತಿ ಇರಬೇಕು..
ಜೀವನವ ಇದು ಎನಿಸಬಾರದು… ಇದೇ ತಾನೇ ಜೀವನ ನಡೀ ಬದುಕಿಬಿಡೋಣ ಇರೋ ಅಷ್ಟು ದಿನಗಳೆನ್ನುವಂತಿರಬೇಕು..