ಒಂಟಿಯಾಗಿರೋದು ಶಾಪವಲ್ಲ,,, ಒಂಟಿತನದಲ್ಲಿರುವ ಪ್ರಯೋಜನಗಳು ಖುಷಿಯನ್ನ ಅರಿತಾಗ ಅದು ನಮಗೆ ವರವೆನಿಸುತ್ತೆ.. ಒಂಟಿಯಾಗಿರುವ ಸ್ವಾತಂತ್ರ್ಯ ನಿಮಗೆ ಸಿಕ್ಕಾಗಲೇ ನಿಮಗೆ ಅದರ ಖುಷಿ ಅರ್ಥವಾಗೋದು..
ಒಂಟಿಯಾಗಿದ್ದಾಗ , ಯಾವುದೇ ಅಡೆತಡೆಯಿಲ್ಲದೆ , ಯಾರಿಗೂ ಕೇರ್ ಮಾಡದೇ , ಬಹಳ ಸಮಯದಿಂದ ಮಾಡಬೇಕೆಂದುಕೊಂಡು ಮಾಡಲಾಗದೇ ಇದ್ದದ್ದನ್ನ ಮಾಡುವ ಸ್ವಾತಂತ್ರ್ಯ ಸಿಗುತ್ತೆ..
@@@@@@@@@@@@@@@@@@@@@@@@@@@@@@@@@@@
ಅಲ್ಲಾ….!!! ಏನಂತ ಹೇಳಿ ಅಳಬೇಕು ಅವರಿವರ ಜೊತೆಗೆ .. ಕಣ್ಣಲ್ಲಿ ನೀರು ಬಂದ್ರೆ ನಮ್ ಮೇಲೆ ಅವರಿಗೆ ಸಿಂಪತಿ ಬರಲ್ಲ.. ನಮ್ಮ ಪರಿಸ್ಥಿತಿ ನೋಡಿ ಆಡಿಕೊಳ್ಳುವರು ಒಳಗೊಳಗೆ ನಗುವರು..
ಹೋಗಲಿ ಬಿಡು ನಮ್ಮವರು ಯಾರಾದರೂ ನಮ್ಮ ಬಗ್ಗೆ ಚಿಂತಿಸುವವರು ಇದ್ದಾರಾ..??? ನಮ್ಮ ಬಗ್ಗೆ ಕಾಳಜಿ ವಹಿಸುವವರು ಇದ್ದಾರಾ..??? ನಮ್ಮ ಪರಿಸ್ಥಿತಿ , ನಾವು ಹೇಗಿದ್ದೇವೆ ನಮ್ಮ ಜೀವನ ಹೇಗೆ ಸಾಗುತ್ತಿದೆ ಅಂತ ತಿಳಿಯಬಯಸುವವರು ಇದ್ದಾರಾ…??? ಯಾವುದೇ ಮರು ಆಲೋಚನೆ ಇಲ್ಲದೇ,,,, ನಮ್ಮ ತಂದೆ ತಾಯಂದಿರನ್ನ ಬಿಟ್ಟರೆ ಮತ್ಯಾರಾದರೂ..???
ನನ್ನ ಅತಿಹೆಚ್ಚು ಪ್ರೀತಿಸುವ ಜೀವ ನನ್ನ ತಂದೆ ಅವರು ನನಗೆ ಕೇವಲ ಖುಷಿಯನ್ನೇ ನೀಡುವಾಗ ನಾನು ನಾನೆಷ್ಟು ಸಂಕಟಪಡುತ್ತಿದ್ದೀನಿ ಅಂತ ಅವರ ಬಳಿ ಹೇಳಿ, ಪಪ್ಪಾ ನನಗೆ ಸಾಕಾಗಿ ಹೋಗಿದೆ.. ಅದೇ ಜೀವನ , ಅದೇ ಕೆಲಸ ಅದೇ ಮನೆ, ಅದೇ ಒಂಟಿತನ ಅಂತ ಹೇಳಿ , ಅಯ್ಯೋ ನನ್ನ ಮಗಳು ಪಾಪ ಜೀವನದಲ್ಲಿ ಖುಷಿಯಾಗಿಯೇ ಇಲ್ಲವಲ್ಲ ಅಂತ ಅವರು ದುಃಖಿಸಬೇಕಾ…
ನನ್ನ ಕರ್ಮಕ್ಕೆ ಪಾಪ ಅವರೇನು ಮಾಡ್ತಾರೆ.. ಅವರ ಮುಂದೆ ನಗುವಿನ ನಾಟಕವಾಡುತ್ತಾ, ನಿತ್ಯದ ಬೇಸರ , ಹತಾಶೆ ಸಿಟ್ಟು , ಎಲ್ಲವನ್ನೂ ಮುಚ್ವಿಟ್ಟುಕೊಂಡು ನಗುತ್ತಲೇ ಅವರ ಮುಂದೆ ನಟಿಸುತ್ತೇನೆ, ತಮ್ಮನ ಮುಂದೆ ಅಕ್ಕ ನಾನು ತುಂಬಾ ಗಟ್ಟಿಗಿತ್ತಿಯಂತೆ ಬಿಂಬಿಸಿಕೊಂಡಿರೋವಾಗ ಅವನಿಗೆ ಹೇಗೆ ಹೇಳಲಿ ನಾನೆಷ್ಟು ಹತಾಶಳಾಗಿದ್ದೇನೆ ಅಂತ…
ನನಗೆ ಸ್ನೇಹಿತರೇನೋ ಇದ್ದಾರೆ ,, ಆದ್ರೆ ಅವರ ಖುಷಿಗೆ ನನ್ನ ಗೋಳು ಅಡ್ಡಿಯಾಗುವುದು ನನಗಿಷ್ಟ ಇಲ್ಲ. ಕಾಲೇಜೇ ಬೇರೆ ಕೆಲಸವೇ ಬೇರೆ, ನನ್ನ ಗೋಳು ಕೇಳುವ ಪುರುಸೊತ್ತು ಈಗ ಪಾಪ ಅವರಿಗೂ ಇಲ್ಲ…
ಕೆಲಸದಲ್ಲಿ ಯಾರ ಬಳಿ ಮಾತನಾಡಿದ್ರೂ ಪ್ರೊಫೆಷನಲ್ ಆಗಿಯೇ.. ಅಲ್ಲಿ ಸ್ನೇಹ ಭಾವನೆ ಅಪರೂಪದಲ್ಲೇ ಅಪರೂಪ… ಇಂದು ಯಾಕೋ ಗೊತ್ತಿಲ್ಲ ತುಂಬಾ ಅಂದ್ರೆ ತುಂಬಾ ಅಳಬೇಕು ಅನ್ನಿಸಿತು.. ಅಳುವುದುಕ್ಕೂ ಸ್ವಾತಂತ್ರ ಇರಲಿಲ್ಲ.. ಕೆಲಸದಲ್ಲಿದ್ದೆ.. ಯಾರ ಬಳಿಯೂ ಮಾತನಾಡುವುದಕ್ಕೆ ಆಗಲಿಲ್ಲ, ಆದ್ರೆ ನನ್ನ ಮನಸನ್ನ ಅರ್ಥ ಮಾಡಿಕೊಳ್ಳುವ ಒಬ್ಬರಾದ್ರೂ ಇದ್ದಿದ್ರೆ ಚನಾಗಿರುತ್ತಿತ್ತು.. ಮನಸಲ್ಲಿರುವ ಎಲ್ಲವನ್ನೂ ಹೊರ ಹಾಕಿ ಹಗುರಾಗಿ ಸಮಾಧಾನವಾಗೋವರೆಗೂ ಅಳಬೇಕು ಎನಿಸಿದ್ರು ಸಾಧ್ಯವಾಗಲಿಲ್ಲ..
ಯಾರ ಬಳಿ ಹೇಳಲಿ, ಯಾರೂ ನನ್ನವರಿಲ್ಲ.. ಆಗಲೇ ಅನ್ನಿಸಿದ್ದು , ಸುತ್ತ ಎಲ್ಲರೂ ಇದ್ದಾರೆ.. ಆದ್ರೂ ನಾನು ಒಬ್ಬಂಟಿ ಅಂತ
ಅದಾದ ನಂತರ ನೆನಪಾಯ್ತು.. ಒಬ್ಬೇ ಒಬ್ಬ ಗೆಳೆಯದಿದ್ದಾನೆ ಅವನನ್ನ ಹೇಗೆ ಮರೆಯಲು ಸಾಧ್ಯ , ಅವನು ನನ್ನ ಮಾತನ್ನ ಯಾವುದೇ ವಿರೋಧವಿಲ್ಲದೇ ವ್ಯಂಗ್ಯವಾಡದೇ ಶಾಂತವಾಗಿ ಕೇಳುತ್ತಾನೆ .. ಅವನೇ ನನ್ನ ಗೆಳೆಯ ಸದ್ಯಕ್ಕೆ ಒಬ್ಬನೇ ಗೆಳೆಯ… ಅದೇ ನಾ ಪ್ರತಿ ನಿತ್ಯ ಬರೆಯುವ ಡೈರಿ…
– ನಿಹಾರಿಕಾ ರಾವ್ –








