ಸಮಾಜವೆಂಬ ಕಟಕಡೆಯಲ್ಲಿ ಅಪರಾಧಿ
ಸಮಾಜವೆಂಬ ಕಟಕಡೆಯಲ್ಲಿ ಏನೂ ಅಪರಾಧ ಮಾಡದೇ ಹೋದರು ಒಬ್ಬ ಮಹಿಳೆಯೇ ಯಾಕೆ ಯಾವಾಗಲೂ ಅಪರಾಧಿ ಸ್ಥಾನದಲ್ಲಿ ನಿಲ್ಲುವಳು ಎಂಬುದು ನನ್ನ ಪ್ರಶ್ನೆ…
ಇಷ್ಟದಂತೆ ಬದುಕುವ ಸ್ವಾತಂತ್ರವೂ ಸಿಕ್ಕಿರುವಾಗ ನಮ್ಮ ಹಕ್ಕನ್ನ ಚಲಾಯಿಸುವ ನಾವು ಅದ್ ಹೇಗೆ ಅಪರಾಧಿಗಳಾಗುತ್ತೇವೆ..??
ನಮ್ಮಿಷ್ಟದ ಉಡುಪು ಧರಿಸಬಹುದು.. ನಮಗೇನಿಷ್ಟವೋಅದನ್ನ ಮಾಡಬಹುದು.. ಮಾತನಾಡಬೇಕೆನಿಸುವುದನ್ನ ಮಾತನಾಡುವುದು,, ನಮಗಿಷ್ಟ ಇಲ್ಲದೇ ಇರೋದನ್ನ ನೇರವಾಗಿ ವಿರೋಧಿಸುವುದು, ಇತರರ ದಬ್ಬಾಳಿಕೆ ಸಹಿಸದೇ ಎದುರುತ್ತರ ಕೊಡುವುದು ನಮ್ಮದೇ ಹಕ್ಕಲ್ಲವೆ..??
ಆದ್ರೂ ಸಮಾಜದ ಕಟಕಡೆಯಲ್ಲಿ ನಮ್ಮನ್ನೇಕೆ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ಅಪಮಾನಿಸಲಾಗುತ್ತೆ…
ಸ್ವಾತಂತ್ರವಾಗಿ ಬದುಕೋದೇ ಅಪರಾಧವೆಂದರೆ ,, ಇಡೀ ಸಮಾಜದಲ್ಲಿ ಎಲ್ಲರೂ ಅಪರಾಧಿಗಳೇ,, ಕೇವಲ ಮಹಿಳೆಯರೇ ಯಾಕೆ..???
ಇದೇ ಸಮಾಜವೆಂಬ ಕಟಕಡೆಯಲ್ಲಿ ನಿಲ್ಲಿಸಿ , ಎಲ್ಲರೂ ಆರೋಪಿಸುವವರೇ , ಎಲ್ಲರೂ ತೀರ್ಪುಗಾರರೇ , ಎಲ್ಲರೂ ನಮ್ಮ ವಿರುದ್ಧ ವಾದ ಮಂಡಿಸುವವರೇ,,
ನಮ್ಮ ಪರ ನಿಲ್ಲಿವವರು 100 ರಲ್ಲಿ 1 % ಜನರಷ್ಟೇ ,, ಅದು ನಮಗೆ ಅದೃಷ್ಟವಿದ್ದರೆ,,, ತಪ್ಪೇನೇ ಇರಲಿ , ಯಾರದ್ದೇ ಇರಲಿ,, ನೀನು ಸರಿ ಇರು , ನೀನು ಗಂಭೀರವಾಗಿರು , ನೀನು ಹುಷಾರಾಗಿರಬೇಕಿತ್ತು, ನೀನ್ಯಾಕೆ ಅವರನ್ನ ನೋಡಲೋದೆ , ಇವರನ್ನ ತಲೆ ಎತ್ತಿ ನೋಡಲೋದೆ,ನೀನ್ಯಾಕೆ ಈ ರೀತಿ ಬಟ್ಟೆ ಧರಿಸಿದೇ ಇತ್ಯಾದಿ… ಇತ್ಯಾದಿ…
ಹಾಗಾದ್ರೆ ನೋಡೋ ದೃಷ್ಟಿ ಸರಿ ಮಾಡಿಕೊಳ್ಳಿ ಅಂತಲೇ ಇದೇ ಸಮಾವೆಂಬ ನ್ಯಾಯಾಲಯದಲ್ಲಿ ತೀರ್ಪು ನೀಡಬಹುದಲ್ಲವೆ..
ನಮ್ಮ ಸ್ವಾತಂತ್ರವನ್ನ ಗೌರವಿಸಬಹುದಲ್ಲವೆ.. ನಮ್ಮ ಖುಷಿಯನ್ನೂ ಸಹಿಸಬಹುದಲ್ಲವೆ..???
*************