ಅಂದುಕೊಂಡಂತೆ ಇರಲ್ಲ ಜೀವನ
ನೀನು ಅಂದುಕೊಂಡಂತೆಯೇ ನಿನ್ನ ಜೀವನ ಸಾಗಿದ್ರೆ… ಆ ಜೀವನಕ್ಕೆ ನಿಜವಾಗ್ಲೂ ಅರ್ಥ ಇದ್ಯಾ,..?
ಹೂ..ಹೂಮ್… ಜೀವನ ಯಾವತ್ತೂ ನಾವು ಅಂದುಕೊಂಡಂತೆ ಇರಲ್ಲ… ಇರಲೂ ಬಾರದು…!
ಜನ ಎಷ್ಟೇ ಭಯ ಪಟ್ರೂ ಅಮ್ಯೂಸ್ ಮೆಂಟ್ ಪಾರ್ಕ್ ನಲ್ಲಿ ರೋಲರ್ ಕೋಸ್ಟರ್ ರೈಡ್ ನ ಮಿಸ್ ಮಾಡಿಕೊಳ್ಳಲ್ಲ.. ಅವರಿಗೆ ಗೊತ್ತು ಅದ್ರ ಅನುಭವ ಎಷ್ಟು ಭಯಾನಕವಾಗಿರುತ್ತೆ ಅಂತ.. ಆದ್ರೂ ಥ್ರಿಲ್ ಅಡ್ವೆಂಚರ್ ಗಾಗಿ ರೋಲರ್ ಕೋಸ್ಟರ್ ಏರದೇ ಇರಲ್ಲ
ಹಾಗೆಯೇ ನಮ್ಮ ಜೀವನ… ಥೇಟ್ ರೋಲರ್ ಕೋಸ್ಟರ್ ನಂತೆ.. ಭಯ ಇದ್ರು ನಾವು ಮುಂದೇನಾಗುತ್ತೆ.. ಎಂಥಹ ಅನುಭವ ಸಿಗುತ್ತೆ.. ಅನ್ನೋ ಕುತೂಹಲದಲ್ಲೇ ಇರುತ್ತೇವೆ.. ಕೆಲವೊಮ್ಮೆ , ರೋಮಾಂಚನ , ಖುಷಿ ಎಲ್ಲ ಇರುತ್ತೆ..
ಆದ್ರೆ ರೋಲರ್ ಕೋಸ್ಟರ್ ಮತ್ತು ಜೀವನದ ನಡುವೆ ಒಂದೇ ವ್ಯತ್ಯಾಸ.. ಇಲ್ಲಿ ರೈಡ್ ಮುಗಿದ್ರೆ ಮನೆಗ್ ಹೋಗ್ತಿವೆ..
ಬದುಕಿನ ರೈಡ್ ಮುಗಿದ್ರೆ ಮತ್ತೊಂದು ದಿನ ನೋಡೋಕು ಸಮಯವಿಲ್ಲದೇ ಸೀದಾ ಮೇಲ್ ಹೋಗ್ತೀವಿ….
– ನಿಹಾರಿಕಾ ರಾವ್ –