ಭಾವಾಂತರಂಗದಲ್ಲಿ – 2 : ಅನ್ನಿಸಿದ್ದು ಬರೆದಾಗ….!!!
ಜೀವನವನ್ನ ಪ್ರತಿಯೊಬ್ಬರೂ ಬೇರೆ ಬೇರೆ ದೃಷ್ಟಿಕೋನದಲ್ಲಿ ನೋಡ್ತಾರೆ… ಸವಾಲುಗಳನ್ನ ತಮ್ಮ ರೀತಿಯಲ್ಲಿಯೇ ಸ್ವೀಕರಿಸುತ್ತಾರೆ,,, ತಮ್ಮದೇ ಹಾದಿಯಲ್ಲಿ ಬಗೆಹರಿಸಿಕೊಳ್ತಾರೆ… ಅದೇ ರೀತಿ ಒಂದು ಸಮಸ್ಯೆ ತಮ್ಮನ್ನ ಮೀರಿ ಬೇರೆಯವರನ್ನೂ ಆವರಿಸಿಕೊಂಡಿದೆ ಅಂದಾಗ ,,,, ಆ ಸಮಸ್ಯೆ ಬಗೆ ಹರಿಸಿಕೊಳ್ಳುವುದಕ್ಕಿಂತಲೂ ಮುಖ್ಯ ಇತರರ ಭಾವನೆಯಾಗಿರುತ್ತೆ… ಅವರೆಲ್ಲರ ಮನಸ್ಥಿತಿ ,, ಅವರೆಲ್ಲರಿಗೂ ಆಗುವ ಒಳಿತು ಕೆಡುಕು ಎಲ್ಲವನ್ನೂ ಯೋಚಿಸಿಯೇ ನಮಗೆ ಕಷ್ಟವಾದ್ರೂ ಮನಸ್ಸಿಗೆ,, ಗಾಯವಾದ್ರೂ ,, ನಮಗೆ ಎಷ್ಟೇ ನೋವಾದರೂ ಕೆಲವೊಂದು ನಿರ್ಧಾರ ಮಾಡಿರುತ್ತೀವಿ.. ಅದು ನಮ್ಮ ಜಾಗದಲ್ಲಿ ನಿಂತು ಯೋಚಿಸಿದಾಗಷ್ಟೇ ಅರಿವಾಗುತ್ತೆ… ಅದೇ ಅವರ ನೋವು ಪಾಪ ಅವರ ಜಾಗದಲ್ಲಿನಿಂತರಷ್ಟೇ ಅರಿವಾಗುತ್ತೆ….
ಎಲ್ಲರು ತಿರುಗಿ ಬೀಳಬಹುದು
ಜೀವನದಲ್ಲಿ ಒಂದು ಸಂದರ್ಭ ಬರಬಹುದು… ಆಗ ನಮ್ಮ ಸುತ್ತಲಿರುವವರೆಲ್ಲರೂ ನಮಗೆ ಶತ್ರುಗಳಾಗಬಹುದು. ನಮ್ಮ ವಿರುದ್ಧವೇ ತಿರುಗಿ ಬೀಳಬಹುದು.. ನಮನ್ನ ದ್ವೇಷಿಸಬಹುದು , ನಮ್ಮನ್ನ ಬಿಟ್ಟು ಹೋಗಬಹುದು.
ಆದ್ರೆ ನಾವು ಸರಿಯಾಗಿಯೇ ಇದ್ದೇವೆ ಅಂತ ನಮ್ಮ ಒಳ ಮನಸ್ಸಿಗೆ ಗೊತ್ತಿರುತ್ತೆ.. ನಮ್ಮ ನಡೆಗೆ ಕಾರಣವೂ ನಮಗೆ ಗೊತ್ತಿರುತ್ತೆ. ನಮ್ಮ ನಿರ್ಧಾರ , ವರ್ತನೆ ಬಗ್ಗೆ ನಮಗೆ ಗೊತ್ತಿರುತ್ತೆ…
ನಾವು ಎಲ್ಲರೂ ಅಂದುಕೊಂಡಂತಹ ವ್ಯಕ್ತಿ ಆಗಿರದೇ ಇರಬಹುದು.. ಆದ್ರೂ ನಮ್ಮನ್ನ ಆ ರೀತಿ ಬಿಂಬಿಸಿದಾಗ ನೋವಾಗುತ್ತದೆ.. ಅದು ಸಹಜ.. ಆದ್ರೆ ತಲೆ ಕೆಡಿಸಸಿಕೊಳ್ಬೇಕಾಗಿಲ್ಲ.. ನಾವೇನು,,?? ನಾವೇನ್ ಮಾಡ್ತಿದ್ದೀವಿ..??? ನಮ್ಮ ಒಳಮನಸ್ಸಿನಲ್ಲಿ ಎದ್ದಿರುವ ಸುನಾಮಿಯ ಪ್ರಖರತೆ ಯಾವ ಮಟ್ಟದಲ್ಲಿದೆ..
ನಮ್ಮ ಮನದಾಳದಲ್ಲಿ ಅಪ್ಪಳಿಸಿರುವ ಚಂಡಮಾರುತದ ಪರಿಣಾಮ ಎಷ್ಟು ಭೀಭತ್ಸವಾಗಿದೆ ಅನ್ನುವ ಅರಿವು ನಿಮಗಿ ಇದ್ದಾಗ , ನಮಗೆ ಮಾತ್ರವೇ ಇದ್ದಾಗ , ಅದರ ವಿರುದ್ಧ ಏಕಾಂಗಿಯಾಗಿ ಹೋರಾಡೋದನ್ನ ನಾವು ಏಕಾಂಗಿಯಾಗಿ ಕಲಿತಾಗ , ನಾವು ಎಲ್ಲರಿಗಿಂತಲೂ ಬಲಿಷ್ಠರಾಗಿ ಬದಲಾಗ್ತೀವಿ…
ಎಲ್ಲರೂ ನಮ್ಮ ಕೈಬಿಟ್ಟರೂ ಒಂದು ವಿಚಾರ ಯಾವಾಗಲೂ ನೆನಪಿಟ್ಟುಕೊಳ್ಳಬೇಕು.. ನಮ್ಮ ಜೊತೆಗೆ ಯಾರೂ ಇಲ್ಲದೇ ಇದ್ದರೂ ನಮಗೆ ನಾವಿದ್ದೀವಿ ಅನ್ನೋದು.. ನಮ್ಮನ್ನ ಕಾಪಾಡಿಕೊಳ್ಳುವುದಕ್ಕೆ ಖುಷಿಯಿಂದ ಇರಿಸಿಕೊಳ್ಳುವುದಕ್ಕೆ ಎಲ್ಲರಿಗಿಂತ ಹೆಚಚ್ಚು ಶಕ್ತಿ ಇರುವುದು ನಮಗೆ ಮಾತ್ರವೇ.. ನಮ್ಮನ್ನ ನಮ್ಮಷ್ಟು ಬೇರೆ ಯಾರೂ ಅರ್ಥ ಮಾಡಿಕೊಂಡಿರೋದಕ್ಕೆ ಸಾಧ್ಯವೇ ಇಲ್ಲ..
ಎಲ್ಲದಕ್ಕಿಂತ ಮುಖ್ಯ ಏನೇ ಆದ್ರೂ ಖುಷಿಯಾಗಿರಬೇಕು.. ಎಲ್ಲಾ , ನೋವು , ಸಿಟ್ಟು ಮರೆಮಾಚಲು ನಗುವಿಗಿಂತ ಉತ್ತಮ ಮುಖವಾಡವಿಲ್ಲ.. ಒಂದು ನಗುವಿನ ಹಿಂದೆ ಹೇಳದ ನೋವಿನ ಕಥೆ , ಸಾವಿರ ಕಣ್ಣೀರಿನ ಹನಿಗಳು ಇರುತ್ತವೆ..
ಆದ್ರೆ ಯಾವುದಕ್ಕೂ ಕುಗ್ಗಬೇಡಿ , ಯಾರಪ್ಪನ ಮಾತಿಗೂ ಬಗ್ಗಬೇಡಿ, ನಿಮ್ಮ ಹಹೃದಯದ ಗುಲಾಮರಾಗಿರಿ , ಮನಸ್ಸಿನ ಒಡೆಯರಾಗಿರಿ , ಹೃದಯದ ಮಾತು ಕೇಳಿ , ಮನಸ್ಸಿನ ಮಾತನ್ನ ಗೌರವಿಸಿ.. ನಿಮಗೇನ್ ಸರಿ ಅನ್ಸುತ್ತೋ ಅದನ್ನೇ ಮಾಡಿ ,,,, ಧೈರ್ಯವಾಗಿ ಮಾಡಿ…
– ನಿಹಾರಿಕಾ ರಾವ್ –
( in prathilipi – Author Niharika Rao )