ಜೀವನದ ಜೊತೆಗಿನ ಜಂಜಾಟ
ಜೀವನದಲ್ಲಿ ಆಗಾಗ ಹಲವರು ನೆನಪಾಗ್ತಾರೆ…. ಕಣ್ಣೀರಿಗೆ ನೆಪವಾಗ್ತಾರೆ… ಖುಷಿಗೆ ಕಾರಣರಾಗುತ್ತಾರೆ..
ಅನೇಕ ಸನ್ನಿವೇಷಗಳು ನೆನಪಾಗುತ್ತವೆ.. ಕಣ್ಣೀರು ತರಿಸುತ್ತವೆ.. ನಗು ಬರಿಸುತ್ತವೆ..
ಆಗಾಗ ನಮ್ಮ ಕನಸುಗಳು ನೆನಪಾಗುತ್ತವೆ.. ನನಸಾಗದ ನೋವು ಮತ್ತದೇ ಕಣ್ಣೀರಿಗೆ ಕಾರಣವಾಗುತ್ತದೆ..
ಹಳೆ ನಾವು ನೆನಪಾದಾಗ , ಈಗಿನ ನಮ್ಮನ್ನ ನೆನಪಿಸಿಕೊಂಡು ಅಳುತ್ತೇವೆ..
ಆಗಿನ ಸ್ವಚ್ಛಂದ ಬದುಕನ್ನ ನೆನಪಿಸಿಕೊಂಡು ಈಗಿನ ಜೀವನದ ಜೊತೆಗಿನ ಜಂಜಾಟ ಹೋಲಿಕೆ ಮಾಡಿಕೊಂಡು ಅಳುತ್ತೇವೆ..
ಆಗಿದ್ದ ಖುಷಿ ನೆನಪಾದಾಗ , ಸ್ನೇಹಿತರ ಜೊತೆಗಿನ ಒಡನಾಟ ನೆನಪಾದಾಗ ನೋವಾಗತ್ತೆ.. ಖುಷಿಯಾಗುತ್ತೆ…
ಕಾಲೇಜ್ ಬಳಿ 10 ರೂ ಕಚೋರಿಯನ್ನ ಎಲ್ಲರೂ ಹಂಚಿಕೊಂಡು ತಿಂದಾಗಲೂ ಎಷ್ಟು ಖುಷಿಯಾಗಿದ್ವಿ… ಈಗ 500 ರೂ ಪಿಜ್ಜಾ ತಿಂದರೂ ಆ ಖುಷಿ , ಆ ತೃತ್ಪಿ ಏನೂ ಇಲ್ಲ… ಎಲ್ಲ ಶೂನ್ಯ ಎನಿಸಿದಾಗ ಮತ್ತೆ ಕಣ್ತುಂಬಿಕೊಳ್ಳುತ್ತೆ
ಅನುಭವ
ನೋವು ನಮ್ಮನ್ನ ಬಲಶಾಲಿಯಾಗಿ ಮಾಡುತ್ತೆ.. ಅನುಭವ ಜೀವನದ ಪಾಠ ಕಲಿಸುತ್ತೆ.. ನೋವು ಇಲ್ಲದೆ ಖುಷಿ ಸಿಗಲ್ಲ.. ಅನುಭವ ಇರದ ಜೀವನದಲ್ಲಿ ಅರ್ಥ ಇರಲ್ಲ..
– ನಿಹಾರಿಕಾ ರಾವ್ –