ಏಕಾಂತ ನಮ್ಮನ್ನ ನಮಗೆ ಪರಿಚಯಿಸುತ್ತೆ
ಏಕಾಂತವನ್ನಿಷ್ಟಪಡೋದು ಒಂಟಿಯಾದಾಗಲೇ.. ಒಂಟಿಯಾಗೋದು ಜನರಿಂದ ಬೇಸತ್ತು.. ಸಮಾನ ಆಲೋಚನೆಯಿರುವವರು ಸಿಗದಿದ್ದಾಗ, ನಮ್ಮ ಮನೋಭಾವ ಅರ್ಥವಾಗದೇ ಇರೋರು ಯಾರೂ ಇಲ್ಲ ಎಂದೆನಿಸಿದಾಗಲೇ,,,,
ನಮ್ಮ ಒಳಧ್ವನಿ ಒಳಮನಸ್ಸು ನಮ್ಮನ್ನ ಬಿಟ್ಟು ಮತ್ಯಾರಿಗೂ ಅರ್ಥ ಮಾಡಿಕೊಳ್ಳುವ ಶಕ್ತಿ ಇಲ್ಲ ಎನಿಸಿದಾಗ ನಮಗೆ ನಾವೇ ಮಿತ್ರರಾಗುತ್ತೇವೆ.. ಏಕಾಂತವನ್ನಿಷ್ಟಪಡುತ್ತೇವೆ..
ಒಂಟಿಯಾಗಿದ್ದಾಗ ಯಾರೂ ಜೊತಿಗಿಲ್ಲ ಎನ್ನುವ ಕೊರಗು ಮಾನಸಿಕ ಹಿಂಸೆ, ನಮ್ಮನ್ನ ಕ್ರಮೇಣ ಒಂಟಿತನವನ್ನ ಇಷ್ಟ ಪಡುವಂತೆ ಮಾಡಿದಾಗ ಏಕಾಂತದ ಹೊರತು ಮತ್ತೇನು ಇಷ್ಟ ಪಡುವುದಿಲ್ಲ..
ಒಂಟಿಯಾಗಿದ್ದಾಗಲೇ , ಮೌನವಾಗಿದ್ದಾಗಲೇ ಎಷ್ಟೋ ಉತ್ತರ ಸಿಗದ ಪ್ರಶ್ನೆಗಳಿಗೆ ಉತ್ತರ ಸಿಗುವುದು.. ನಮ್ಮನ್ನ ನಮ್ಮೊಂದಿಗೆ ಪರಿಚಯಿಸುವುದು ಏಕಾಂತ…