ಸಮಾಜವೆಂಬ ಕಾರಾಗೃಹ
ನಿನ್ನ ನೀನು ಸಮಾಜವೆಂಬ ಕತ್ತಲೆಯ ಕಾರಾಗೃಹದಲ್ಲಿ ಬಂಧಿಸಿಕೊಂಡಿರುವಾಗ, ಜನ ಅದು ಹೇಳ್ತಾರೆ , ಇದು ಹೇಳ್ತಾರೆ ಅಂತ ನಿನ್ನ ಇಷ್ಟ ಬಂದಂತೆ ಬದುಕೋದು ಬಿಟ್ಟು ಅವರಿವರ ಮಾತಿಗೆ ಹೆದರಿ , ಅಂಜಿ , ಖುಷಿ ತ್ಯಜಿಸಿ ಇತರರಿಗೋಸ್ಕರ ಬದುಕಲಾರಂಭಿಸಿದಾಗ , ನಿನ್ನ ಇಷ್ಟಗಳ ಬಲಿ ಕೊಟ್ಟು , ಯಾರನ್ನೋ ನೋಡಿ ನಾನು ಹಾಗೆ ಇರಬೇಕಿತ್ತು ಆಗ್ತಿಲ್ಲ ಅಂದುಕೊಂಡು ಕೊರಗುವಾಗ , ನಿನಗೆ ಬೇಕಂದದ್ದು ಮಾಡುವ ಸ್ವಾತಂತ್ರ್ಯ ನಿನಗೆ ಸಿಗದೇ ಇದ್ದಾಗ , ನಿತ್ಯ ನರಳಿ ನರಳಿ ಸಾಯುವಾಗಲೇ ನಿನಗೆ ಅನ್ನಿಸುತ್ತೆ , ನಿಜವಾದ ಕಾರಾಗೃಹ ಯಾವುದು ಅಂತ…. ಆಗ ಸಮಾಜದ ಕತ್ತಲ ಕಾರಾಗೃಕ್ಕಿಂತ ಒಬ್ಬಂಟಿಯಾಗಿ ಎಲ್ಲರಿಂದ ಎಲ್ಲದರಿಂದಲೂ ದೂರ ನಾಲ್ಕು ಗೋಡೆಗಳ ನಡುವೆ ಒಬ್ಬಂಟಿಯಾಗಿರುವುದು ಮನಸ್ಸಿಗೆ ಅದೆಷ್ಟು ಖುಷಿ ನೀಡುತ್ತೆ ಅಂತ…







