ಸ್ಯಾಂಡಲ್ ವುಡ್ ನ ಖಳ ಭಯಂಕರನ ಇಬ್ಬರು ಪುತ್ರರತ್ನಗಳ ಸಹೋದರರ ಸವಾಲ್!

1 min read
Saakshatv cinema tharunsudhir nandakishor

ಸ್ಯಾಂಡಲ್ ವುಡ್ ನ ಖಳ ಭಯಂಕರನ ಇಬ್ಬರು ಪುತ್ರರತ್ನಗಳ ಸಹೋದರರ ಸವಾಲ್! Saakshatv cinema tharunsudhir nandakishor

ಕನ್ನಡ ಚಿತ್ರರಂಗದ ಖಳ ಭಯಂಕರ ಎಂದರೆ ಕನ್ನಡ ಚಿತ್ರಪ್ರೇಮಿಗಳಿಗೆ ನೆನಪಾಗುವುದು ಖಳನಟ ದಿ.ಸುಧೀರ್. 200ಕ್ಕೂ ಹೆಚ್ಚು ಸಿನಿಮಾದಲ್ಲಿ ನಟಿಸಿ ಕನ್ನಡದ ಜನಪ್ರಿಯ ಖಳನಟರಾಗಿದ್ದ ಸುಧೀರ್, ತಮ್ಮ ಅದ್ಭುತ ನಟನೆಯ ಮೂಲಕ ಇಂದಿಗೂ ಕನ್ನಡ ಚಿತ್ರಪ್ರೇಮಿಗಳ ಮನದಾಳದಲ್ಲಿ ಬೇರೂರಿದ್ದಾರೆ. Saakshatv cinema tharunsudhir nandakishor
Saakshatv cinema tharunsudhir nandakishor

ವೃತ್ತಿರಂಗಭೂಮಿ ಕಲಾವಿದರಿಗಾಗಿ ನಾಟಕ ಕಂಪನಿ ಸ್ಥಾಪಿಸಿದ್ದ ಸುಧೀರ್, ಆ ಕಂಪನಿಯಲ್ಲೇ ಪಾತ್ರ ಮಾಡುತ್ತಿದ್ದ ಮಾಲತಿಯವರನ್ನು ವಿವಾಹವಾಗಿದ್ದರು. ಈ ದಂಪತಿಗಳ ಇಬ್ಬರು ಪುತ್ರರು ಇಂದು ಕನ್ನಡ ಚಿತ್ರರಂಗದ ಸ್ಟಾರ್ ಡೈರೆಕ್ಟರ್ಸ್ ಆಗಿದ್ದಾರೆ. ಅವರೇ ತರುಣ್ ಸುಧೀರ್, ನಂದಕಿಶೋರ್.‌

ಡಸ್ಟ್ ಅಲರ್ಜಿಯಿಂದ ಬಳಲುತ್ತಿದ್ದ ಸುಧೀರ್ ಸಿನಿಮಾ ಶೂಟಿಂಗ್ ವೊಂದರ ಸಂದರ್ಭದಲ್ಲಿ ಧೂಳಿನಿಂದಾಗಿ ಕಂಗೆಟ್ಟು ಆಸ್ಪತ್ರೆ ಸೇರುವಂತಾಗಿತ್ತು. ಕೊನೆಗೆ 2000ನೇ ಇಸವಿ ಜೂನ್ 13ರಂದು ಚಿಕಿತ್ಸೆ ಫಲಕಾರಿಯಾಗದೆ ಸುಧೀರ್ ಬಾರದ ಲೋಕಕ್ಕೆ ತೆರಳಿದರು. ಆಗ ಅವರ ಹಿರಿಯ ಮಗ ತರುಣ್ ಸುಧೀರ್ 10ನೇ ತರಗತಿಯಲ್ಲಿದ್ದರೆ, ಅವರ ಕಿರಿಯ ಮಗ ನಂದಕಿಶೋರ್ 9ನೇ ತರಗತಿಯಲ್ಲಿದ್ದರು.

ಸುಧೀರ್ ಅವರನ್ನು ಕಳೆದುಕೊಂಡು ಅನಾಥವಾಗಿದ್ದ ಕುಟುಂಬ ಬದುಕಿನ ಸೆಣಸಾಟದಲ್ಲಿ ಮನೆ, ಸೈಟು, ಹಣವನ್ನೆಲ್ಲಾ ಕಳೆದುಕೊಂಡುಬಿಟ್ಟಿತ್ತು. ಆಗ ಮಾಲತಿ ಸುಧೀರ್
ಮಕ್ಕಳ ಭವಿಷ್ಯ ಮತ್ತು ಪತಿ ಸುಧೀರ್ ಅವರ ಕನಸು ನನಸು ಮಾಡುವ ಛಲದೊಂದಿಗೆ ಬದುಕಿನ ಜಟಕಾ ಬಂಡಿ ಏರಿದ್ದರು. ಇದೀಗ ತರುಣ್​ ಸುಧೀರ್ ಮತ್ತು ನಂದ ಕಿಶೋರ್ ಕನ್ನಡ ಚಿತ್ರರಂಗದ ಯಶಸ್ವಿ ನಿರ್ದೇಶಕರಾಗಿದ್ದಾರೆ.
Saakshatv cinema tharunsudhir nandakishor

ನಂದ ಕಿಶೋರ್ ನಿರ್ದೇಶನ ಮಾಡಿರುವ ಏಳನೇ ಚಿತ್ರ ಪೊಗರು ಬಿಡುಗಡೆಯಾದ 10 ದಿನಗಳಲ್ಲಿ 51 ಕೋಟಿ ಕಲೆಕ್ಷನ್ ಮಾಡಿದೆ. ಹಲವು ವಿವಾದಗಳ ನಡುವೆ ಮೂರು ಭಾಷೆಗಳಲ್ಲಿ ಬಿಡುಗಡೆಯಾದ ಪೊಗರು’ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಚಿಂದಿ ಉಡಾಯಿಸಿದೆ.
ಕೆಂಪೇಗೌಡ ಮತ್ತು ವೀರ ಮದಕರಿ ಚಿತ್ರದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದ ನಂದ ಕಿಶೋರ್, ನಂತರ ಶರಣ್ ಅಭಿನಯದ ವಿಕ್ಟರಿ ಚಿತ್ರದಿಂದ ಸ್ವತಂತ್ರ ನಿರ್ದೇಶಕರಾಗಿ ಸಿನಿಪಯಣ ಪ್ರಾರಂಭಿಸಿದರು. ಇವರ ನಿರ್ದೇಶಿಸಿದ ಮೊದಲು ಮೂರು ಚಿತ್ರಗಳಾದ `ವಿಕ್ಟರಿ’,`ಅಧ್ಯಕ್ಷ’,`ರನ್ನ’ ಚಿತ್ರಗಳು ಸಹ ಸೂಪರ್ ಹಿಟ್ ಆಗಿವೆ.

ನಟ ತರುಣ್​ ಸುಧೀರ್​ ಚೌಕ ನಂತರ ಆಕ್ಷನ್ ​ ಕಟ್​ ಹೇಳಿರುವ ಎರಡನೇ ಸಿನಿಮಾ ರಾಬರ್ಟ್ ಈಗಾಗಲೇ ಎಲ್ಲೆಡೆ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ರಿಲೀಸ್ ಆದ ಹಲವು ಥಿಯೇಟರ್ ಗಳಲ್ಲಿ ನಿರಂತರವಾಗಿ ಹೌಸ್ ಫುಲ್ ಬೋರ್ಡ್ ಬೀಳುತ್ತಿದೆ.
Saakshatv cinema tharunsudhir nandakishor

ನಂದ ಕಿಶೋರ್ ನಿರ್ದೇಶನದ ಧ್ರುವ ಸರ್ಜಾ ಅಭಿನಯದ ‘ಪೊಗರು’ ಚಿತ್ರವು ಒಂದು ದಾಖಲೆ ನಿರ್ಮಿಸಿದ್ದರೆ, ತರುಣ್​ ಸುಧೀರ್ ನಿರ್ದೇಶನದ ದರ್ಶನ್ ಅಭಿನಯದ ರಾಬರ್ಟ್ ಆ ದಾಖಲೆಯನ್ನು ಮುರಿಯುವುದಕ್ಕೆ ಹೊರಟಿದೆ.
ಕಷ್ಟದ ಬದುಕಿನ ಜೊತೆ, ಜೊತೆಯಲ್ಲಿ ಯಶಸ್ಸಿನ ಮೆಟ್ಟಿಲೇರಿದ್ದ ಸಹೋದರರಾದ ತರುಣ್​ ಸುಧೀರ್ ಮತ್ತು ನಂದ ಕಿಶೋರ್ ಅವರ ಚಿತ್ರಗಳು ಸಹೋದರರ ಸವಾಲ್ ಎಂಬಂತೆ ಪೈಪೋಟಿಗಿಳಿದಿದ್ದು, ಕನ್ನಡ ಚಿತ್ರಪ್ರೇಮಿಗಳು ಸಿನಿಮಾವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd