ಗರಿಗರಿಯಾದ ಬೆಳ್ಳುಳ್ಳಿ ಮಂಡಕ್ಕಿ / ಹುರಿಯಕ್ಕಿ Saakshatv cooking recipes Garlic mandakki
ಬೇಕಾಗುವ ಸಾಮಗ್ರಿಗಳು
ಮಂಡಕ್ಕಿ / ಹುರಿಯಕ್ಕಿ 1 ಲೀಟರ್
ಬೆಳ್ಳುಳ್ಳಿ 15-20 ಎಸಳು
ಜೀರಿಗೆ 1 ಚಮಚ
ಸಣ್ಣಗೆ ಕತ್ತರಿಸಿದ ಹಸಿಮೆಣಸಿನ ಕಾಯಿ 4
ಕರಿಬೇವಿನ ಸೊಪ್ಪು ಸ್ವಲ್ಪ
ಚಿಕ್ಕದಾಗಿ ಹೆಚ್ಚಿದ ಕೊಬ್ಬರಿ 1/2 ಕಪ್
ಶೇಂಗಾ/ಕಡಲೆಕಾಯಿ 1/4 ಕಪ್
ಹುರಿಗಡಲೆ 200 gms
ನಿಂಬೆ 1/2
ಮೆಣಸಿನ ಹುಡಿ 1 ಚಮಚ
ಅರಿಶಿಣ ಪುಡಿ 1/2 ಚಮಚ
ಚಾಟ್ ಮಸಾಲಾ 1/2 ಚಮಚ
ಸಕ್ಕರೆ ಪೌಡರ್ 1 ಚಮಚ (optional)
ರುಚಿಗೆ ತಕ್ಕಷ್ಟು ಉಪ್ಪು
ಎಣ್ಣೆ ಸ್ವಲ್ಪ
Saakshatv cooking recipes Garlic mandakki
ಮಾಡುವ ವಿಧಾನ
ಬಾಣಲೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಜೀರಿಗೆ ಸೇರಿಸಿ, ಬಳಿಕ ಜಜ್ಜಿದ ಬೆಳ್ಳುಳ್ಳಿ ಹಾಕಿ ಹುರಿಯಿರಿ. ಅದಕ್ಕೆ ಶೇಂಗಾ ಬೇರೆಸಿ 30 ಸೆಕೆಂಡ್ ಹುರಿಯಿರಿ. ನಂತರ ಹಸಿ ಮೆಣಸು, ಕೊಬ್ಬರಿ ಹಾಕಿ ಹುರಿಯಿರಿ. ಬಳಿಕ ಅದಕ್ಕೆ ಹುರಿಗಡಲೆ ಕರಿಬೇವಿನ ಸೊಪ್ಪು ಸೇರಿಸಿ, ಹುರಿಯಿರಿ. ನಿಂಬೇರಸ ಹಿಂಡಿ. ಈಗ ಮೆಣಸಿನ ಪುಡಿ, ಅರಿಶಿಣ ಪುಡಿ, ಸಕ್ಕರೆ ಪುಡಿ, ಚಾಟ್ ಮಸಾಲಾ, ಉಪ್ಪು ಹಾಕಿ ತಿರುವಿ.
ಈಗ ಅದಕ್ಕೆ ಮಂಡಕ್ಕಿ/ ಹುರಿಯಕ್ಕಿ ಸೇರಿಸಿ ತಿರುವಿ. 2 ನಿಮಿಷ ಚೆನ್ನಾಗಿ ಮಿಕ್ಸ್ ಮಾಡಿ. ಈಗ ಗರಿಗರಿಯಾದ ಬೆಳ್ಳುಳ್ಳಿ ಮಂಡಕ್ಕಿ ಸವಿಯಲು ಸಿದ್ಧ.
ಇನ್ನಷ್ಟು ಅಡುಗೆ ರೆಸಿಪಿಗಾಗಿ ಗೂಗಲ್ ನಲ್ಲಿ Saakshatv cooking ಎಂದು ಸರ್ಚ್ ಮಾಡಿ.
ಮೂತ್ರಪಿಂಡದಲ್ಲಿ ಕಲ್ಲು (ಕಿಡ್ನಿ ಸ್ಟೋನ್ )ಗಳ ರಚನೆಗೆ ಕಾರಣವಾಗುವ ಕೆಲವು ತರಕಾರಿಗಳು https://t.co/7SN7tqpsgH
— Saaksha TV (@SaakshaTv) February 25, 2021
ಎಸ್‌ಬಿಐ ಗ್ರಾಹಕರಿಗೆ ಗುಡ್ ನ್ಯೂಸ್ - ಕೇವಲ ಒಂದು ಮಿಸ್ ಕಾಲ್ ನೀಡಿ 20 ಲಕ್ಷದವರೆಗೆ ಸಾಲ ಪಡೆಯಿರಿ https://t.co/TNAZg7qahU
— Saaksha TV (@SaakshaTv) February 25, 2021
ಅನ್ನ ಮಿಕ್ಕಿದ್ದರೆ ತಯಾರಿಸಿ ಸಿಹಿಯಾದ ರಸಗುಲ್ಲಾ ! https://t.co/V946jFPPRm
— Saaksha TV (@SaakshaTv) February 25, 2021