ಚಿಕನ್ ಮಂಚೂರಿ
ಬೇಕಾಗುವ ಸಾಮಾಗ್ರಿಗಳು
ಬೋನ್ಲೆಸ್ ಚಿಕನ್ – 1/2 ಕೆಜಿ
ಮೈದಾಹಿಟ್ಟು – 5 ಚಮಚ
ಕಾರ್ನ್ ಸ್ಟಾರ್ಚ್ – 3 ಚಮಚ
ಕಾಳುಮೆಣಸಿನ ಹುಡಿ – 1/4 ಚಮಚ
ನೀರು – 1/4 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಹುರಿಯಲು ಎಣ್ಣೆ
ಎಣ್ಣೆ – 1 ಟೇಬಲ್ ಚಮಚ
ಸಣ್ಣಗೆ ಹೆಚ್ಚಿದ ಈರುಳ್ಳಿ – 1/2 ಕಪ್
ಹಸಿಮೆಣಸಿನಕಾಯಿ – 5-6
ಬೆಳ್ಳುಳ್ಳಿ – 4 ರಿಂದ 5 ಎಸಳು
ಟೊಮೆಟೊ ಕೆಚಪ್ – 3 ಚಮಚ
ರೆಡ್ ಚಿಲ್ಲಿ ಸಾಸ್ – 2 ಚಮಚ
ಸೋಯಾ ಸಾಸ್ – 4 ಚಮಚ
ವಿನಿಗರ್ – 2 ಚಮಚ
ನೀರು – 6 ಟೇಬಲ್ ಚಮಚ
ಕಾರ್ನ್ ಸ್ಟ್ರ್ಯಾಚ್ – 1 ಚಮಚ

ಮಾಡುವ ವಿಧಾನ
ಮೊದಲಿಗೆ ಮೈದಾಹಿಟ್ಟು, ಕಾರ್ನ್ ಸ್ಟಾರ್ಚ್, ಉಪ್ಪು, ಕಾಳುಮೆಣಸಿನ ಹುಡಿ ಬೆರೆಸಿ, ನಿಧಾನವಾಗಿ ಅಗತ್ಯವಿರುವಷ್ಟು ನೀರು ಸೇರಿಸಿ ಗಂಟಿಲ್ಲದಂತೆ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ. ನಂತರ ಅದಕ್ಕೆ ಸ್ವಚ್ಛಗೊಳಿಸಿದ ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಕಲಸಿ. 15 – 20 ನಿಮಿಷಗಳ ಕಾಲ ಹಾಗೆಯೇ ಬಿಡಿ
ಬಳಿಕ ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ನಂತರ ಅದಕ್ಕೆ ಕಲೆಸಿಟ್ಟುಕೊಂಡ ಚಿಕನ್ ತುಂಡುಗಳನ್ನು ಹಾಕಿ ಹೊಂಬಣ್ಣಕ್ಕೆ ತಿರುಗುವವರೆಗೂ ಹುರಿಯಿರಿ.
ನಂತರ ಪಾನ್ ಗೆ 1 ಟೇಬಲ್ ಚಮಚ ಎಣ್ಣೆ ಹಾಕಿ ಮಧ್ಯಮ ಉರಿಯಲ್ಲಿ ಬಿಸಿ ಮಾಡಿ. ನಂತರ ಅದಕ್ಕೆ ಈರುಳ್ಳಿ, ಹಸಿಮೆಣಸು, ಬೆಳ್ಳುಳ್ಳಿ ಸೇರಿಸಿ ಚೆನ್ನಾಗಿ ಹುರಿಯಿರಿ. ಬಳಿಕ ಟೊಮೆಟೊ ಕೆಚಪ್, ರೆಡ್ ಚಿಲ್ಲಿ ಸಾಸ್ ಸೇರಿಸಿ ಎಣ್ಣೆ ಬಿಡುವವರೆಗೂ ಕಲಸಿ.
ನಂತರ ಅದಕ್ಕೆ ಸೋಯಾ ಸಾಸ್, ವಿನಿಗರ್ ಬೆರೆಸಿ ಮಿಶ್ರ ಮಾಡಿ. ಬಳಿಕ ಕಾರ್ನ್ ಸ್ಟಾರ್ಚ್ ಗೆ ನೀರು ಸೇರಿಸಿ ಬೆರೆಸಿ. ಮಿಶ್ರಣ ದಪ್ಪಗಾಗುವವರೆಗೂ ಚೆನ್ನಾಗಿ ಕಲಸಿ. ಅದಕ್ಕೆ ಹುರಿದಿಟ್ಟುಕೊಂಡ ಚಿಕನ್ ತುಂಡುಗಳನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಈಗ ಚಿಕನ್ ಮಂಚೂರಿ ಸಿದ್ಧವಾಗಿದೆ. ಇದನ್ನು ಫ್ರೈಡ್ ರೈಸ್ ಅಥವಾ ನೂಡಲ್ಸ್ ಜೊತೆ ಸವಿಯಿರಿ

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1403510566732320771?s=19
https://twitter.com/SaakshaTv/status/1403205441136517123?s=19
https://twitter.com/SaakshaTv/status/1403178218702651395?s=19
https://twitter.com/SaakshaTv/status/1403566539098492928?s=19
https://twitter.com/SaakshaTv/status/1403555808617566212?s=19
#Saakshatv #cookingrecipe #chickenManchurian








