ಹೆಸರುಬೇಳೆಯ ಲಾಡು
ಬೇಕಾಗುವ ಪದಾರ್ಥಗಳು
2 ಕಪ್ – ಹೆಸರು ಬೇಳೆ
1/2 ಕಪ್ – ತುಪ್ಪ
1ಕಪ್ – ಸಕ್ಕರೆ
6 – ಏಲಕ್ಕಿ
ಸ್ವಲ್ಪ ಕತ್ತರಿಸಿದ ಗೋಡಂಬಿ
ಮಾಡುವ ವಿಧಾನ
ಮೊದಲು, ಬಾಣಲೆಯನ್ನು ಬಿಸಿ ಮಾಡಿ ಹೆಸರು ಬೇಳೆಯನ್ನು ಕಡಿಮೆ ಉರಿಯಲ್ಲಿ ಹುರಿಯಿರಿ. ಹೆಸರು ಬೇಳೆ ಹೊಂಬಣ್ಣಕ್ಕೆ ತಿರುಗುವವರೆಗೆ ಮತ್ತು ಪರಿಮಳ ಬರುವವರೆಗೆ 15 ರಿಂದ 20 ನಿಮಿಷ ಚೆನ್ನಾಗಿ ಹುರಿದು ತೆಗೆಯಿರಿ.

ಇದು ತಣ್ಣಗಾದ ಬಳಿಕ ಮಿಕ್ಸಿ ಜಾರಿನಲ್ಲಿ ಹಾಕಿ ನುಣ್ಣಗೆ ಹುಡಿ ಮಾಡಿ. ನಂತರ ಇದನ್ನು ಅಗಲವಾದ ಪಾತ್ರೆಗೆ ಹಾಕಿ. ಇದಕ್ಕೆ ಪುಡಿ ಮಾಡಿದ ಸಕ್ಕರೆ, ಪುಡಿ ಮಾಡಿದ ಏಲಕ್ಕಿಯನ್ನು ಸೇರಿಸಿ, ಚೆನ್ನಾಗಿ ಮಿಶ್ರ ಮಾಡಿ. ಚಿಕ್ಕದಾಗಿ ಕತ್ತರಿಸಿದ ಗೇರು ಬೀಜಗಳನ್ನು ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಬೆರೆಸಿ. ಈಗ ಈ ಮಿಶ್ರಣಕ್ಕೆ ಬಿಸಿ ಮಾಡಿದ ತುಪ್ಪವನ್ನು ಸೇರಿಸಿ. ಚೆನ್ನಾಗಿ ಮಿಶ್ರ ಮಾಡಿ. ಈ ಹಿಟ್ಟಿನಿಂದ ಸಣ್ಣ ಲಿಂಬೆ ಗಾತ್ರದ ಉಂಡೆಗಳನ್ನು ಮಾಡಿ. ಈಗ ಹೆಸರು ಹಿಟ್ಟಿನ ಲಾಡು ಸವಿಯಲು ಸಿದ್ಧವಾಗಿದೆ.

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ… ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ
https://twitter.com/SaakshaTv/status/1388682835981074438?s=19
https://twitter.com/SaakshaTv/status/1387985910877327377?s=19
https://twitter.com/SaakshaTv/status/1387958028314587140?s=19
https://twitter.com/SaakshaTv/status/1387622796973510659?s=19
#Saakshatv #cookingrecipe #hesarubele #laadu








