ಹೀರೇಕಾಯಿಯ ಸಿಪ್ಪೆ ಚಟ್ನಿ
ಬೇಕಾಗುವ ಸಾಮಗ್ರಿಗಳು
ಹೀರೆಕಾಯಿ ಸಿಪ್ಪೆ – 1 ಕಪ್
ಈರುಳ್ಳಿ – 1
ಒಣಮೆಣಸು – 4-5
ಕಡ್ಲೆಬೇಳೆ – 1 ಚಮಚ
ಉದ್ದಿನಬೇಳೆ – 1 ಚಮಚ
ಎಳ್ಳು – 2 ಚಮಚ
ಕಡ್ಲೆಬೀಜ – 2 ಚಮಚ
ಹುಣಸೆ ಹಣ್ಣು – ಸ್ವಲ್ಪ
ಬೆಲ್ಲ – 1 ಸಣ್ಣ ತುಂಡು
ಜೀರಿಗೆ – 1/2 ಚಮಚ
ಬೆಳ್ಳುಳ್ಳಿ – 2 ಎಸಳು
ಕರಿಬೇವು – ಸ್ವಲ್ಪ
ಕೊತ್ತಂಬರಿಸೊಪ್ಪು – ಸ್ವಲ್ಪ
ರುಚಿಗೆ ತಕ್ಕಷ್ಟು ಉಪ್ಪು
ಸಾಸಿವೆ – 1/2 ಚಮಚ
ಇಂಗು – ಚಿಟಿಕೆ

ಮಾಡುವ ವಿಧಾನ
ಹೀರೆಕಾಯಿ ಸಿಪ್ಪೆಯನ್ನು ಚೆನ್ನಾಗಿ ತೊಳೆಯಿರಿ. ಬಾಣಲೆಗೆ 1/2 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಹೀರೇಕಾಯಿ ಸಿಪ್ಪೆ ಯನ್ನು 3-4 ನಿಮಿಷ ಹುರಿಯಿರಿ. ನಂತರ ಸಣ್ಣಗೆ ಹೆಚ್ಚಿದ ಈರುಳ್ಳಿ ಸೇರಿಸಿ ಕೆಂಪಗಾಗುವವರೆಗೆ ಹುರಿಯಿರಿ. ನಂತರ ಒಣ ಮೆಣಸು ಸೇರಿಸಿ ಹುರಿಯಿರಿ.ನಂತರ ಅದಕ್ಕೆ ಉದ್ದಿನಬೇಳೆ, ಕಡ್ಲೆಬೇಳೆ, ಎಳ್ಳು, ಕಡಲೆ ಬೀಜ ಸೇರಿಸಿ ಹುರಿಯಿರಿ. ಈಗ ಇದಕ್ಕೆ ಹುಣಸೆ ಹಣ್ಣು ಬೆಲ್ಲ ಜೀರಿಗೆ ಬೆಳ್ಳುಳ್ಳಿ, ಉಪ್ಪು, ಕೊತ್ತಂಬರಿ ಸೊಪ್ಪು, ಕರಿಬೇವಿನ ಸೊಪ್ಪು ಸೇರಿಸಿಮಿಕ್ಸಿ ಜಾರಿಗೆ ಹಾಕಿ ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ರುಬ್ಬಿ.
ನಂತರ ಇದಕ್ಕೆ ಸಾಸಿವೆ, ಇಂಗು, ಕರಿಬೇವಿನ ಒಗ್ಗರಣೆ ಕೊಟ್ಟರೆ ಹೀರೇಕಾಯಿಯ ಸಿಪ್ಪೆ ಚಟ್ನಿ ರೆಡಿ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1411875662923800576?s=19
https://twitter.com/SaakshaTv/status/1411902767283806210?s=19
https://twitter.com/SaakshaTv/status/1411513772892622849?s=19
ನಿಪ್ಪಟ್ಟು#Saakshatv #cookingrecipe #nippattu https://t.co/zlCk45Y8NM
— Saaksha TV (@SaakshaTv) July 4, 2021
https://twitter.com/SaakshaTv/status/1411482902072811521?s=19
#Saakshatv #cookingrecipe #hirekayipeelchutney








