ಮನೆಯಲ್ಲೇ ಸುಲಭವಾಗಿ ತಯಾರಿಸಿ ಬಟರ್ ನಾನ್
ಬೇಕಾಗುವ ಸಾಮಗ್ರಿ
ಮೈದಾ – 2 ಕಪ್
ಸಕ್ಕರೆ – 2 ಚಮಚ
ಬೇಕಿಂಗ್ ಪೌಡರ್ – 1/2 ಚಮಚ
ಬೇಕಿಂಗ್ ಸೋಡಾ 1/4 ಚಮಚ
ಸಣ್ಣಗೆ ಹೆಚ್ಚಿದ ಬೆಳ್ಳುಳ್ಳಿ – 1-1.5 ಚಮಚ (optional)
ರುಚಿಗೆ ತಕ್ಕಷ್ಟು ಉಪ್ಪು
ತಾಜಾ ಮೊಸರು – 1/2 ಕಪ್
ಎಣ್ಣೆ/ಬೆಣ್ಣೆ – 2 ಚಮಚ
ಉಗುರು ಬೆಚ್ಚಗಿನ ಹಾಲು – ಅಗತ್ಯವಿರುವಷ್ಟು
ಬೆಣ್ಣೆ – 2 ಚಮಚ
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು- ಸ್ವಲ್ಪ

ತಯಾರಿಸುವ ವಿಧಾನ :
ಮೊದಲಿಗೆ ಪಾತ್ರೆಯಲ್ಲಿ ಮೈದಾ, ಸಕ್ಕರೆ, ಬೇಕಿಂಗ್ ಪೌಡರ್, ಬೇಕಿಂಗ್ ಸೋಡಾ, ಉಪ್ಪು, ಬೆಳ್ಳುಳ್ಳಿ, ಸೇರಿಸಿ ಚೆನ್ನಾಗಿ ಬೆರೆಸಿ.
ನಂತರ ಎಣ್ಣೆ/ ಬಿಸಿ ಮಾಡಿದ ಬೆಣ್ಣೆ, ಮೊಸರು, 1/4 ಕಪ್ ಉಗುರು ಬೆಚ್ಚಗಿನ ಹಾಲು ಸೇರಿಸಿ ಚೆನ್ನಾಗಿ ನಾದಿ. ಮೃದುವಾದ ಚಪಾತಿ ಹಿಟ್ಟಿನ ಹದಕ್ಕೆ ಬರುವವರೆಗೂ ಕಲೆಸಿಕೊಳ್ಳಿ. ಅಗತ್ಯವಿದ್ದರೆ ಉಗುರು ಬೆಚ್ಚಗಿನ ಹಾಲನ್ನು ಸೇರಿಸಿಕೊಳ್ಳಿ. ಹಿಟ್ಟನ್ನು ಮೃದುವಾಗುವವರೆಗೆ ಚೆನ್ನಾಗಿ ನಾದಿ. ನಂತರ ಒದ್ದೆ ಬಟ್ಟೆಯನ್ನು ಮುಚ್ಚಿ 2 ಗಂಟೆ ಹಾಗೆಯೇ ಬಿಡಿ.
ಈಗ ಚಿಕ್ಕದಾದ ಬೌಲ್ ನಲ್ಲಿ ಬೆಣ್ಣೆ ಮತ್ತು ಕೊತ್ತಂಬರಿ ಸೊಪ್ಪನ್ನು ಸೇರಿಸಿ ಬೆರೆಸಿ.
2 ಗಂಟೆಗಳ ಬಳಿಕ ಕಲಸಿಟ್ಟ ಹಿಟ್ಟನ್ನು ತೆಗೆದುಕೊಂಡು ಇನ್ನೊಮ್ಮೆ ಚೆನ್ನಾಗಿ ನಾದಿ. ನಂತರ ಚಿಕ್ಕ ಚಿಕ್ಕ ಉಂಡೆಗಳನ್ನು ಮಾಡಿಕೊಳ್ಳಿ. ಈ ಉಂಡೆಗಳನ್ನು ನಿಮಗೆ ಬೇಕಾದ ಆಕಾರಕ್ಕೆ ಸ್ವಲ್ಪ ದಪ್ಪಗೆ ಲಟ್ಟಿಸಿಕೊಳ್ಳಿ. ನಂತರ ಬೆಣ್ಣೆ ಮತ್ತು ಕೊತ್ತಂಬರಿ ಸೊಪ್ಪಿನ ಮಿಶ್ರಣವನ್ನು ಹರಡಿ. ಮತ್ತೊಮ್ಮೆ ಮೆಲ್ಲಗೆ ಒಂದು ಬಾರಿ ಲಟ್ಟಿಸಿಕೊಳ್ಳಿ.
ಈಗ ಪ್ಯಾನ್ ಅನ್ನು ಬಿಸಿ ಮಾಡಿ. ಲಟ್ಟಿಸಿ ಇಟ್ಟುಕೊಂಡ ನಾನ್ ಗಳನ್ನು ಒಂದೊಂದಾಗಿ ಹೊಂಬಣ್ಣಕ್ಕೆ ಬರುವವರೆಗೆ ಎರಡೂ ಬದಿ ಕಾಯಿಸಿ ತೆಗೆಯಿರಿ. ಬೆಣ್ಣೆಯನ್ನು ಸವರಿ ಬಿಸಿ ಬಿಸಿಯಾದ ಬಟರ್ ನಾನ್ ಅನ್ನು ನಾರ್ತ್ ಇಂಡಿಯನ್ ಗ್ರೇವಿ ಜೊತೆ ಸವಿಯಿರಿ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಸಂಚಾರದ ಹಾದಿಯಲ್ಲಿ ದುರ್ವಿದಿಯ ಆಟಕ್ಕೆ ಬಲಿಯಾದ ನಟ ಸಂಚಾರಿ ವಿಜಯ್#Kannadaactor #SanchariVijay https://t.co/nFmJpi53YE
— Saaksha TV (@SaakshaTv) June 15, 2021
ಸೂಪರ್ ಟೇಸ್ಟಿ ಮಿಕ್ಸೆಡ್ ವೆಜ್ ಫ್ರೈಡ್ ರೈಸ್#Saakshatv #cookingrecipe #friedrice https://t.co/mX1dPaMfGd
— Saaksha TV (@SaakshaTv) June 14, 2021
https://twitter.com/SaakshaTv/status/1404265404520824834?s=19
https://twitter.com/SaakshaTv/status/1404235271634403329?s=19
https://twitter.com/SaakshaTv/status/1403930150232854530?s=19
#Saakshatv #cookingrecipe #homemade #butternan








