ಬದನೆ ಪಲಾವ್
ಬೇಕಾಗುವ ಸಾಮಗ್ರಿಗಳು
ಅಕ್ಕಿ – 2ಕಪ್
ಕೊತ್ತಂಬರಿ ಬೀಜ – 4 ಚಮಚ
ಚಕ್ಕೆ – 2 ತುಂಡು
ಲವಂಗ – 4
ಏಲಕ್ಕಿ – 2
ಪಲಾವ್ ಎಲೆ – 2
ಚಕ್ರಿ ಹೂ – 1
ಎಳ್ಳು – 2 ಚಮಚ
ತುಪ್ಪ – 3 ಚಮಚ
ಎಣ್ಣೆ – 2 ಚಮಚ
ಜೀರಿಗೆ – 1ಚಮಚ
ಈರುಳ್ಳಿ – 2
ಹಸಿಮೆಣಸಿನಕಾಯಿ – 4
ಆಲೂಗಡ್ಡೆ – 1
ಬದನೆಕಾಯಿ – 2
ಬೀನ್ಸ್ – 4
ಕೆಂಪು ಮೆಣಸಿನ ಪುಡಿ – 1ಚಮಚ
ಅರಿಶಿನ ಪುಡಿ – 1/2ಚಮಚ
ನಿಂಬೆ ರಸ – 2ಚಮಚ
ರುಚಿಗೆ ತಕ್ಕಷ್ಟು ಉಪ್ಪು
ಕೊತ್ತಂಬರಿಸೊಪ್ಪು – ಸ್ವಲ್ಪ

ಮಾಡುವ ವಿಧಾನ
ಮೊದಲಿಗೆ ಅಕ್ಕಿಯನ್ನು ತೊಳೆದು 10 ನಿಮಿಷ ನೆನೆಸಿಡಿ.
ಒಂದು ಬಾಣಲೆಯಲ್ಲಿ ಕೊತ್ತಂಬರಿ ಬೀಜ, ಚಕ್ಕೆ, ಲವಂಗ, ಏಲಕ್ಕಿ, ಪಲಾವ್ ಎಲೆ, ಚಕ್ರಿ ಹೂ, ಎಳ್ಳು ಹಾಕಿ ಚೆನ್ನಾಗಿ ಹುರಿದು ತಣ್ಣಗಾದ ಮೇಲೆ ಮಿಕ್ಸಿ ಜಾರಿಗೆ ಹಾಕಿ ಪೌಡರ್ ಮಾಡಿಟ್ಟುಕೊಳ್ಳಿ.
ಈಗ ಕುಕ್ಕರ್ ನಲ್ಲಿ ತುಪ್ಪ ಮತ್ತು ಎಣ್ಣೆ ಬಿಸಿ ಮಾಡಿ. ಇದಕ್ಕೆ ಜೀರಿಗೆ, ಹೆಚ್ಚಿದ ಈರುಳ್ಳಿ ಹಾಕಿ ಹುರಿಯಿರಿ. ಈರುಳ್ಳಿ ಕೆಂಪಗಾದ ಬಳಿಕ ಕತ್ತರಿಸಿದ ಹಸಿಮೆಣಸಿನಕಾಯಿ ಸೇರಿಸಿ ಹುರಿಯಿರಿ. ಈಗ ಚಿಕ್ಕದಾಗಿ ಕತ್ತರಿಸಿದ ಆಲೂಗಡ್ಡೆ, ಬದನೆಕಾಯಿ, ಬೀನ್ಸ್ ಸೇರಿಸಿ ಚೆನ್ನಾಗಿ ಹುರಿಯಿರಿ. ನಂತರ ಕೆಂಪು ಮೆಣಸಿನ ಪುಡಿ, ಅರಿಶಿನ ಪುಡಿ, ರುಬ್ಬಿಟ್ಟುಕೊಂಡ ಪೌಡರ್, ಉಪ್ಪು ಸೇರಿಸಿ ಚೆನ್ನಾಗಿ ಕಲಸಿ. ನಂತರ ನೆನೆಸಿಟ್ಟ ಅಕ್ಕಿಯ ನೀರನ್ನು ಸೋಸಿ ಅಕ್ಕಿಯನ್ನು ಸೇರಿಸಿ. 2 ನಿಮಿಷ ಚೆನ್ನಾಗಿ ಬೆರೆಸಿ. ನಂತರ ನೀರು ಸೇರಿಸಿ. ಲಿಂಬೆರಸ ಹಿಂಡಿ. ಕುಕ್ಕರ್ ಮುಚ್ಚಿ ಎರಡು ವಿಸಲ್ ಬರುವವರೆಗೆ ಬೇಯಿಸಿ. ನಂತರ ಅದಕ್ಕೆ ಚಿಕ್ಕದಾಗಿ ಕತ್ತರಿಸಿದ ಕೊತ್ತಂಬರಿಸೊಪ್ಪು ಉದುರಿಸಿದರೆ, ರುಚಿಯಾದ ಬದನೆ ಪಲಾವ್ ಸವಿಯಲು ಸಿದ್ಧ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1412207789418614785?s=19
https://twitter.com/SaakshaTv/status/1412265654309343232?s=19
https://twitter.com/SaakshaTv/status/1412239567340584961?s=19
https://twitter.com/SaakshaTv/status/1411846038210678785?s=19
#Saakshatv #cookingrecipe #brinjalpulav








