ಕಾಲಿಫ್ಲವರ್ ಪಕೋಡ
ಬೇಕಾಗುವ ಸಾಮಗ್ರಿಗಳು
ಕಾಲಿಫ್ಲವರ್ – 1
ಮೈದಾ ಹಿಟ್ಟು – 1 ಕಪ್
ಈರುಳ್ಳಿ – 1
ಬೆಳ್ಳುಳ್ಳಿ ಶುಂಠಿ ಪೇಸ್ಟ್ – 1 ಚಮಚ
ಮೆಣಸಿನ ಪುಡಿ – 2 ಚಮಚ
ಅರಿಶಿನ – ಚಿಟಿಕೆಯಷ್ಟು
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
ಮೊದಲಿಗೆ ಕಾಲಿಫ್ಲವರ್ ಅನ್ನು ಉಪ್ಪು ಸೇರಿಸಿದ ನೀರಿನಲ್ಲಿ ಚೆನ್ನಾಗಿ ತೊಳೆದು, ಚಿಕ್ಕ ಚಿಕ್ಕದಾಗಿ ಕತ್ತರಿಸಿ ಇಡಿ.
ನಂತರ ಒಂದು ಪಾತ್ರೆಯಲ್ಲಿ ಮೈದಾ ಹಿಟ್ಟು, ತುರಿದ ಈರುಳ್ಳಿ, ಬೆಳ್ಳುಳ್ಳಿ ಶುಂಠಿ ಪೇಸ್ಟ್, ಮೆಣಸಿನ ಪುಡಿ, ಅರಿಶಿನ, ಉಪ್ಪು, ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ಕಲಸಿ.
ಬಾಣಲೆಯಲ್ಲಿ ಎಣ್ಣೆಯನ್ನು ಬಿಸಿ ಮಾಡಿ. ಕಲಸಿದ ಹಿಟ್ಟಿಗೆ ಕಾಲಿಫ್ಲವರ್ ತುಂಡುಗಳನ್ನು ಅದ್ದಿ ಬಿಸಿ ಎಣ್ಣೆಯಲ್ಲಿ ಬಿಡಿ. ಹೊಂಬಣ್ಣಕ್ಕೆ ತಿರುಗುವವರೆಗೆ ಎರಡೂ ಬದಿಯನ್ನು ಹುರಿದು ತೆಗೆಯಿರಿ. ಈಗ ರುಚಿಯಾದ ಕಾಲಿಫ್ಲವರ್ ಪಕೋಡ ಸವಿಯಲು ಸಿದ್ಧವಾಗಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1411482902072811521?s=19
https://twitter.com/SaakshaTv/status/1411178071529594883?s=19
https://twitter.com/SaakshaTv/status/1411151424373805056?s=19
https://twitter.com/SaakshaTv/status/1411540520388661260?s=19
https://twitter.com/SaakshaTv/status/1411513772892622849?s=19
#Saakshatv #cookingrecipe #cauliflowerpakoda








