ಹಾಗಲಕಾಯಿ ಚಿಪ್ಸ್
ಬೇಕಾಗುವ ಸಾಮಗ್ರಿಗಳು
ಹಾಗಲಕಾಯಿ – 2
ಕಾರ್ನ್ ಫ್ಲೋರ್ – 1 ಚಮಚ
ಅಕ್ಕಿಹಿಟ್ಟು – 1 ಚಮಚ
ಕಡಲೆ ಹಿಟ್ಟು – 1 ಚಮಚ
ಕೆಂಪು ಮೆಣಸಿನ ಪುಡಿ – 1 ಚಮಚ
ಅರಿಶಿನ – ಚಿಟಕಿಯಷ್ಟು
ಧನಿಯ ಪುಡಿ – 1/2 ಚಮಚ
ಜೀರಿಗೆ ಪುಡಿ – 1/2 ಚಮಚ
ಗರಂಮಸಾಲೆ ಪುಡಿ 1/4 ಚಮಚ
ಉಪ್ಪು
ಹುರಿಯಲು ಎಣ್ಣೆ

ಮಾಡುವ ವಿಧಾನ
ಮೊದಲಿಗೆ ಹಾಗಲಕಾಯಿಯನ್ನು ವೃತ್ತಾಕಾರವಾಗಿ ತೆಳುವಾಗಿ ಕತ್ತರಿಸಿ. ನಂತರ ಇದಕ್ಕೆ ಉಪ್ಪು ಮತ್ತು ಅರಿಶಿನ ಹುಡಿಯನ್ನು ಚೆನ್ನಾಗಿ ಮಿಶ್ರ ಮಾಡಿ, 15 ನಿಮಿಷಗಳ ಕಾಲ ಹಾಗೆಯೇ ಬಿಡಿ. ನಂತರ ಅವುಗಳನ್ನು ಸ್ವಲ್ಪ ಹಿಂಡಿ ಕಹಿಯನ್ನು ತೆಗೆಯಿರಿ.
ಒಂದು ಅಗಲವಾದ ಬೌಲ್ ನಲ್ಲಿ ಕಾರ್ನ್ ಫ್ಲೋರ್, ಅಕ್ಕಿಹಿಟ್ಟು, ಕಡಲೆ ಹಿಟ್ಟು, ಕೆಂಪು ಮೆಣಸಿನ ಪುಡಿ, ಅರಿಶಿನ, ಧನಿಯಾ ಪುಡಿ, ಜೀರಿಗೆ ಪುಡಿ, ಗರಂ ಮಸಾಲ ಪುಡಿ ಉಪ್ಪನ್ನು ಒಟ್ಟಿಗೆ ಸೇರಿಸಿ ಚೆನ್ನಾಗಿ ಕಲಸಿ. ನಂತರ ಹಾಗಲಕಾಯಿ ಚೂರುಗಳನ್ನು ಸೇರಿಸಿ ಮಿಶ್ರ ಮಾಡಿ.
ನಂತರ ಒಂದು ಬಾಣಲೆಯಲ್ಲಿ ಎಣ್ಣೆ ಬಿಸಿ ಮಾಡಿ. ಬಳಿಕ ಹಾಗಲಕಾಯಿ ಚೂರುಗಳನ್ನು ಹಾಕಿ ಚೆನ್ನಾಗಿ ಹುರಿಯಿರಿ. ಈಗ ರುಚಿಯಾದ ಕುರು ಕುರು ಹಾಗಲಕಾಯಿ ಚಿಪ್ಸ್ ರೆಡಿಯಾಗಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ರಕ್ತ ಹೆಪ್ಪುಗಟ್ಟುವಿಕೆ/ ಥ್ರಂಬೋಸಿಸ್ ಎಂದರೇನು? ಕೋವಿಡ್ ರೋಗಿಗಳಿಗೆ ಇದು ಹೇಗೆ ಅಪಾಯಕಾರಿ?#Saakshatvhealthtips #bloodclotting #thrombosis https://t.co/lGBBNqECko
— Saaksha TV (@SaakshaTv) June 21, 2021
ಮಾವಿನ ಎಲೆಗಳ ಸೇವನೆಯಿಂದ ಸಿಗುವ ಆರೋಗ್ಯ ಪ್ರಯೋಜನಗಳು#Saakshatv #healthtipsbenefits #mangoleaves https://t.co/aDEOrNCvat
— Saaksha TV (@SaakshaTv) June 22, 2021
ಕುಂಬಳಕಾಯಿ ಸಿಪ್ಪೆಯ ಚಟ್ನಿ#Saakshatv #cookingrecipe #chutney https://t.co/WNYoO3giym
— Saaksha TV (@SaakshaTv) June 21, 2021
ಲಸಿಕೆ ಪಡೆಯುವ ಮೊದಲು/ನಂತರ ಗಮನದಲ್ಲಿರಿಸಿಕೊಳ್ಳಬೇಕಾದ ವಿಷಯಗಳು#vaccinated https://t.co/cexv6VVMQa
— Saaksha TV (@SaakshaTv) June 22, 2021
#Saakshatv #cookingrecipe #hagalkayichips








