ಮಸಾಲಾ ರೈಸ್ ಬಾತ್
ಬೇಕಾಗುವ ಸಾಮಗ್ರಿಗಳು
ಅನ್ನ – 3 ಕಪ್
ಗಿಂಜರ್-ಗಾರ್ಲಿಕ್ ಪೇಸ್ಟ್ – 2 ಚಮಚ
ಚಿಲ್ಲಿ ಪೇಸ್ಟ್ – 1 ಚಮಚ
ತೆಂಗಿನಕಾಯಿ ಹಾಲು – 1/2 ಕಪ್
ಬೀನ್ಸ್ – 10
ಬಟಾಣಿ – 1/4 ಕಪ್
ಕಾರ್ನ್ 1/4 ಕಪ್
ಆಲೂಗಡ್ಡೆ – 1
ಎಣ್ಣೆ – 2 ಚಮಚ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
ಮೊದಲಿಗೆ ಬೀನ್ಸ್, ಆಲೂಗಡ್ಡೆಗಳನ್ನು ಚಿಕ್ಕದಾಗಿ ಕತ್ತರಿಸಿ ಬೇಯಿಸಿಕೊಳ್ಳಿ. ನಂತರ ಬಟಾಣಿ, ಕಾರ್ನ್ ಗಳನ್ನು ಬೇಯಿಸಿ ಇಟ್ಟುಕೊಳ್ಳಿ. ನಂತರ ಪ್ಯಾನ್ ಗೆ ಎಣ್ಣೆ ಹಾಕಿ ಬಿಸಿ ಮಾಡಿ. ನಂತರ ಗಿಂಜರ್-ಗಾರ್ಲಿಕ್ ಪೇಸ್ಟ್, ಚಿಲ್ಲಿ ಪೇಸ್ಟ್ ಸೇರಿಸಿ ಚೆನ್ನಾಗಿ ಬೆರೆಸಿ. 3 ನಿಮಿಷಗಳ ಕಾಲ ಕೈಯಾಡಿಸಿ. ನಂತರ ಇದಕ್ಕೆ ತೆಂಗಿನಕಾಯಿ ಹಾಲು, ಬಟಾಣಿ, ಕಾರ್ನ್, ಬೀನ್ಸ್, ಆಲೂಗಡ್ಡೆ, ಉಪ್ಪು ಸೇರಿಸಿ. ಚೆನ್ನಾಗಿ ಕುದಿಯಲು ಪ್ರಾರಂಭವಾದಾಗ ಅದಕ್ಕೆ ಬೇಯಿಸಿಟ್ಟುಕೊಂಡ ಅನ್ನವನ್ನು ಮಿಶ್ರ ಮಾಡಿ. 10 ನಿಮಿಷ
ಆವಿಯಲ್ಲಿ ಬೇಯಲು ಬಿಡಿ. ಈಗ ರುಚಿಕರವಾದ ಮಸಾಲಾ ರೈಸ್ ಬಾತ್ ಸವಿಯಲು ಸಿದ್ಧವಾಗಿದೆ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1435059828385329152?s=19
https://twitter.com/SaakshaTv/status/1435077440762617856?s=19
https://twitter.com/SaakshaTv/status/1434698425405165570?s=19
https://twitter.com/SaakshaTv/status/1434675886213586945?s=19
#Saakshatv #cookingrecipe #masala #ricebath








