ಮಂಗಳೂರು ಪತ್ರೋಡೆ
ಬೇಕಾಗುವ ಪದಾರ್ಥಗಳು
12-16 ಕೆಸುವಿನ ಎಲೆ
1 ಕಪ್ ಬೆಳ್ತಿಗೆ ಅಕ್ಕಿ
2 ಟೀಸ್ಪೂನ್ ಉದ್ದಿನ ಬೇಳೆ
2 ಟೀಸ್ಪೂನ್ ಕಡ್ಲೆಬೇಳೆ
3/4 ಕಪ್ ತೆಂಗಿನಕಾಯಿ ತುರಿ
1 ಟೀಸ್ಪೂನ್ ಜೀರಿಗೆ
1 ಟೀಸ್ಪೂನ್ ಕೊತ್ತಂಬರಿ ಬೀಜ
2-3 ಮೆಂತೆ ಕಾಳು
2 ಟೀಸ್ಪೂನ್ ಅರಿಶಿನ ಪುಡಿ
1-2 ಟೀಸ್ಪೂನ್ ಬೆಲ್ಲದ ಹುಡಿ
3-4 ಒಣ ಕೆಂಪು ಮೆಣಸು
3 ಟೀಸ್ಪೂನ್ ಹುಣಸೆಹಣ್ಣಿನ ರಸ
ರುಚಿಗೆ ತಕ್ಕಷ್ಟು ಉಪ್ಪು
ಅಗತ್ಯವಿರುವಷ್ಟು ಎಣ್ಣೆ
1 ಚಮಚ ಎಳ್ಳು
1 ಚಮಚ ಸಾಸಿವೆ
4- 5 ಕರಿಬೇವಿನ ಎಲೆ

ಮಾಡುವ ವಿಧಾನ:
3-4 ಗಂಟೆಗಳ ಕಾಲ ಅಕ್ಕಿ ಮತ್ತು ಬೇಳೆಗಳನ್ನು ನೀರಿನಲ್ಲಿ ತೊಳೆದು ನೆನೆಸಿಡಿ. ಕೆಸುವಿನ ಎಲೆಗಳನ್ನು ಚೆನ್ನಾಗಿ ಸ್ವಚ್ಛಗೊಳಿಸಿ ಒರೆಸಿ. ಚಾಕುವಿನಿಂದ, ಕಾಂಡ ಮತ್ತು ಎಲೆಗಳ ಗೆರೆಗಳನ್ನು ತೆಗೆದುಹಾಕಿ. ಈಗ ತೆಂಗಿನಕಾಯಿ ತುರಿ, ಕೊತ್ತಂಬರಿ , ಮೆಂತೆ, ಜೀರಿಗೆ, ಅರಿಶಿನ ಪುಡಿ ಮತ್ತು ಬೆಲ್ಲ ಪುಡಿಯನ್ನು ರುಬ್ಬಿ. ನಂತರ ಒಣ ಕೆಂಪು ಮೆಣಸಿನಕಾಯಿ ಅಕ್ಕಿ, ಬೇಳೆ, ಹುಣಸೆ ರಸ ಮತ್ತು ಉಪ್ಪು ಸೇರಿಸಿ. ಅಗತ್ಯವಿರುವಷ್ಟು ನೀರು ಸೇರಿಸಿ ರುಬ್ಬಿಕೊಳ್ಳಿ. ಇದನ್ನು ದಪ್ಪ ಹಿಟ್ಟಿನ ಹದಕ್ಕೆ ರುಬ್ಬಿ. ರುಬ್ಬುವಾಗ ಹೆಚ್ಚು ನೀರು ಸೇರಿಸಬೇಡಿ.
ಈಗ ಅತಿದೊಡ್ಡ ಕೆಸು ಎಲೆಯನ್ನು ತಲೆಕೆಳಗಾಗಿ ಅಥವಾ ಉಲ್ಟಾ ಇರಿಸಿಕೊಳ್ಳಿ ಮತ್ತು ಎಲೆಯ ಮೇಲೆ ತೆಳುವಾಗಿ ರುಬ್ಬಿ ಇಟ್ಟುಕೊಂಡ ಮಸಾಲೆಯನ್ನು ಹಚ್ಚಿ. ಈಗ ಅದರ ಮೇಲೆ ಮತ್ತೊಂದು ಸ್ವಲ್ಪ ಸಣ್ಣ ಎಲೆಯನ್ನು ಉಲ್ಟಾ ಇರಿಸಿ. ಮತ್ತೆ ಅದರ ಮೇಲೆ ಮಸಾಲೆಯನ್ನು ಹಚ್ಚಿ. 3-4 ಎಲೆಗಳನ್ನು ಇದೇ ರೀತಿಯಲ್ಲಿ ಒಂದರ ಮೇಲೆ ಒಂದು ಇಟ್ಟು ಹಿಟ್ಟನ್ನು ಹಚ್ಚಿ . ಎಲೆಯ ಬದಿಗಳನ್ನು ಮಧ್ಯಕ್ಕೆ ಮಡಚಿ. ನಂತರ ಎಲೆಗಳನ್ನು ರೋಲ್ ಮಾಡಿ. ಇದನ್ನು ಹಬೆಯಲ್ಲಿ 20-30 ನಿಮಿಷ ಬೇಯಿಸಿ. ಬೆಂದ ಮೇಲೆ ತಣ್ಣಗಾದ ಬಳಿಕ ಪತ್ರೋಡೆ ಅನ್ನು ಸಮವಾಗಿ ತುಂಡು ಮಾಡಿ. ನಂತರ ಅವುಗಳನ್ನು ಎಣ್ಣೆ ಹಾಕಿ ತವಾದಲ್ಲಿ ಗೋಲ್ಡನ್ ಬ್ರೌನ್ ಆಗುವವರೆಗೆ ಫ್ರೈ ಮಾಡಿ. ಸಾಸಿವೆ, ಎಳ್ಳು ಮತ್ತು ಕರಿಬೇವಿನ ಸೊಪ್ಪು ಸೇರಿಸಿ ಒಗ್ಗರಣೆ ಕೊಡಿ. ಒಗ್ಗರಣೆ ಕೊಡುವ ಮೊದಲು ಸ್ವಲ್ಪ ತುರಿದ ತೆಂಗಿನಕಾಯಿ ಸೇರಿಸಿ.
ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1396682516203986946?s=19
ಡೆಂಗ್ಯೂನಿಂದ ತ್ವರಿತ ಚೇತರಿಕೆ ಹೊಂದಲು ಈ ಆಹಾರ ಕ್ರಮಗಳನ್ನು ಅನುಸರಿಸಿ#dengue #Saakshatv #healthtips https://t.co/RPRcSeyMv0
— Saaksha TV (@SaakshaTv) May 24, 2021
https://twitter.com/SaakshaTv/status/1396292937349275654?s=19
https://twitter.com/SaakshaTv/status/1396262703220543496?s=19
#Saakshatv #cookingrecipe #pathrode








