ಪುದೀನಾ ರೊಟ್ಟಿ
ಬೇಕಾಗುವ ಪದಾರ್ಥಗಳು
ಅಕ್ಕಿ ಹಿಟ್ಟು–3/4 ಕಪ್,
ಎಣ್ಣೆ –3 ಚಮಚ,
ರುಚಿಗೆ ತಕ್ಕಷ್ಟು ಉಪ್ಪು,
ಕತ್ತರಿಸಿದ ಪುದೀನಾ – 1ಕಪ್
ಹಸಿ ಮೆಣಸಿನಕಾಯಿ – 5-8
ತೆಂಗಿನಕಾಯಿ ತುರಿ – 1/2 ಕಪ್
ಹುರಿಗಡಲೆ–2 ಚಮಚ (ಬೇಕಿದ್ದರೆ)
ಈರುಳ್ಳಿ – 1/2

ತಯಾರಿಸುವ ವಿಧಾನ
ಮೊದಲಿಗೆ ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ಹಸಿ ಮೆಣಸಿನಕಾಯಿ, ಪುದೀನಾ, ಉಪ್ಪು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ.
ನಂತರ ಇದನ್ನು ಪಾತ್ರೆಗೆ ವರ್ಗಾಯಿಸಿ. ರುಬ್ಬಿದ ಮಿಶ್ರಣಕ್ಕೆ ಎಣ್ಣೆ, ಸಣ್ಣಗೆ ಹೆಚ್ಚಿದ ಈರುಳ್ಳಿ, ಅಗತ್ಯವಿರುವಷ್ಟು ನೀರು ಸೇರಿಸಿ ಚೆನ್ನಾಗಿ ಕಲಸಿ. ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ಹತ್ತು ನಿಮಿಷಗಳ ಕಾಲ ಹಾಗೆ ಬಿಡಿ. ಹುರಿಗಡಲೆ ಸೇರಿಸಿ ಮತ್ತೊಮ್ಮೆ ಚೆನ್ನಾಗಿ ಬೆರೆಸಿ.
ತವೆಗೆ ಎಣ್ಣೆ ಸವರಿ ಬಿಸಿ ಮಾಡಿ. ತೆಳುವಾಗಿ ರೊಟ್ಟಿ ತಟ್ಟಿ ಎರಡು ಬದಿಯೂ ಹೊಂಬಣ್ಣಕ್ಕೆ ತಿರುಗುವವರೆಗೆ ಕಾಯಿಸಿ ತೆಗೆಯಿರಿ. ರುಚಿಯಾದ ಆರೋಗ್ಯಕರ ಪುದೀನಾ ರೊಟ್ಟಿಯನ್ನು ಬಿಸಿ ಬಿಸಿಯಾಗಿ ಬೆಣ್ಣೆ ಜೊತೆ ಸವಿಯಿರಿ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1411875662923800576?s=19
https://twitter.com/SaakshaTv/status/1411902767283806210?s=19
https://twitter.com/SaakshaTv/status/1411513772892622849?s=19
https://twitter.com/SaakshaTv/status/1411540520388661260?s=19
https://twitter.com/SaakshaTv/status/1411482902072811521?s=19
#Saakshatv #cookingrecipe #pudinarotti








