ತರಕಾರಿ ಅಕ್ಕಿ ಮಸಾಲೆ ರೊಟ್ಟಿ
ಬೇಕಾಗುವ ಸಾಮಾಗ್ರಿಗಳು
ಅಕ್ಕಿ ಹಿಟ್ಟು – 2 ಕಪ್
ಸಣ್ಣಗೆ ಹೆಚ್ಚಿದ ಈರುಳ್ಳಿ – 1
ತುರಿದ/ಸಣ್ಣಗೆ ಕತ್ತರಿಸಿದ ತರಕಾರಿಗಳು (ಕ್ಯಾರೆಟ್, ಅಲೂಗಡ್ಡೆ , ಸೌತೆಕಾಯಿ, ಬೀನ್ಸ್) – 1 ಕಪ್
ಚಿಕ್ಕದಾಗಿ ಕತ್ತರಿಸಿದ ಹಸಿಮೆಣಸಿನಕಾಯಿ – 2
ಶುಂಠಿ ಪೇಸ್ಟ್ – 1 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಕೊತ್ತಂಬರಿ ಸೊಪ್ಪು – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಸಬ್ಸಸಿಗೆ ಸೊಪ್ಪು – 2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಮೆಂತ್ಯ ಸೊಪ್ಪು – 2 ಟೀಸ್ಪೂನ್
ಜೀರಿಗೆ – 1 ಚಮಚ
ಕಿಚನ್ ಕಿಂಗ್ ಪೌಡರ್ – 1/2 ಚಮಚ
ರುಚಿಗೆ ತಕ್ಕಷ್ಟು ಉಪ್ಪು

ಮಾಡುವ ವಿಧಾನ
ಮೊದಲಿಗೆ ಅಗಲವಾದ ಪಾತ್ರೆಯಲ್ಲಿ ಅಕ್ಕಿ ಹಿಟ್ಟು, ಈರುಳ್ಳಿ, ತರಕಾರಿಗಳು, ಹಸಿಮೆಣಸಿನಕಾಯಿ, ಶುಂಠಿ ಪೇಸ್ಟ್, ಕೊತ್ತಂಬರಿ ಸೊಪ್ಪು, ಸಬ್ಸಸಿಗೆ ಸೊಪ್ಪು , ಮೆಂತ್ಯ ಸೊಪ್ಪು, ಜೀರಿಗೆ, ಕಿಚನ್ ಕಿಂಗ್ ಪೌಡರ್, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಬೆರೆಸಿ.
ನಂತರ ಈ ಮಿಶ್ರಣಕ್ಕೆ ಉಗುರು ಬೆಚ್ಚಗಿನ ನೀರನ್ನು ಸ್ವಲ್ಪ ಸ್ವಲ್ಪವೇ ಸೇರಿಸಿ, ರೊಟ್ಟಿ ಹಿಟ್ಟಿನ ಹದಕ್ಕೆ ಕಲಸಿ. ನಂತರ 15 ನಿಮಿಷ ಹಾಗೆಯೇ ಬಿಡಿ.
ಬಳಿಕ ತವಾ ವನ್ನು ಬಿಸಿ ಮಾಡಿ. ತೆಳುವಾಗಿ ರೊಟ್ಟಿ ತಟ್ಟಿ, ಎರಡೂ ಬದಿಗಳನ್ನು ಹೊಂಬಣ್ಣಕ್ಕೆ ಬರುವವರೆಗೆ ಕಾಯಿಸಿ ತೆಗೆಯಿರಿ. ರುಚಿಯಾದ ತರಕಾರಿ ಅಕ್ಕಿ ಮಸಾಲೆ ರೊಟ್ಟಿ ಸವಿಯಲು ಸಿದ್ಧ.

ಎಚ್ಚರಿಕೆ – ದೇಶಾದ್ಯಂತ ಕೊರೋನಾ ಸೋಂಕು ತೀವ್ರಗತಿಯಲ್ಲಿ ಹರಡುತ್ತಿದೆ. ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ… ನಮ್ಮ ಮತ್ತು ನಮ್ಮ ಕುಟುಂಬದ ಆರೋಗ್ಯ ನಮ್ಮ ಕೈಯಲ್ಲಿದೆ. ಇದು ಸಾಕ್ಷಾಟಿವಿ ಕಳಕಳಿ
https://twitter.com/SaakshaTv/status/1389045144041803777?s=19
https://twitter.com/SaakshaTv/status/1389015025822617605?s=19
https://twitter.com/SaakshaTv/status/1388707394201563137?s=19
https://twitter.com/SaakshaTv/status/1388670129123340289?s=19
ಅನ್ನ ಉಳಿದಿದ್ದರೆ ತಯಾರಿಸಿ ರುಚಿಯಾದ ಕಟ್ಲೆಟ್#Saakshatv #cookingrecipe #riceCutlets https://t.co/5oTDHQJewj
— Saaksha TV (@SaakshaTv) April 30, 2021
#Saakshatv #cookingrecipe #masalaakkirotti








