ಸಬ್ಬಕ್ಕಿ ಖೀರ್
ಬೇಕಾಗುವ ಸಾಮಗ್ರಿಗಳು
ಸಬ್ಬಕ್ಕಿ – 1 ಕಪ್
ಹಾಲು – 1 ಲೀಟರ್
ಸಕ್ಕರೆ – 1 ಕಪ್
ಒಣದ್ರಾಕ್ಷಿ, ಗೋಡಂಬಿ – ಸ್ವಲ್ಪ
ನೀರು – 1ಕಪ್
ಮಾಡುವ ವಿಧಾನ :

ಸಬ್ಬಕ್ಕಿಯನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ಮರುದಿನ ಬೆಳಿಗ್ಗೆ ನೀರನ್ನು ಸೋಸಿ ತೆಗೆಯಿರಿ. ಸಬ್ಬಕ್ಕಿಯನ್ನು ಒಂದು ಬೌಲ್ ಗೆ ಹಾಕಿ ಹಾಲನ್ನು ಸೇರಿಸಿ. ನಂತರ ಇದನ್ನು ಒಂದು ದಪ್ಪ ತಳದ ಪಾತ್ರೆಯಲ್ಲಿ ಹಾಕಿ, ಸುಮಾರು 20 ನಿಮಿಷ ಕಾಲ ಸಣ್ಣ ಉರಿಯಲ್ಲಿ ಕುದಿಸಿ.
ನಂತರ ಒಂದು ಬೌಲ್ ಗೆ ಸಕ್ಕರೆ ಮತ್ತು ನೀರನ್ನು ಸೇರಿಸಿ ಚೆನ್ನಾಗಿ ಬೆರೆಸಿ. ಸಕ್ಕರೆ ನೀರಿನಲ್ಲಿ ಚೆನ್ನಾಗಿ ಕರಗಿದ ನಂತರ ಕುದಿಯುತ್ತಿರುವ ಹಾಲಿನ ಮಿಶ್ರಣಕ್ಕೆ ಈ ಸಕ್ಕರೆ ನೀರನ್ನು ಬೆರೆಸಿ. ಈ ಮಿಶ್ರಣ ಖೀರ್ ಪ್ರಮಾಣಕ್ಕೆ ಗಟ್ಟಿಯಾಗುವವರೆಗೆ ಕುದಿಸಿ.
ನಂತರ ಇದಕ್ಕೆ ತುಪ್ಪದಲ್ಲಿ ಹುರಿದ ದ್ರಾಕ್ಷಿ ಮತ್ತು ಗೋಡಂಬಿಯನ್ನು ಸೇರಿಸಿ ರುಚಿಯಾದ ಸಬ್ಬಕ್ಕಿ ಖೀರ್ ಸವಿಯಿರಿ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಬೆಲ್ಲ ಆರೋಗ್ಯಕ್ಕೆ ಮಾತ್ರವಲ್ಲ ಸೌಂದರ್ಯ ಹೆಚ್ಚಿಸಲು ಕೂಡ ನೆರವಾಗುತ್ತದೆ#Saakshatvhealthtips #jaggery https://t.co/KWb9ef1GlV
— Saaksha TV (@SaakshaTv) August 23, 2021
ಆಧಾರ್ ಕಾರ್ಡ್ ಗೆ ಸಂಬಂಧಿಸಿದ ಪ್ರಮುಖ ಮಾಹಿತಿಗಳು#Aadhaar https://t.co/m23TgCoFeu
— Saaksha TV (@SaakshaTv) August 26, 2021
ಸೌತೆಕಾಯಿ ನೀರನ್ನು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು https://t.co/u16DtMlwW7
— Saaksha TV (@SaakshaTv) August 25, 2021
ಕುಟುಂಬ ಪಿಂಚಣಿಯ ಮಿತಿ ತಿಂಗಳಿಗೆ ರೂ 45,000 ದಿಂದ ರೂ1.25 ಲಕ್ಷಕ್ಕೆ ಏರಿಕೆ#familypension https://t.co/723113WFH1
— Saaksha TV (@SaakshaTv) August 22, 2021
#Saakshatv #cooking #sabbakki #kheer







