ಬೆಂಡೆಕಾಯಿ ಬಜ್ಜಿ
ಬೇಕಾಗುವ ಸಾಮಗ್ರಿಗಳು
ಬೆಂಡೆಕಾಯಿ – 1/4 ಕೆಜಿ
ಕಡಲೆ ಹಿಟ್ಟು – 1 ಕಪ್
ಸಣ್ಣ ರವೆ – 2 ಚಮಚ
ಕೆಂಪು ಮೆಣಸಿನ ಪುಡಿ – 1/2ಚಮಚ
ಚಾಟ್ ಮಸಾಲಾ – ಚಿಟಿಕೆಯಷ್ಟು
ಓಂಕಾಳು – ಚಿಟಿಕೆಯಷ್ಟು
ಅಡುಗೆ ಸೋಡಾ – ಚಿಟಿಕೆಯಷ್ಟು
ರುಚಿಗೆ ತಕ್ಕಷ್ಟು ಉಪ್ಪು
ಅಗತ್ಯವಿರುವಷ್ಟು ನೀರು

ಮಾಡುವ ವಿಧಾನ
ಬೆಂಡೆಕಾಯಿಗಳನ್ನು ಚೆನ್ನಾಗಿ ತೊಳೆದು ಸ್ವಚ್ಛವಾದ ಒಣ ಬಟ್ಟೆಯಿಂದ ಒರೆಸಿಕೊಳ್ಳಿ. ನಂತರ ಬೆಂಡೆಕಾಯಿಗಳನ್ನು ಅರ್ಧಕ್ಕೆ ಕತ್ತರಿಸಿ ನಡುವೆ ಸೀಳಿ.
ಒಂದು ಪಾತ್ರೆಯಲ್ಲಿ ಕಡಲೆ ಹಿಟ್ಟು, ಸಣ್ಣ ರವೆ, ಕೆಂಪು ಮೆಣಸಿನ ಪುಡಿ, ಚಾಟ್ ಮಸಾಲಾ, ಓಂಕಾಳು, ಅಡುಗೆ ಸೋಡಾ, ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ಮಿಶ್ರ ಮಾಡಿ. ನಂತರ ಬಜ್ಜಿಯ ಹಿಟ್ಟಿನ ಹದಕ್ಕೆ ಅಗತ್ಯವಿರುವಷ್ಟು ನೀರು ಸೇರಿಸಿ.
ಈಗ ಬಾಣಲೆಯಲ್ಲಿ ಎಣ್ಣೆಯನ್ನು ಕಾಯಿಸಿ, ನಂತರ ಕತ್ತರಿಸಿದ ಬೆಂಡೆಕಾಯಿಗಳನ್ನು ಒಂದೊಂದಾಗಿ ಹಿಟ್ಟಲ್ಲಿ ಅದ್ದಿ ಕಾಯ್ದ ಎಣ್ಣೆಯಲ್ಲಿ ಕರಿದು ತೆಗೆಯಿರಿ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಕೊತ್ತಂಬರಿ ನೀರು ತಯಾರಿಸುವ ವಿಧಾನ ಮತ್ತು ಅದನ್ನು ಖಾಲಿ ಹೊಟ್ಟೆಯಲ್ಲಿ ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/wozXjpmFzy
— Saaksha TV (@SaakshaTv) August 9, 2021
ಮೊಬೈಲ್ ಹಾಳಾದರೆ/ಕಳೆದು ಹೋದರೆ ಅದರಲ್ಲಿನ ಸಂಪರ್ಕ ಸಂಖ್ಯೆಯನ್ನು ಮರಳಿ ಪಡೆಯುವುದು ಹೇಗೆ? https://t.co/80Ul0v1tRk
— Saaksha TV (@SaakshaTv) August 7, 2021
ದಾಲ್ಚಿನ್ನಿ ಮತ್ತು ಅರಿಶಿನ ಹಾಲನ್ನು ಕುಡಿಯುವುದರ ಆರೋಗ್ಯ ಪ್ರಯೋಜನಗಳು https://t.co/dp3E2S9IL9
— Saaksha TV (@SaakshaTv) August 10, 2021
ಗೋಧಿ ಬಾದಾಮಿ ಲಡ್ಡು https://t.co/kcZD19cuPg
— Saaksha TV (@SaakshaTv) August 9, 2021
#Saakshatvcooking #bendekayibajji








