ತುಪ್ಪ ದೋಸೆ ಮತ್ತು ಆಲೂ ಸಾಗು
ದೋಸೆ ಹಿಟ್ಟಿಗೆ ಬೇಕಾಗುವ ಸಾಮಗ್ರಿಗಳು
ದೋಸೆ ಅಕ್ಕಿ – 3/4 ಕಪ್
ಇಡ್ಲಿ ಅಕ್ಕಿ – 1 1/4 ಕಪ್
ಮೆಂತ್ಯ ಬೀಜಗಳು – 1/4 ಕಪ್
ಉದ್ದಿನಬೇಳೆ – 1/4 ಕಪ್
ಮಂಡಕ್ಕಿ – 3/4 ಕಪ್
ರುಚಿಗೆ ತಕ್ಕಷ್ಟು ಉಪ್ಪು
ಆಲೂ ಸಾಗಿಗೆ ಬೇಕಾಗುವ ಸಾಮಗ್ರಿಗಳು
ಆಲೂಗಡ್ಡೆ – 2
ಎಣ್ಣೆ – 2 ಚಮಚ
ಸಾಸಿವೆ – 1/2 ಚಮಚ
ಹಸಿಮೆಣಸಿನಕಾಯಿ ಪೇಸ್ಟ್ – 1 ಚಮಚ
ಇಂಗು – ಚಿಟಿಕೆಯಷ್ಟು
ಅರಿಶಿನ ಪುಡಿ – ಚಿಟಿಕೆಯಷ್ಟು
ರುಚಿಗೆ ತಕ್ಕಷ್ಟು ಉಪ್ಪು
ಈರುಳ್ಳಿ – 1
ಹುರಿದ ಬೇಳೆ ಪುಡಿ – ಸ್ವಲ್ಪ

ಮಾಡುವ ವಿಧಾನ
ದೋಸೆ ಅಕ್ಕಿ, ಇಡ್ಲಿ ಅಕ್ಕಿ, ಮೆಂತ್ಯ ಬೀಜಗಳು, ಉದ್ದಿನಬೇಳೆ, ಮಂಡಕ್ಕಿ ಒಟ್ಟಿಗೆ 3-4 ಗಂಟೆ ನೆನೆ ಹಾಕಿ. ನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ ನಯವಾಗಿ ರುಬ್ಬಿ. ರಾತ್ರಿಯಿಡೀ ಹುದುಗಲು ಬಿಡಿ.
ಆಲೂ ಸಾಗು ಮಾಡುವ ವಿಧಾನ
ಮೊದಲಿಗೆ ಕಡಾಯಿಯಲ್ಲಿ ಎಣ್ಣೆ ಬಿಸಿ ಮಾಡಿ. ನಂತರ ಸಾಸಿವೆ ಬೀಜಗಳನ್ನು ಸೇರಿಸಿ. ಅದು ಸಿಡಿದ ಬಳಿಕ ಹಸಿಮೆಣಸಿನಕಾಯಿ ಪೇಸ್ಟ್, ಇಂಗು, ಅರಿಶಿನ ಪುಡಿ ಸೇರಿಸಿ. ನಂತರ ಕತ್ತರಿಸಿದ ಈರುಳ್ಳಿ ಸೇರಿಸಿ ಮೃದುವಾಗುವವರೆಗೆ ಹುರಿಯಿರಿ ಮತ್ತು ಬೇಯಿಸಿದ ಆಲೂ ಸೇರಿಸಿ. ಅಗತ್ಯವಿರುವಷ್ಟು ನೀರನ್ನು ಸೇರಿಸಿ, ಹುರಿದ ಬೇಳೆ ಪುಡಿಯನ್ನು ಬೆರೆಸಿ, ಉಪ್ಪು ಸೇರಿಸಿ ಚೆನ್ನಾಗಿ ಕುದಿಸಿ. ಎಷ್ಟು ದಪ್ಪ ಬೇಕು ಅಷ್ಟಕ್ಕೆ ಸರಿಹೊಂದಿಸಿ.
ಈಗ ದೋಸೆ ಕಾವಲಿಗೆ ಎಣ್ಣೆಯನ್ನು ಸವರಿ ದೋಸೆಗಳನ್ನು ಮಾಡಿ. ಒಂದರ ಮೇಲೆ ಒಂದನ್ನು ಇರಿಸಿ ಆಲೂ ಸಾಗು ಸೇರಿಸಿ. ಅದರ ಮೇಲೆ ಚಟ್ನಿ ಸೇರಿಸಿ ಮತ್ತು ತುಪ್ಪವನ್ನು ಹರಡಿ.

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
https://twitter.com/SaakshaTv/status/1421675136722276356?s=19
https://twitter.com/SaakshaTv/status/1421661026471321603?s=19
https://twitter.com/SaakshaTv/status/1421297706144866314?s=19
https://twitter.com/SaakshaTv/status/1421267522712649730?s=19
#Saakshatv #cookingrecipe #gheedosa #alusaagu








