ಮೆಂತೆ ನೀರು ಕುಡಿಯುವುದರ ಆರೋಗ್ಯ ಪ್ರಯೋಜನಗಳು
ಮೆಂತೆ ಅಡಿಗೆ ಮನೆಯಲ್ಲಿರುವ ಅವಶ್ಯಕ ವಸ್ತುವಾಗಿದ್ದು, ನಮ್ಮ ಆಹಾರ ಪದಾರ್ಥಗಳಲ್ಲಿ ಹೆಚ್ಚಾಗಿ ಬಳಸುತ್ತೇವೆ. ಮೆಂತೆ ನೀರು ಬಹಳಷ್ಟು ಪ್ರಯೋಜನಕಾರಿಯಾಗಿದ್ದು ಇದು ನಮ್ಮನ್ನು ಅನೇಕ ರೋಗಗಳಿಂದ ರಕ್ಷಿಸುತ್ತದೆ. ಪ್ರತಿದಿನ ಬೆಳಿಗ್ಗೆ ಮೆಂತೆ ನೀರು ಕುಡಿಯುವುದರಿಂದ ಹೊಟ್ಟೆಗೆ ಸಂಬಂಧಿಸಿದ ಎಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ. ಮೆಂತೆ ನೀರು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು ಮತ್ತು ಅದನ್ನು ಹೇಗೆ ಬಳಸುವ ವಿಧಾನ ತಿಳಿಯೋಣ.
ರಾತ್ರಿಯಿಡೀ ಒಂದರಿಂದ ಒಂದೂವರೆ ಚಮಚ ಮೆಂತೆ ಬೀಜವನ್ನು ಒಂದು ಲೋಟ ನೀರಿನಲ್ಲಿ ನೆನೆಸಿಡಿ. ಬೆಳಿಗ್ಗೆ ಎದ್ದ ನಂತರ, ಈ ನೀರನ್ನು ಫಿಲ್ಟರ್ ಮಾಡಿ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ.
ಮೆಂತೆಯಲ್ಲಿ ಇರುವ ಫೈಬರ್ ರಕ್ತದಲ್ಲಿನ ಸಕ್ಕರೆ ಹೀರಿಕೊಳ್ಳುವಿಕೆಯನ್ನು ಕಡಿಮೆ ಮಾಡುತ್ತದೆ. ಇದು ದೇಹದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಮತ್ತು ಮಧುಮೇಹವನ್ನು ತಡೆಯುತ್ತದೆ.
ಮೆಂತೆ ನೀರು ಆಮ್ಲೀಯತೆ ಅಥವಾ ಗ್ಯಾಸ್ ಸಮಸ್ಯೆ ಇರುವವರಿಗೆ ಪರಿಣಾಮಕಾರಿಯಾಗಿದೆ. ಖಾಲಿ ಹೊಟ್ಟೆಯಲ್ಲಿ ಪ್ರತಿದಿನ ಬೆಳಿಗ್ಗೆ ಒಂದು ಲೋಟ ಮೆಂತ್ಯ ನೀರು ಕುಡಿಯುವುದರಿಂದ ಹೊಟ್ಟೆಯ ಕಿರಿಕಿರಿ ಕಡಿಮೆಯಾಗುತ್ತದೆ. ಅಜೀರ್ಣ ಅಥವಾ ಆಮ್ಲೀಯತೆಯಿಂದ ತ್ವರಿತ ಪರಿಹಾರ ಸಿಗುತ್ತದೆ.
ಮೆಂತೆ ನೀರಿನ ನಿಯಮಿತ ಸೇವನೆಯು ಮೂತ್ರಪಿಂಡದ ಕಲ್ಲುಗಳಿಗೆ ಪರಿಹಾರವನ್ನು ನೀಡುತ್ತದೆ. ಮೆಂತೆಯಲ್ಲಿರುವ ಅಂಶಗಳು ಕಿಡ್ನಿ ಕಲ್ಲುಗಳನ್ನು ಕರಗಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ಕಿಡ್ನಿ ಕಲ್ಲುಗಳನ್ನು ತೆಗೆಯಲು ಇದು ಮನೆಮದ್ದು ಆಗಿದ್ದರೂ, ವೈದ್ಯರ ಸಲಹೆ ಅತ್ಯಗತ್ಯ.
ಮೆಂತ್ಯ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಈ ಕಾರಣಕ್ಕಾಗಿ, ಶೀತ ಮತ್ತು ವೈರಸ್‌ಗಳಿಂದ ರಕ್ಷಿಸಲು ಮೆಂತೆ ನೀರು ಸಹಾಯ ಮಾಡುತ್ತದೆ. ಮೆಂತೆ ನೀರು ದೇಹದಲ್ಲಿ ಇರುವ ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಿವಾರಿಸುತ್ತದೆ ಮತ್ತು ಸಾಂಕ್ರಾಮಿಕ ರೋಗಗಳಿಂದ ನಮ್ಮನ್ನು ರಕ್ಷಿಸುತ್ತದೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಫೆನ್ನೆಲ್(ಸೋಂಪು) ಬೆರೆಸಿದ ಹಾಲು – ಕಣ್ಣಿನ ಸಮಸ್ಯೆ, ರಕ್ತ ಹೀನತೆ, ಹೃದಯ ಸಮಸ್ಯೆಗಳಿಗೆ ಪರಿಣಾಮಕಾರಿ https://t.co/hzoHSdYECx
— Saaksha TV (@SaakshaTv) October 3, 2021
ಹೊಸ ನಿಯಮಗಳ ಪ್ರಕಾರ ಯಾರು ಹೊಸ ಮೊಬೈಲ್ ಸಿಮ್ ಗೆ ಅರ್ಹರಲ್ಲ https://t.co/Rzj63HUqNd
— Saaksha TV (@SaakshaTv) October 3, 2021
ಗಸಗಸೆ ಪಾಯಸ https://t.co/0fE54apreQ
— Saaksha TV (@SaakshaTv) October 2, 2021
ಜೀರ್ಣಕ್ರಿಯೆ ಪ್ರಕ್ರಿಯೆಗೆ ನೆರವಾಗುವ ಆಹಾರ ಪದಾರ್ಥಗಳು https://t.co/fcolA1fBgo
— Saaksha TV (@SaakshaTv) October 2, 2021
#Saakshatv #healthtips #fenugreekwater