ವೈಟ್ ರೈಸ್ Vs ಬ್ರೌನ್ ರೈಸ್ – ಯಾವುದು ದೇಹಕ್ಕೆ ಉತ್ತಮ – ಇಲ್ಲಿದೆ ಪೌಷ್ಟಿಕತಜ್ಞೆ ನೀಡಿರುವ ಮಾಹಿತಿ
ವೈಟ್ ರೈಸ್ ವಿರುದ್ಧ ಬ್ರೌನ್ ರೈಸ್ ನ ಆರೋಗ್ಯದ ಪ್ರಯೋಜನಗಳ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿರುತ್ತವೆ. ಬ್ರೌನ್ ರೈಸ್ ಸಂಸ್ಕರಿಸದ ಆರೋಗ್ಯಕರ ಅನ್ನ ಎಂದು ಅನೇಕ ಜನರು ನಂಬುತ್ತಾರೆ. ಪಿಷ್ಟವನ್ನು ಒಳಗೊಂಡಿರುವ ವೈಟ್ ರೈಸ್ ಗೆ ಹೋಲಿಸಿದರೆ ಇದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ ಎಂದು ಹೇಳಲಾಗಿದೆ. ಆದರೆ ಈ ನಂಬಿಕೆಗಳು ನಿಜವಾಗಿಯೂ ಸತ್ಯವೇ?
ಪೌಷ್ಟಿಕತಜ್ಞೆ ರಶ್ಮಿ ಶರ್ಮಾ ಇತ್ತೀಚೆಗೆ ಇಂತಹ ಕೆಲವು ಪ್ರಶ್ನೆಗಳಿಗೆ ಇನ್‌ಸ್ಟಾಗ್ರಾಮ್‌ಗೆ ಉತ್ತರಿಸಿದ್ದಾರೆ. ಅವರು ನೀಡಿರುವ ಮಾಹಿತಿ ಇಲ್ಲಿದೆ.
ಬ್ರೌನ್ ರೈಸ್ ಸೇರಿದಂತೆ ಎಲ್ಲಾ ಧಾನ್ಯಗಳ ಹೊರ ಪದರವು ಫೈಟಿಕ್ ಆಮ್ಲವನ್ನು ಹೊಂದಿರುತ್ತದೆ. ಇದು ಪೋಷಕಾಂಶ-ವಿರೋಧಿ ಮತ್ತು ಜೀರ್ಣಕಾರಿ ತೊಂದರೆಗೆ ಕಾರಣವಾಗಬಹುದು. ಒಂದು ಧಾನ್ಯ ಭೂಮಿಗೆ ಬಿದ್ದಾಗ, ಅದು ಹೊಸ ಸಸ್ಯಕ್ಕೆ ಮೊಳಕೆಯೊಡೆಯುವಂತೆ ಪ್ರಕೃತಿ ಮಾಡುತ್ತದೆ. ತೇವಾಂಶ, ಉಷ್ಣತೆ ಮತ್ತು ಮಣ್ಣಿನ ಪರಿಸ್ಥಿತಿಗಳು ನೈಸರ್ಗಿಕವಾಗಿ ಹೊರಪದರ ಮೊಳಕೆಯೊಡೆಯುವಂತೆ ಮಾಡುತ್ತದೆ. ಬಿಳಿ ಅಕ್ಕಿಯಲ್ಲಿ ಈಗಾಗಲೇ ಹೊರಪದರ ತೆಗೆದು ಹಾಕಿರುವ ಕಾರಣ ದೀರ್ಘಕಾಲದ ಜೀರ್ಣಕಾರಿ ಸಮಸ್ಯೆಗಳಿರುವ ಜನರು ಬ್ರೌನ್ ರೈಸ್ ಗಿಂತ ವೈಟ್ ರೈಸ್ ಅನ್ನು ಜೀರ್ಣಿಸಿಕೊಳ್ಳಲು ಹೆಚ್ಚು ಸುಲಭವಾಗಿರುತ್ತದೆ.
ವೈಟ್ ರೈಸ್ ನಲ್ಲಿ ಗ್ಲುಟನ್ ಅಥವಾ ಇತರ ಯಾವುದೇ ಅನಾರೋಗ್ಯಕರ ಸಂಯುಕ್ತಗಳು ಇರುವುದಿಲ್ಲ.
ವೈಟ್ ರೈಸ್ ಅನ್ನು ಬೇಯಿಸಿ ಸೇವಿಸುವುದರಿಂದ ಸತುವು ಹೆಚ್ಚಾಗುತ್ತದೆ. ಆಹಾರದಲ್ಲಿ ಸಾಕಷ್ಟು ಸತು ಪಡೆಯುವುದು ಸಂತಾನೋತ್ಪತ್ತಿ ಆರೋಗ್ಯವನ್ನು ಬೆಂಬಲಿಸುತ್ತದೆ ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಗಮನಾರ್ಹ ಪ್ರಮಾಣದ ಮ್ಯಾಂಗನೀಸ್ ಅನ್ನು ಪಡೆಯಲು ಸಹ ನಿಮಗೆ ಸಹಾಯ ಮಾಡುತ್ತದೆ. ಪ್ರತಿ 1- ಕಪ್ ವೈಟ್ ರೈಸ್ 0.6 ಮಿಲಿಗ್ರಾಂ ಮ್ಯಾಂಗನೀಸ್ ಅನ್ನು ಹೊಂದಿರುತ್ತದೆ. ಜೀವಕೋಶದ ಕಾರ್ಯಕ್ಕೆ ಅಗತ್ಯವಾದ ಹಲವಾರು ಪ್ರೋಟೀನ್‌ಗಳನ್ನು ಮ್ಯಾಂಗನೀಸ್ ಸಕ್ರಿಯಗೊಳಿಸುತ್ತದೆ. ಇದು ನಿಮ್ಮ ದೇಹವು ಪೋಷಕಾಂಶಗಳಿಂದ ಶಕ್ತಿಯನ್ನು ಪಡೆಯಲು ಅನುವು ಮಾಡಿಕೊಡುತ್ತದೆ. ಗಾಯದ ಗುಣಪಡಿಸುವಿಕೆಯನ್ನು ಬೆಂಬಲಿಸಲು ಕಾಲಜನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ ಮತ್ತು ಜೀವಕೋಶದ ಹಾನಿಯನ್ನು ತಡೆಗಟ್ಟಲು ಉತ್ಕರ್ಷಣ ನಿರೋಧಕವಾಗಿ ಕಾರ್ಯನಿರ್ವಹಿಸುತ್ತದೆ.
ವೈಟ್ ರೈಸ್ ಗೆ ಹೋಲಿಸಿದರೆ ಬ್ರೌನ್ ರೈಸ್‌ನಲ್ಲಿ 80% ಹೆಚ್ಚಿನ ಆರ್ಸೆನಿಕ್ ಇದೆ. ಆರ್ಸೆನಿಕ್ ಒಂದು ಹೆವಿ ಮೆಟಲ್ ಮತ್ತು ಇದು ವಿಷತ್ವಕ್ಕೆ ಕಾರಣವಾಗಬಹುದು.
ವೈಟ್ ರೈಸ್ ರುಚಿಗೆ ಬ್ರೌನ್ ರೈಸ್ ಅಥವಾ ಇತರ ಯಾವುದೇ ಧಾನ್ಯಗಳೊಂದಿಗೆ ಹೋಲಿಕೆ ಇಲ್ಲ ಎಂದು ಚೌಧರಿ ಹೇಳಿದ್ದಾರೆ.
ಗ್ಲೈಸೆಮಿಕ್ ಸೂಚಿಯನ್ನು ನೋಡಿಕೊಳ್ಳಲು ನಿಮ್ಮ ವೈಟ್ ರೈಸ್ ಜೊತೆ ಯಾವಾಗಲೂ ಹೆಚ್ಚುವರಿ ತರಕಾರಿಗಳು ಅಥವಾ ಸ್ವಲ್ಪ ಪ್ರೋಟೀನ್ ಸೇರಿಸಿ ಎಂದು ಅವರು ಸಲಹೆ ನೀಡಿದ್ದಾರೆ.
ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್ ಪಡೆಯುವುದನ್ನು ಮರೆಯದಿರಿ. ಇದು ಸಾಕ್ಷಾಟಿವಿ ಕಳಕಳಿ.
ಉತ್ತಮ ಆದಾಯ ನೀಡುವ ಅಂಚೆ ಕಚೇರಿಯ 7 ಯೋಜನೆಗಳು#postofficeschemes https://t.co/Wi9syUu1S5
— Saaksha TV (@SaakshaTv) June 27, 2021
ಸಾಸಿವೆ ಎಣ್ಣೆಯ ಆರೋಗ್ಯ ಪ್ರಯೋಜನಗಳು#Saakshatv #healthtips #Mustardoil https://t.co/Wq9REM7Arz
— Saaksha TV (@SaakshaTv) June 27, 2021
ಕಡ್ಲೆಬೇಳೆ ಮಸಾಲೆ ವಡೆ#Saakshatv #cookingrecipe #masalavade https://t.co/tzZADVNKSM
— Saaksha TV (@SaakshaTv) June 27, 2021
ಮಾವಿನ ಹಣ್ಣಿನ ಸಿಪ್ಪೆಯ ಆರೋಗ್ಯ ಪ್ರಯೋಜನಗಳು#mangopeel #healthbenefits https://t.co/6Gee3KyOpO
— Saaksha TV (@SaakshaTv) June 26, 2021
ಟೋಕಿಯೊದಲ್ಲಿ ಕೊರೋನಾ ಸೋಂಕು ಹೆಚ್ಚಳ – ಒಲಿಂಪಿಕ್ ಕ್ರೀಡಾಕೂಟ ರದ್ದುಗೊಳಿಸುವಂತೆ ಆಗ್ರಹ#OlympicGames https://t.co/97mIY48IEe
— Saaksha TV (@SaakshaTv) June 30, 2021
#Saakshatv #healthtips #Whiterice #brownrice